ತುಮಕೂರು: ಇತರೆ ಜಾತಿ, ಧರ್ಮಗಳಲ್ಲಿರುವಂತೆ ಲಿಂಗಾಯತ ಸಮಾಜದಲ್ಲೂ ಇರುವ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ನಾವೆಲ್ಲರೂ ಲಿಂಗಾಯತರೆ0ಬ ಅಭಿಮಾನ ಬೆಳೆಸಿಕೊಂಡು ಒಗ್ಗಟ್ಟಿನಿಂದ ಇರಬೇಕಾದ ಅವಶ್ಯಕತೆಯಿದೆ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಮಹಾದೇವ ಬಿದರಿ ಹೇಳಿದರು.
ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಹಾಗೂ ನಗರದ ಇತರೆ ವೀರಶೈವ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ, ಜಗಜ್ಯೋತಿ ಶ್ರೀ ಬಸವೇಶ್ವರರ ಮತ್ತು ಕಾಯಕಯೋಗಿ ಶ್ರೀ ಸಿದ್ಧರಾಮೇಶ್ವರರ ಜಂಟಿ ಉತ್ಸವದ ಅಂಗವಾಗಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ವೀರಶೈವ ಧರ್ಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರು, ಅಲ್ಲಮ ಪ್ರಭು, ಅಕ್ಕಮಹಾದೇವಿಯವರ ಕಾಲದಲ್ಲಿ ವಿವಿಧ ವೃತ್ತಿ ಮಾಡುತ್ತಿದ್ದವರು ಸೇರಿ ಲಿಂಗಾಯತ ಸಮಾಜವಾಗಿದೆ. ಎಲ್ಲಾ ವೃತ್ತಿಗಳನ್ನು ನಾವು ಗೌರವಿಸಬೇಕು. ಲಿಂಗಾಯತರಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ, ಎಲ್ಲರೂ ಸರಿಸಮಾನರು ಎಂಬ ಭಾವನೆ ಬೆಳೆಸಿಕೊಳ್ಳ ಬೇಕು ಎಂದು ಹೇಳಿದರು.
ತುಮಕೂರು ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸಿ, 1963ರಲ್ಲಿ ಆರಂಭವಾದ ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಂದಿನಿAದ ಇಂದಿನವರೆಗೂ ವಿವಿಧ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದೆ, ಜೊತೆಗೆ ವೀರಶೈವ ಸಮಾಜದ ಅಂಗಸAಸ್ಥೆಗಳು ಆರಂಭವಾಗಿ ಸೇವಾಕಾರ್ಯಗಳನ್ನು ವಿಸ್ತರಿಸಿಕೊಂಡು ಮಾಡಲಾಗುತ್ತಿದೆ ಎಂದರು.
ಹಿರಿಯರ ಸಲಹೆಯಂತೆ ಜಗದ್ಗುರು ಶ್ರೀ ರೇಣುಕಾಚಾರ್ಯರ, ಜಗಜ್ಯೋತಿ ಶ್ರೀ ಬಸವೇಶ್ವರರ ಮತ್ತು ಕಾಯಕಯೋಗಿ ಶ್ರೀ ಸಿದ್ಧರಾಮೇಶ್ವರರ ಜಂಟಿ ಉತ್ಸವ ಆಚರಿಸಲಾಗುತ್ತಿದೆ. ಮುಂದೆ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಉತ್ಸವವನ್ನೂ ಈ ಮಹನೀಯರ ಉತ್ಸವದೊಂದೊಗೆ ಆಚರಿಸಲಾಗುವುದು ಎಂದು ಹೇಳಿದರು.
ಶಿವಗಂಗೆಯ ಮೇಲಣಗವಿ ಮಠಾಧ್ಯಕ್ಷರಾದ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಮಾಜದ ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಗೌರವ ಕಾರ್ಯದರ್ಶಿ ಅತ್ತಿ ರೇಣುಕಾನಂದ, ಮಾಜಿ ಅಧ್ಯಕ್ಷರಾದ ಕೆ.ವೈ.ಸಿದ್ಧಲಿಂಗಮೂರ್ತಿ, ಟಿ.ಕೆ. ನಂಜುoಡಪ್ಪ, ಸಿ.ವಿ.ಮಹದೇವಯ್ಯ, ಮಾಜಿ ಕಾರ್ಯದರ್ಶಿ ಟಿ.ಎಸ್.ಜಗನ್ನಾಥ್, ವಿವಿಧ ವೀರಶೈವ ಸಂಘ ಸಂಸ್ಥೆಗಳ ಮುಖಂಡರಾದ ಪಾರ್ವತಮ್ಮ ಜಗದೀಶ್, ಎನ್.ಬಿ.ಪ್ರದೀಪ್‌ಕುಮಾರ್, ಹೆಚ್.ಎನ್.ಚಂದ್ರಶೇಖರ್, ಸಾವಿತ್ರಮ್ಮ ಮುದ್ದಪ್ಪ, ಕೆ.ಎಲ್.ಗೀತಾ, ಕೆ,ಜೆ.ರುದ್ರಪ್ಪ, ಟಿ.ಸಿ.ಓಹಿಲೇಶ್ವರ್, ಕೋರಿ ಮಂಜುನಾಥ್, ಟಿ.ಆರ್.ಸದಾಶಿವಯ್ಯ, ಮೋಹನ್‌ಕುಮಾರ್ ಪಟೇಲ್, ನಾ.ಚಂ.ಗ0ಗಾಧರ ಶಾಸ್ತ್ರೀ , ಟಿ.ಆರ್.ನಟರಾಜು, ನಳಿನಾ ಶಿವಾನಂದ್, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಟಿ.ಜೆ.ಗಿರೀಶ್, ಜಿ.ಮಲ್ಲಿಕಾರ್ಜುನಯ್ಯ, ಜ್ಯೋತಿಪ್ರಕಾಶ್, ಎಂ.ಜಿ.ಸಿದ್ಧರಾಮಯ್ಯ, ನಿಶ್ಚಲ್ ಮೊದಲಾದವರು ಭಾಗವಹಿಸಿದ್ದರು.