Wednesday, 27th November 2024

ಹದಿಮೂರು ಕೋಟಿ ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಗೌರಿಶಂಕರ್ ಚಾಲನೆ

ತುಮಕೂರು: ಗ್ರಾಮಾಂತರ ಸುಮಾರು 20 ವರ್ಷಗಳಿಂದ ಯಾವುದೇ ರೀತಿಯ ಅಭಿವೃದ್ಧಿ ಕಾಣದೆ ನನೆಗುದಿಗೆ ಬಿದ್ದಿದ್ದ, ಬಹು ವರ್ಷಗಳ ಬೇಡಿಕೆಯಾಗಿದ್ದ ಬಸವಣ್ಣನ ಗುಡಿ ಸರ್ಕಲ್ ನಿಂದ ಕೌತ ಮಾರನಹಳ್ಳಿ, ದಿಣ್ಣೆ ಪಾಳ್ಯ, ಕೊಟ್ಟಿಗೆ ಗೊಲ್ಲಹಳ್ಳಿ, ದೊಡ್ಡೆ ಗೌಡನಪಾಳ್ಯ, ಶ್ರೀ ಆದಿಶಕ್ತಿ ಕೆಂಪಮ್ಮನ ದೇವಾಲಯ, ಗುಣಿಗೊಲ್ಲಹಳ್ಳಿ, ಐನಾಪೂರ, ನೇರಳಾಪುರ ಗ್ರಾಮದ ಮೂಲಕ ಹಾದು ಹೋಗಿ ಸಾಸಲು ಗ್ರಾಮ ಸಂಪರ್ಕಿಸುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಡಿ.ಸಿ ಗೌರಿಶಂಕರ್, ಸೋಮವಾರ ಚಾಲನೆ ನೀಡಿ,ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಸ್ಥಳದಲ್ಲಿ ಸೂಕ್ತ ಪರಿಹಾರ ಒದಗಿಸಿದರು.
ಈ ರಸ್ತೆ ಅಭಿವೃದ್ಧಿಯಿಂದಾಗಿ ಸಾವಿರಾರು ರೈತರಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರುಗಳಿಗೆ ಅನುಕೂಲವಾಗಿದ್ದು, ಗ್ರಾಮಸ್ಥರು ಗಳು ಶಾಸಕರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷರಾದ ರಾಮಚಂದ್ರಪ್ಪ, ಗೂಳೂರು ಜಿಲ್ಲಾ ಪಂಚಾಯತ್ ಉಸ್ತುವಾರಿಗಳಾದ ಪಾಲನೆತ್ರಯ್ಯ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಗೋವಿಂದರಾಜು, ಮಸ್ಕಲ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರೂಪ, ಮೋಹನ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪವಿತ್ರ ಶಿವಪ್ರಸಾದ್, ಲೋಕೇಶ್, ಹೇಮಂತ್, ವೆಂಕಟೇಶ್, ಮುಖಂಡರುಗಳಾದ ನಾಗರಾಜು, ಬಸವರಾಜು, ಶಿವಣ್ಣ, ನಾಗಣ್ಣ, ರವಿ ಕಿರಣ್, ಕುಶಾಲ್, ಗೋಪಾಲ್, ಹಾಗೂ ನೂರಾರು ಕಾರ್ಯಕರ್ತರು ಮತ್ತು ಗ್ರಾಮಸ್ಥರು ಹಾಜರಿದ್ದರು.