ತುಮಕೂರು: ತುಮಕೂರು ನಗರದ ಒಂದನೇ ವರ‍್ಡಿನ ಸೇರಿದ ದಾಸಮುದ್ದಯ್ಯನ ಪಾಳ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ೫೦ ಲಕ್ಷ ರು ಅನುದಾನದಲ್ಲಿ ಸಿಸಿ ರಸ್ತೆ, ಚರಂಡಿ ನರ‍್ಮಾಣ ಕಾಮಗಾರಿಗೆ ಶಾಸಕ ಜಿ.ಬಿ.ಜೋತಿಗಣೇಶ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಇಡೀ ನಗರದಲ್ಲಿಯೆ ಅತ್ಯಂತ ದೊಡ್ಡ ವರ‍್ಡು ಎಂದರೆ ೧ನೇ ವರ‍್ಡು,ನಗರದ ಸುತ್ತಮುತ್ತ ಇರುವ ಹಳ್ಳಿಗಳ ಸಂಪಕ್ತ ರಸ್ತೆಗಳು ಈ ವರ‍್ಡಿನ ಮೂಲಕ ಹಾದು ಹೋಗುವುದರಿಂದ ಮುಖ್ಯರಸ್ತೆಗಳ ಆಭಿವೃದ್ದಿಗೆ ಮೊದಲು ಒತ್ತು ನೀಡಲಾಗಿದೆ.
ತದನಂತರ ಬಡಾವಣೆಯ ಇತರೆ ರಸ್ತೆಗಳ ಕಡೆಗೆ ಗಮನಹರಿಸಲಾಗುವುದು. ಈ ಭಾಗಕ್ಕೆ ಹೊಂದಿಕೊಂಡ0ತೆ ಇರುವ ಪಂಚನಾಥ ರಾಯರ ಪಾಳ್ಯ, ಹೊನ್ನೇನಹಳ್ಳಿ, ಪಿ.ಎನ್.ಆರ್.ಪಾಳ್ಯ, ಮರಳೇನಹಳ್ಳಿ, ಹೌಸಿಂಗ್ ಬರ‍್ಡಿಗೆ ಸಂರ‍್ಕ ಕಲ್ಪಿಸುವ ರಸ್ತೆಯನ್ನು ಪಿಡಬ್ಲö್ಯಡಿ ವತಿಯಿಂದ ಕೈಗೊಳ್ಳಲಾಗಿದೆ.ಸರಕಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಕಾರಣ ವಿಶೇಷ ಅನುದಾನ ವನ್ನು ತಂದು ಈ ರಸ್ತೆಗಳ ಅಭಿವೃದ್ದಿಗೆ ವ್ಯಯಿಸಲಾಗುತ್ತಿದೆ ಎಂದರು.
ನಗರದ ಹೊರವಲಯದಲ್ಲಿ ಈ ವರ‍್ಡು ಬರುವ ಕಾರಣ ಕುಡಿಯುವ ನೀರು ಮತ್ತು ಯುಜಿಡಿ ಸಮಸ್ಯೆ ರ‍್ವೆ ಸಾಮಾನ್ಯ ಎನ್ನುವಂತಾ ಗಿದೆ. ಹಾಗಾಗಿ ಸ್ಥಳೀಯವಾಗಿಯೇ ಒಂದು ೨೦೦ ಎಲ್.ಪಿ.ಸಿ.ಡಿ ಸಾರ‍್ಥ್ಯದ ಕೊಳಚೆ ನೀರು ಶುದ್ದೀಕರಣ ಘಟಕ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ರಾಂಟ್ ಹಾಕಿ ವರ‍್ಡಿನ ಸಮಗ್ರ ಅಭಿವೃದ್ದಿಗೆ ಮುಂದಾಗುವುದಾಗಿ ತಿಳಿಸಿದರು.
ಬಿಜೆಪಿ ಹಿರಿಯ ಮುಖಂಡರಾದ ಬಿ.ಎಸ್.ಯಡಿಯೂರಪ್ಪ ಅವರು ರಾಜಕೀಯ ನಿವೃತ್ತಿ ಎಂಬುದು ಸುಳ್ಳು, ವಯಸ್ಸಿನ ಕಾರಣ ಆ ಮಾತುಗಳನ್ನಾಡಿದ್ದಾರೆ.ಇಂದು, ಮುಂದು, ಎಂದೆಂದು ಬಿ.ಎಸ್.ಯಡಿಯೂರಪ್ಪ ಅವರೇ ನಮ್ಮ ನಾಯಕರು, ಅವರ ನೇತೃತ್ವದಲ್ಲಿಯೇ ನಾವು ಮುಂದಿನ ಚುನಾವಣೆಯನ್ನು ಎದುರಿಸಲಿದ್ದೇವೆ.ಯಡಿಯೂರಪ್ಪ ಅವರಿಗೆ ತನ್ನ ಜಾತಿ ಮೀರಿನ ಮತದಾರರನ್ನು ಆರ‍್ಷಿಸುವ ಶಕ್ತಿ ಇದೆ ಎಂದರು.
ಹಿರಿಯ ರಾಜಕಾರಣಿಗಳು ಸಕ್ರಿಯ ರಾಜಕಾರಣದಿಂದ ನೈಪಥ್ಯಕ್ಕೆ ಸರಿದರೆ ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ದೇವೇ ಗೌಡರು ೯೨ ರ‍್ಷದಲ್ಲೂ ಸಕ್ರಿಯ ರಾಜಕಾರಣದಲ್ಲಿ ಇದ್ದು ಕೆಲಸ ಮಾಡುತ್ತಿದ್ದಾರೆ.ಅಂತಹ ಹಿರಿಯರ ಮರ‍್ಗರ‍್ಶನ ಕಿರಿಯರಿಗೆ ಅತಿ ಅಗತ್ಯ.ವಿಜಯೇಂದ್ರ ಅವರು ಈಗಾಗಲೇ ಬಿಜೆಪಿ ಯುವ ಮರ‍್ಚಾ ರಾಜ್ಯ ಉಪಾಧ್ಯಕ್ಷರಾಗಿ ಕರ‍್ಯನರ‍್ವಹಿಸುತಿದ್ದಾರೆ.ಅವರಿಗೆ ತಮ್ಮ ಕ್ಷೇತ್ರದಲ್ಲಿ ಸ್ರ‍್ಧಿಸಲು ಅವಕಾಶ ನೀಡಿದ್ದಾರೆ. ಇದರಲ್ಲಿ ತಪ್ಪೇನಿಲ್ಲ.
ಈ ವೇಳೆ ಹಿರಿಯರಾದ ಬಿಂದು ಶೇಖರ್ ಓಡೆಯರ್,ವರ‍್ಡಿನ ಕೌನ್ಸಿಲರ್ ನಳಿನಾ, ಮುಖಂಡರಾದ ಇಂದ್ರಕುಮಾರ್, ಚೇತನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.