Thursday, 12th December 2024

ಆಧುನಿಕವಾಗಿ ಕಲೆಗೆ ಬೆಲೆ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ: ರಾಯಸಂದ್ರ ರವಿಕುಮಾರ

ತುಮಕೂರು : ಆಧುನಿಕವಾಗಿ  ಕಲೆಗೆ ಬೆಲೆ ಕಟ್ಟಬೇಕಾದ ಪರಿಸ್ಥಿತಿ ಬಂದಿದ್ದು, ಕಲೆಯನ್ನು  ಉಳಿಸಿ, ಬೆಳೆಸಬೇಕಾದದ್ದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್ ಹೇಳಿದರು.
ಪ್ರೆಸ್ ಕ್ಲಬ್ ತುಮಕೂರು ಹಾಗೂ ವರ್ಣೋದಯ ಆರ್ಟ್‌ ಗ್ರೂಪ್ ಟ್ರಸ್ಟ್ ಸಹಯೋಗದೊಂದಿಗೆ ನಗರದ ಪ್ರೆಸ್ ಕ್ಲಬ್ ಆವರಣ ( ಆಲದ ಮರದ ಪಾರ್ಕ್)ದಲ್ಲಿ ಆಯೋಜಿಸಿದ್ದ ನಿಸರ್ಗದಿಂದ ನಿಸರ್ಗ ದೆಡೆಗೆ ಚಿತ್ರಕಲಾ ಶಿಬಿರ ಹಾಗೂ ಪ್ರದರ್ಶನದಲ್ಲಿ ಮಾತನಾಡಿ, ಈ ಫೈನ್ ಆರ್ಟ್ಸ್ ಹಾಗೂ ನನಗೂ ಅವಿನಾಭವ ಸಂಬಂಧವಿದೆ. ಕಲೆ ಸಾಧಕನ ಸ್ವತ್ತೇ ಹೊರತು  ಸೋಮಾರಿಯ ಸ್ವತ್ತಲ್ಲ.  ಇಂದು ಕಲೆ  ಅಪ್ ಗ್ರೇಡ್ ಆಗಿದೆ. ಅನಿಮೇಷನ್ ಯುಗ ಪ್ರಾರಂಭವಾಗಿದೆ. ಕಲೆಯಿಂದ ಅನೇಕ ಜನರು ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ಪತ್ರಕರ್ತರು ಎಂದರೇ ಟೀಕೆ ಮಾಡುವವರು ಅಂದು ಕೊಂಡಿದ್ದೇವೆ. ಅದರ ಹೊರತಾಗಿ ನಾವು ಸಹ ಸಾಮಾಜಿಕ ಕಾರ್ಯಗಳನ್ನು ಮಾಡುತ್ತೇವೆ ಎಂದು ಪ್ರೆಸ್ ಕ್ಲಬ್ ನವರುತೋರಿಸಿಕೊಟ್ಟಿದ್ದಾರೆ.  ಬೆಂಗಳೂರಿನ ಪ್ರೆಸ್ ಕ್ಲಬ್ ನ ಸರಿಸಮಾನಾಗಿ ತುಮಕೂರು ಪ್ರೆಸ್ ಕ್ಲಬ್ ಬೆಳೆಯಲಿದೆ  ಎಂದರು.
ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಯೋಗಾನಂದ್ ಪ್ರಮಾಣ ಪತ್ರ ವಿತರಿಸಿ ಮಾತ ನಾಡಿ,  ನಗರದ ಹೃದಯ ಭಾಗವಾಗಿರುವ ಆಲದ ಮರದ ಪಾರ್ಕ್ ನ ಲ್ಲಿ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಾಲಿಕೆಯು ಕೈ ಜೋಡಿಸಲಿದ್ದು ಉತ್ತಮ ಕಾರ್ಯಗಳನ್ನು ಮಾಡಲಾಗುವುದು.  ಇಂತಹ ಶಿಬಿರಗಳು ನಿರಂತರವಾಗಿ ನಡೆಯಲಿ ಎಂದು ಆಶಿಸುತ್ತೇನೆ  ಎಂದರು.
ಆರ್ ಓ  ಪ್ಲಾಂಟ್ ನಿರ್ಮಾಣಕ್ಕೆ ಜಾಗ ಗುರುತಿಸಿ ಎಂದು ಕಾರ್ಪೊರೇಟರ್ ಗಿರಿಜಾ ಧನಿಯಾಕುಮಾರ್ ಗೆ ಸೂಚಿಸಿದರಲ್ಲದೆ ಪ್ಲಾಂಟ್ ನಿರ್ಮಾಣಕ್ಕೆ ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಪೋರೆಟರ್ ಗಿರಿಜಾ ಧನಿಯಾಕುಮಾರ್ ಮಾತನಾಡಿ, ಪೇಂಟಿಂಗ್, ಯೋಗಾ ಸೇರಿ ಪ್ರತಿ ಕಾರ್ಯಕ್ರಮಗಳನ್ನು ಪ್ರೆಸ್ ಕ್ಲಬ್ ನವರು ನಡೆಸಿಕೊಂಡು ಬರುತ್ತಿದ್ದು ಇದು ನಿರಂತರ ವಾಗಿ ಮುಂದುವರೆಯಲಿ  ಎಂದರು.
ವರ್ಣೋದಯ ಆರ್ಟ್ ಗ್ರೂಪ್ ಅಧ್ಯಕ್ಷರು ಹಾಗೂ ರವೀಂದ್ರ ಕಲಾನಿಕೇತನದ ನಿವೃತ್ತ ಪ್ರಾಚಾರ್ಯ ಕಿಶೋರ್ ಕುಮಾರ್ ಮಾತನಾಡಿ,  ಎಲ್ಲರ ಸಹಕಾರವಿದ್ದಾಗ ಏನಾದರೂ ಮಾಡಲು ಸಾಧ್ಯ.ಚಿತ್ರಕಲಾ ಶಿಬಿರಕ್ಕೆ ನಮ್ಮೊಂದಿಗೆ ಪ್ರೆಸ್ ಕ್ಲಬ್ ನವರು ಜೊತೆಗೂಡಿದ್ದು ಮುಂದೆಯೂ ಸಹ ಮತ್ತಷ್ಟು ಕಾರ್ಯಕ್ರಮ ಗಳನ್ನು ಆಯೋಜನೆ ಮಾಡಲಾಗುವುದು. ಎಂದು ಹೇಳಿದರು.
ಪ್ರೆಸ್ ಕ್ಲಬ್ ಶಶಿಧರ್ ಎಸ್. ದೋಣಿಹಕ್ಲು  ಮಾತನಾಡಿ, ಇದು ದೊಡ್ಡ ಮಟ್ಟದ ಅಭಿಯಾನ ನಡೆಸಲು ಇಂದು ಅಡಿಪಾಯ ಹಾಕಿದ್ದೇವೆ. ಈ ಕಾರ್ಯ ಕ್ರಮವನ್ನು ನಗರದಾಧ್ಯಂತ ಹಮ್ಮಿಕೊಳ್ಳಲಾಗುವುದು. ಸ್ವಚ್ಛ ತುಮಕೂರು, ಸ್ಮಾರ್ಟ್ ತುಮಕೂರು ನಿರ್ಮಾಣ ಮಾಡಲು ಎಲ್ಲರ ಸಹಕಾರ ಅಗತ್ಯ ವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸರ್ವೋದಯ ಪಿ ಯು ಕಾಲೇಜಿನ ಎನ್ ಸಿಸಿ ಕಮಾಂಡೆಂಟ್ ಪ್ರದೀಪ್ ಕುಮಾರ್, ಶಿಬಿರದ ನಿರ್ದೇಶಕ ಮಲ್ಲಪ್ಪ ಹಳ್ಳಿ ಮಾತನಾ ಡಿದರು.
ಹಿರಿಯ ಪತ್ರಕರ್ತ ಮಣ್ಣೆರಾಜು, ವರ್ಣೋದಯ ಆರ್ಟ್ ಗ್ರೂಪ್ ನ ಅರುಣ್ ಕುಮಾರ್ ಮತ್ತಿತರರಿದ್ದರು. ನಿಹಾರಿಕಾ ಪ್ರಾರ್ಥಿಸಿದರು. ವರ್ಣೋದಯ ಆರ್ಟ್ ಗ್ರೂಪ್ ಟ್ರಸ್ಟ್ ಸದಸ್ಯರು, ಪ್ರೆಸ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.  ಶಿಬಿರದಲ್ಲಿ 24 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.