Thursday, 28th November 2024

ಚುನಾವಣೆ ಬಂದಾಗ ರಾಜಕೀಯ ಧ್ರುವೀಕರಣ ಸಾಮಾನ್ಯ

ಗುಬ್ಬಿ : ಚುನಾವಣೆ ಹತ್ತಿರ ಬಂದಾಗ ರಾಜಕೀಯ ಧ್ರುವೀಕರಣ ಆಗುವುದು ಸಾಮಾನ್ಯ ಎಂದು ಶಾಸಕ ಎಸ್ ಅರ್ ಶ್ರೀನಿವಾಸ್ ತಿಳಿಸಿದರು.

ಗುಬ್ಬಿ ತಾಲ್ಲೂಕಿನ ಎಂ.ಎನ್ ಕೋಟೆ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ  ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ನಾನು ಎಲ್ಲಿ ಹೋಗುತ್ತೇನೆ ಎಂಬುದೇ ಇನ್ನೂ ನನಗೆ ಗೊತ್ತಿಲ್ಲಾ ಸ್ವಾಭಿಮಾನ ಇರುವವರು ಅವರಿಗೆ ಗೌರವ ಸಿಗುವ ಕಡೆ ಹೋಗುತ್ತಾರೆ ಎಂದು ತಿಳಿಸಿದ ಅವರು,    ಇನ್ನೂ ತಾಲ್ಲೂಕಿನಲ್ಲಿ ಭೂ ಹಗರಣ ವಿಚಾರದಲ್ಲಿ ಗ್ರೇಡ್ 2 ತಾಸೀಲ್ದಾರ್ ಗೆ ರೆಕಾರ್ಡ್ ರೂಮ್ ಬರುವುದರಿಂದ ಅವರೆ ಪೊಲೀಸ್ ಠಾಣೆಗೆ ದೂರು ಕೊಡಬೇಕು ಈಗಾಗಲೇ ಒಮ್ಮೆ ಕೊಟ್ಟಿರುವುದರಿಂದ ಮತ್ತೊಮ್ಮೆ ಕೊಡಲು ವಕೀಲರ ರನ್ನು ಸಂಪರ್ಕ ಮಾಡಿ ನಂತರ ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ. ಇನ್ನೂ 620 ಎಕರೆ ದಾಖಲೆಯಲ್ಲಿ ಸುಳ್ಳು ಸೃಷ್ಟಿಸಿ ರುವುದರಿಂದ ಅದರ ಬಗ್ಗೆ ಕಾನೂನು ಕ್ರಮ ತೆಗೆದು ಕೊಳ್ಳಲೆ ಬೇಕಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಇನ್ನೂ 6 ಕೋಟಿಯಷ್ಟು ರಸ್ತೆ ಕಾಮಗಾರಿಗಳು ನಡೆಯಬೇಕಿದೆ ಈ ರಸ್ತೆ ಕೊಡ ವರ್ಷದ ಹಿಂದೆಯೇ ಆಗಬೇಕಿತ್ತು ಅಧಿಕಾರಿಗಳು ಮಾಡಿಸಿಲ್ಲ ಈಗಾಗಲೇ ಅವರ ಬಗ್ಗೆ ಸಹ ಕ್ರಮ ಕೈ ಗೊಂಡಿದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಶಶಿಕಲಾಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಯೋಗೀಶ್ , ಉಪಾಧ್ಯಕ್ಷ ದೀಲೀಪ್ ಕುಮಾರ್ ಗ್ರಾಮ ಪಂಚಾಯಿತಿ ಸದಸ್ಯರಾದ ಎಂ ಎನ್ ಭೀಮಶೆಟ್ಟಿ , ಸ ಎಂ.ವಿ.ರವೀಶ್ , ಸಿದ್ದಗಂಗಯ್ಯ ಕಾಂತರಾಜು , ಸಿದ್ದಗಂಗಮ್ಮ ಕಲ್ಲೇಶ್ , ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಲಿಂಗಪ್ಪ , ಮುಖಂಡರಾದ ಎಂ.ಎಸ್.ನಾಗರಾಜಗುಪ್ತ , ಎಂ ಎಲ್ ಶಿವಕುಮಾರ್ ದೇವರಾಜು , ತೇಜಯ್ಯ , ವಿಷ್ಣುವರ್ಧನ್ ಪಾಂಡುರಂಗಯ್ಯ , ಗುತ್ತಿಗೆದಾರ ಬೇಟೆಗೌಡ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.