ಪಾವಗಡ: ಮಹಿಳಾ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಹಠ ಮತ್ತು ಗುರಿ ರೂಪಿಸಿಕೊಂಡು ಗ್ರಾಮೀಣ ಪರಂಪರೆಯ ಕುಟುಂಬಗಳ ಗೌರವಕ್ಕೆ ಪಾತ್ರ ರಾಗಬೇಕು ಎಂದು ಶಾಸಕ ವೆಂಕಟರವಣಪ್ಪ ತಿಳಿಸಿದರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೋಜಿನಲ್ಲಿ ವತಿಯಿಂದ ಆಯೋಜಿಸಿದ ಸಾಂಸ್ಕೃತಿಕ, ಕ್ರೀಡಾ,ರಾಷ್ಟ್ರೀಯ ಸೇವಾ ಯೋಜನೆ , ಯೂತ್ ರೆಡ್ ಕ್ರಾಸ್, ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ಐಕ್ಯೂ ಎಸಿ ಕಾರ್ಯಕ್ರಮ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು.
ಸಮಾರೋಪ ಸಮಾರಂಭದಲ್ಲಿ ಅತಿ ಹೆಚ್ಚಿನದಾಗಿ ಮಹಿಳಾ ವಿದ್ಯಾರ್ಥಿಗಳು ಹಚ್ಚಳೇಯದ ಸಾಂಪ್ರದಾಯ ಸೀರೆ ಉಡುಪು ಗಳನ್ನು ಧರಿಸಿಕೊಂಡು ಕಾರ್ಯಕ್ರಮಕ್ಕೆ ಮೆರುಗು ತಂದಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಶಾಸಕ ವೆಂಕಟರವಣಪ್ಪ ಮಾತನಾಡುತ್ತ ಮಹಿಳಾ ವಿದ್ಯಾರ್ಥಿಗಳು ಉನ್ನತ ವಿದ್ಯೆಯನ್ನು ಅಭ್ಯಾಶಿಸಿ ತಂದೆ-ತಾಯಂದಿರಿಗೆ ಕೀರ್ತಿ ಗೌರವ ಪ್ರತಿಷ್ಠೆಗಳನ್ನು ಉಳಿಸುವಂತಹ ಜವಾಬ್ದಾರಿ ನಿಮ್ಮ ಹೆಗಲ ಮೇಲಿದ್ದು. ಉನ್ನತ ವಿದ್ಯಾರ್ಜನೆ ಮಾಡಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ನಿಮ್ಮ ಕೈಯಲ್ಲಿದೆ ನಿಮ್ಮ ಕೈಯಲ್ಲಿದೆ ಹೊರತು ಬೇರೆ ಯಾವ ಮಾರ್ಗಗಳಲ್ಲೂ ಇರುವುದಿಲ್ಲ ಜೀವನ ಸುಖಮಯ ವಾಗಿರ ಬೇಕೆಂದರೆ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರೆ ಜೀವನದಲ್ಲಿ ಎಂದಿಗೂ ಸೋಲು ಇರುವುದಿಲ್ಲ ಒಳ್ಳೆಯ ಕೆಲಸಕ್ಕೆ ನೂರಾರು ವಿಘ್ನಗಳು ಎಂಬಂತೆ ವಿದ್ಯಾರ್ಥಿ ದೆಸೆಯಿಂದಲೇ ನಾಯಕರ ಗುಣಗಳನ್ನು ಪಾಲಿಸಬೇಕಾಗಿದೆ ಬೇಕಾಗಿದೆ. ವಿದ್ಯೆಯಿಂದಲೇ ಅಭಿವೃದ್ಧಿ ಸಾಧ್ಯ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು
ಮಹಿಳಾ ವಿದ್ಯಾರ್ಥಿಗಳು ಕಲೆ, ಕ್ರೀಡೆ,ಸಾಂಸ್ಕೃತಿಕ, ರಾಷ್ಟ್ರೀಯ ಸೇವಾ ಯೋಜನೆ ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿದ್ಯಾರ್ಥಿ ದಿಸೆಯಲ್ಲಿಯೇ ನೈಪುಣ್ಯತೆಯನ್ನು ಪಡೆದು ಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಪಟ್ಟಣದ ಹೊರವಲಯ ದಲ್ಲಿರುವ ನೂತನವಾಗಿ ನಿರ್ಮಿಸಲ್ಪಟ್ಟ ಅಂತಹ ಕಾಲೇಜಿಗೆ ಬಸ್ ಪಾಸ್ ಮತ್ತು ಸಾರಿಗೆ . ಕಾಲೇಜಿನ ಕಾಂಪೌಂಡ್ ವ್ಯವಸ್ಥೆ. ಆವರಣದಲ್ಲಿ ಟಾರ್ ರಸ್ತೆ ಕಾಮಗಾರಿ ನಿರ್ಮಾಣಕ್ಕೆ 5 ಲಕ್ಷ ರೂ ಮಂಜೂರು ಮಾಡಿದರು. ಮುಂಬರುವ ದಿನಗಳಲ್ಲಿ ಕಾಲೇಜಿಗೆ ಬೇಕಾದಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದೆಂದು ತಿಳಿಸಿದರು.
ನಿವೃತ್ತ ಹೆಚ್ಚುವರಿ ನಿರ್ದೇಶಕರು ಡಾ.ವೈ ಎಸ್ ಎಚ್ ಎಸ್ ಹನುಮಂತರಾಯಪ್ಪ ಮಾತನಾಡಿ ಕಲ್ಪತರು ಬರಗಾಲ ನಾಡಿನ ಮಹಿಳಾ ವಿದ್ಯಾರ್ಥಿಗಳು ಸಬಲೀಕರಣ ರಾಗಲು ಮಹಿಳಾ ಕಾಲೇಜು ನಿರ್ಮಾಣವಾಗಿದೆ ಹಾಳುವ ಸರ್ಕಾರಗಳು ಮಹಿಳೆಯರಿಗೆ ಶಿಕ್ಷಣಕ್ಕಾಗಿ ವಿಶೇಷ ಕಾರ್ಯಕ್ರಮಗಳು ಯೋಜನೆಗಳನ್ನು ಹಮ್ಮಿಕೊಂಡಿವೆ ಮಹಿಳಾ ವಿದ್ಯಾರ್ಥಿಗಳು ಅತಿ ಹೆಚ್ಚಿನದಾಗಿ ವಿದ್ಯೆಯ ಮೇಲೆಯೇ ಧ್ಯಾನ ವಹಿಸಿ ಉನ್ನತ ವಿದ್ಯಾವಂತರಾದರೆ ಮಾತ್ರ ಸಮಾಜ ನಿಮ್ಮನ್ನು ಗುರುತಿಸಲು ಸಾಧ್ಯ ಎಂದು ಹಿತವಚನಗಳನ್ನು ನುಡಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಮಾರಪ್ಪ ಕೆ ಒ. ಪುರಸಭೆ ಸದಸ್ಯ ಬಿ ಎಂ ರವಿ ಕುಮಾರ.ಎಸ್ ಎಸ್ ಕೆ ಸಂಘ ಅಧ್ಯಕ್ಷ ಶ್ರೀನಿವಾಸ. ನಾಗರಾಜು. ಸಣ್ಣ ರಾಮರೆಡ್ಡಿ. ಪ್ರಾಧ್ಯಾಪಕರುಗಳಾದ ಈರಣ್ಣ . ಮಧುಕುಮಾರ್. ರಾಮಾಂಜಿನಮ್ಮ. ಕಿರಣ್. ಮಿನು . ಸುಮಾ ದೇವಿ.ಎಚ್ ರಾಜಣ್ಣ. ಅನಂತರಾಜು. ಸಿ ವರ್ಣ.ವಿ ನರಸಿಂಹಮೂರ್ತಿ.ಸಣ್ಣ ಒಬಳಯ್ಯ . ಆನಂದ ಸ್ವಾಮಿ ನಾಗೇಂದ್ರಪ್ಪ. ತಿಪ್ಪೇಸ್ವಾಮಿ. ಸತೀಶ್.ಪ್ರಕಾಶ್. ಗಿರೀಶ.ಹಾಗೂ ಕಾಲೇಜಿನ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.