Thursday, 12th December 2024

ಇದೇ ಕೊನೆಯ ಚುನಾವಣೆ, ಮತ್ತೆ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ

ಮಧುಗಿರಿ : ಇದೇ ನನ್ನ ಕೊನೆಯ ಚುನಾವಣೆ ಮತ್ತೆ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆದ ಕೆ.ಎನ್. ರಾಜಣ್ಣ ನವರು ತಿಳಿಸಿದರು.

ತಾಲೂಕಿನ ಕವಣದಾಲ ಸಮೀಪ. ಚೆನ್ನಮ್ಮನ ಪಾಳ್ಯ ಕೊಲ್ಲಾಪುರದಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಕಾರ್ಯಕರ್ತ ರನ್ನುದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ೨೦೦ ಯೂನಿಟ್ ಉಚಿತ ವಿದ್ಯುತ್ ಪ್ರತಿ ಯೊಬ್ಬರಿಗೂ ೨೦೦೦ ಹಣ ನೀಡುವುದು ನಮ್ಮ ಪ್ರಣಾಳಿಕೆಯಲ್ಲಿ ಸೇರಿದ್ದು ಈ ಕಾರ್ಯವನ್ನು ಕಾರ್ಯ ಕರ್ತರು ಪ್ರತಿ ಯೊಬ್ಬರಿಗೂ ಮನವರಿಕೆ ಮಾಡಿಕೊಡುವಂತೆ ಮನವಿ ಮಾಡಿದರು.

ಮಧುಗಿರಿ ತಾಲೂಕಿನಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ೨೫,೦೦೦ ಕುಟುಂಬಗಳಿಗೆ ಸಾಲ ನೀಡಲಾಗಿದೆ. ೨೦೧೩-೧೮ರ ಅವಧಿ ಯಲ್ಲಿ ೧೬೪೦೦ ಮನೆಗಳನ್ನು ನಿರ್ಮಿಸಲಾಗಿದೆ. ಪ್ರತಿ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ, ಪ್ರತಿಯೊಬ್ಬರಿಗೂ ವೃದ್ಧಾಪ್ಯ ವೇತನ, ಬಿಪಿಎಲ್ ಕಾರ್ಡುಗಳನ್ನು ನೀಡಲಾಗಿದೆ. ನನ್ನ ಐದು ವರ್ಷಗಳ ಅವಧಿಯಲ್ಲಿ ಜನಪರ ಕೆಲಸ ಮಾಡಲಾಗಿದೆ ಮುಂದೆ ಶಾಸಕರಾಗಿ ಆಯ್ಕೆಯಾದರೆ ಮದುಗಿರಿಯನ್ನು ಜಿಲ್ಲಾ ಕೇಂದ್ರ ವನ್ನಾಗಿ ಮಾಡುವುದು, ತಾಲೂಕಿನ ೫೪ ಕೆರೆಗಳಿಗೆ ನೀರು ತುಂಬಿಸುವುದು, ರಾಯದುರ್ಗ ರೈಲ್ವೆ ಯೋಜನೆಗೆ ಚಾಲನೆ ನೀಡುವುದು ನನ್ನ ಮೊದಲ ಆದ್ಯತೆ ಜನತೆ ನನ್ನ ಮೇಲಿನ ಅಪ ಪ್ರಚಾರಗಳಿಗೆ ಕಿವಿಗೊಡದೇ, ಹಣದ ಅಮಿಷ ಮರೆತು ಕಾಂಗ್ರೆಸ್ ಪಕ್ಷವನ್ನು ಆಶೀರ್ವದಿ ಸುವಂತೆ ತಿಳಿಸಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಜಿ.ಜೆ ರಾಜಣ್ಣ ಮಾತನಾಡಿ ಡಿಸಿಸಿ ಬ್ಯಾಂಕ್ ವತಿಯಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ೧೦೮ ಮಂದಿಗೆ ಉದ್ಯೋಗ ನೀಡಲಾಗಿದೆ. ೧೮೦ ಕೋಟಿ ರೂಗಳ ಸಾಲ ಮನ್ನಾ ಆಗಿದೆ. ೨೦೦ ಕೋಟಿ ರೂ ಸಾಲ ನೀಡಲಾಗಿದ್ದು, ಕೆಎನ್ ರಾಜಣ್ಣ ನವರು ಶಾಸಕರಾಗಿ ಆಯ್ಕೆಯಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮತ್ತೆ ಸಾಲ ಮನ್ನಾ ಆಗುತ್ತದೆ. ಹಿನ್ನಲೆಯಲ್ಲಿ ಮುಖಂಡರು, ಕಾರ್ಯಕರ್ತರು ಭಿನ್ನಾಭಿಪ್ರಾಯ ಬದಿಗೊತ್ತಿ ಕೆ.ಎನ್ ರಾಜಣ್ಣನವರನ್ನು ಗೆಲ್ಲಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ರಾಜ್ಯ ಸಹಕಾರ ಮಹಾಮಂಡಲದ ಮಾಜಿ ಅಧ್ಯಕ್ಷ ಎನ್ ಗಂಗಣ್ಣ, ತಾ. ಪಂ ಮಾಜಿ ಅಧ್ಯಕ್ಷ ಮಹಾ ಲಿಂಗಯ್ಯ, ಮುಖಂಡರುಗಳಾದ ನಾರಾಯಣಪ್ಪ ನಾರಾಯಣಗೌಡ, ಬಸವರಾಜು, ಕಾಂತರಾಜು, ಪ್ರಸನ್ನ ಕುಮಾರ್, ರಾಜಗೋಪಾಲ್ ಮತ್ತಿತರರು ಹಾಜರಿದ್ದರು.