ತುಮಕೂರು: ೨೦೧೮ರ ಚುನಾವಣೆ ಸಮಯದಲ್ಲಿ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರು ಮತದಾರರಿಗೆ ನಕಲಿ ಬಾಂಡ್ ವಿತರಣೆ ಮಾಡಿದ್ದಾರೆ ಎಂಬ ಆರೋಪ ಸಂಬಂಧ ಹೈಕೋರ್ಟ್ ಏಕಸದಸ್ಯ ಪೀಠ ನೀಡಿರುವ ತೀರ್ಪು ಐತಿಹಾಸಿಕವಾಗಿದ್ದು ಸತ್ಯಕ್ಕೆ ಸಂದ ಜಯವಾಗಿದೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ಹೇಳಿದರು.
ನಗರದ ಕಮಲಕೃಪದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೌರಿಶಂಕರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಹೈಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ. ರಾಮ ನವಮಿ ದಿನ ನ್ಯಾಯಾಮೂರ್ತಿಗಳಾದ ಸುನಿಲ್ ಯಾದವ್ ಅವರ ಏಕಸದಸ್ಯ ಪೀಠ ತೀರ್ಪು ನೀಡಿದ್ದು ಚುನಾವಣೆ ಸಮಯದಲ್ಲಿ ಅಕ್ರಮ ಎಸಗಬಾರದು ಎಂಬುದಕ್ಕೆ ಸ್ಪಷ್ಟ ಸಂದೇಶ ನೀಡಿದೆ ಎಂದರು.
೨೦೧೮ ರ ಎಂಎಲ್‌ಎ ಚುನಾವಣೆಯಲ್ಲಿ ೩೨ ಸಾವಿರ ವಯಸ್ಕರು ಹಾಗೂ ೧೬ ಸಾವಿರ ಶಾಲಾ ಮಕ್ಕಳಿಗೆ ಇನ್ಷೂರೆನ್ಸ್ ಬಾಂಡ್ ವಿತರಣೆ ಮಾಡಿ ಮತದಾರರನ್ನು ಸೆಳೆಯುವ ಕೆಲಸ ಮಾಡಿದ್ದರು. ನಕಲಿ ಬಾಂಡ್‌ಗಳನ್ನು ವಿತರಣೆ ಮಾಡುವ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಚುನಾವಣಾ ಅಧಿಕಾರಿಗಳಿಗೆ ಚುನಾವಣಾ ಅಕ್ರಮ ಎಸಗಿರುವ ಬಗ್ಗೆ ದೂರು ನೀಡಿದ್ದರು.
೨೦೧೮ ರ ಮೇ ೧೨ ಕ್ಕೆ ಚುನಾವಣೆ ಇತ್ತು. ಮೇ ೮ ಕ್ಕೆ ನಕಲಿ ಬಾಂಡ್ ರದ್ದು ಮಾಡಿದಾಗ ಹಿರೇಹಳ್ಳಿ ಮಹೇಶ್ ಹಾಗೂ ಶಾರದಮ್ಮ ಎಂಬುವವರು ಸುದ್ದಿಗೊಷ್ಠಿ ನಡೆಸಿ ಇದು ಒರಿಜಿನಲ್ ಬಾಂಡ್, ನಕಲಿ ಬಾಂಡ್ ಅಲ್ಲ ಎಂದು ಹೇಳುತ್ತಾರೆ. ಗೂಳೂರಿನ ಜಿಪಂ ಸದಸ್ಯ ಪಾಲನೆತ್ರಯ್ಯ ಎಂಬಾತ ಬಾಂಡ್‌ಗಳನ್ನು ತಮ್ಮ ಕಾರಿನಲ್ಲಿ ತೆಗೆದುಕೊಂಡು ಹೋಗುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ನಾವು ಕೋರ್ಟ್ ಮೆಟ್ಟಿಲೇರಿದ್ದವು. ಅನೇಕ ಕಾರಣಗಳಿಂದಾಗಿ ಹಾಗು ಕರೋನಾದಿಂದಾಗಿ ಕೋರ್ಟ್ ಕಲಾಪಗಳು ಸರಿಯಾಗಿ ನಡೆಯದ ಕಾರಣ ಪ್ರಕರಣದ ವಿಚಾರಣೆ ತಡವಾಗಿ ತೀರ್ಪು ಬರಲು ತಡವಾಯಿತು. ಇದೀಗ ಚುನಾವಣೆ ಸಮಯದಲ್ಲಿ ಕೋರ್ಟ್ ತೀರ್ಪು ನೀಡಿರುವುದು ಸತ್ಯಕ್ಕೆ ದೊರೆತ ಜಯವಾಗಿದೆ ಎಂದರು.
ಐವರು ಅನರ್ಹರು
ಇನ್ನು ಪ್ರಕರಣ ಸಂಬAಧ ಶಾಸಕ ಗೌರಿಶಂಕರ್ ಸೇರಿದಂತೆ ಇತರೆ ಐದು ಮಂದಿಯನ್ನು ಸಹ ಕೋರ್ಟ್ ಅನರ್ಹಗೊಳಿಸಿದೆ. ಹಿರೇಹಳ್ಳಿ ಮಹೇಶ್, ರೇಣುಕಮ್ಮ, ಪಾಲನೇತ್ರಯ್ಯ ಸೇರಿ ಐದು ಮಂದಿಯನ್ನು ಅನರ್ಹಗೊಳಿಸಲಾಗಿದ್ದು ಹೈ ಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಕೋರ್ಟ್ ಒಂದು ತಿಂಗಳು ಅವಕಾಶ ನೀಡಿದೆ. ಶಾಸಕತ್ವದಿಂದ ಅನರ್ಹಗೊಳಿಸಿರುವುದು ಈಗಿನ ಅವಧಿಗೆ ಸೀಮಿತವೇ ಮುಂದಿನ ಚುನಾವಣೆಗೂ ಅನ್ವಯವಾಗುತ್ತದೆಯೇ ಎನ್ನುವುದು ಸ್ಪಷ್ಟವಾಗಿಲ್ಲ ಎಂದರು.

*
ಪ್ರಕರಣ ಸಂಬಂಧ ಹೈಕೋರ್ಟ್ ಈಗಾಗಲೇ ವಿಚಾರಣೆ ನಡೆಸಿ ತೀರ್ಪು ನೀಡಿದೆ. ಪ್ರಕರಣದಲ್ಲಿ ಶಾಸಕ ಗೌರಿಶಂಕರ್ ಅವರ ಪಾತ್ರವಿರುವುದು ಸಾಬೀತಾಗಿದೆ. ಹೀಗಿರುವಾಗ ಕ್ಷೇತ್ರದಲ್ಲಿ ಮತ್ತೆ ಅವರಿಗೆ ಟಿಕೆಟ್ ನೀಡುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಇದರಲ್ಲಿ ನಾವು ಮಧ್ಯೆ ಪ್ರವೇಶಿಸುವುದಿಲ್ಲ. ಸುಪ್ರೀಂಕೋರ್ಟ್ ನಲ್ಲಿ ಈಗಾಗಲೇ ಕೆವಿಯಟ್ ಸಲ್ಲಿಸಿದ್ದೇವೆ.
ಸುರೇಶ್ ಗೌಡ, ಮಾಜಿ ಶಾಸಕ.