Friday, 22nd November 2024

ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲು ಬಿಜೆಪಿ ಸರಕಾರ ಯಶಸ್ವಿ

ಚಿಕ್ಕನಾಯಕನಹಳ್ಳಿ : ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲು ಬಿಜೆಪಿ ಸರಕಾರ ಯಶಸ್ವಿ ಯಾಗಿದೆ. ಆ ಮೂಲಕ ಸಮುದಾಯಕ್ಕೆ ನ್ಯಾಯ ಒದಗಿಸುವ ಪ್ರಯತ್ನವನ್ನು ಮುಖ್ಯಮಂತ್ರಿಗಳು ಮಾಡಿದ್ದರೆಂದು ಸಚಿವ ಜೆ.ಸಿ.ಮಾಧುಸ್ವಾಮಿ ಪ್ರತಿಪಾದಿಸಿದರು.

ನವೋದಯ ಕಾಲೇಜಿನ ಆವರಣದಲ್ಲಿ ಶನಿವಾರ ನಡೆದ ಬಿಜೆಪಿ ಜಿಲ್ಲಾ ಮಟ್ಟದ ಎಸ್.ಟಿ.ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಅಹಿಂದಾ ಚಾಂಪಿಯನ್ ಸಿದ್ದರಾಮಯ್ಯನವರು ಎಸ್ಟಿ ಮೀಸಲಾತಿಯನ್ನು ಶೇ ೭ ಕ್ಕೆ ಹೇಗೆ ಹೆಚ್ಚುಸುತ್ತೀರೆಂದು ಪ್ರಶ್ನಿಸಿದ್ದಾರೆ. ಈ ಪ್ರಕ್ರಿಯೆಯು ನಮ್ಮ ರಾಜಕೀಯ ಇಚ್ಚಾಶಕ್ತಿಯ ಭಾಗವಾಗಿದ್ದು ಹೇಗೆ ಹೆಚ್ಚಿಸಬೇಕೆಂದು ರಾಜ್ಯ ಸರಕಾರಕ್ಕೆ ತಿಳಿದಿದೆ. ಮೀಸಲಾತಿ ಹೆಚ್ಚಳದ ಅನುಷ್ಠಾನದ ಮುಂದಿನ ಕಾನೂನು ಪ್ರಕ್ರಿಯೆಯ ಭಾಗವಾಗಿ ವರದಿಯನ್ನು ಕೇಂದ್ರ ಸರಕಾರದ ಮುಂದಿಟ್ಟು ಒತ್ತಡ ಹೇರುವ ಕೆಲಸವನ್ನು ಮಾಡಿ ದ್ದೇವೆ. ಕಾಂಗ್ರೆಸ್‌ನವರಿಗೆ ಇದನ್ನು ನಿಭಾಯಿಸುವ ಶಕ್ತಿ ಇಲ್ಲ ಎಂದು ಮೂದಲಿಸಿ ಬಿಜೆಪಿಗೆ ನೀವು ಮತ್ತೊಮ್ಮೆ ಆಶೀರ್ವದಿಸಿದರೆ ಡಬಲ್ ಇಂಜಿನ್ ಸರಕಾರದಿಂದ ಈ ಕೆಲಸ ಸುಲಭ ವಾಗಲಿದೆ ಎಂದು ಮತಯಾಚಿಸಿದರು.

*

ಹಾಸನದವರ ಹಿಡಿತದಿಂದ ಹೇಮಾವತಿಯನ್ನು ಬಿಡಿಸಿದ್ದು ನಾನೇ ಹೇಮಾವತಿಯನ್ನು ಹಾಸನದವರ ಹಿಡಿತ ದಿಂದ ತಪ್ಪಿಸಿ ನಮ್ಮ ಪಾಲಿನ ೨೪ ಟಿಎಂಸಿ ನೀರನ್ನು ನಾನು ತುಮಕೂರು, ಹಾಸನದ ಉಸ್ತುವಾರಿಯಾದ ನಂತರ ಪ್ರಥಮವಾಗಿ ಪಡೆದಿದ್ದೇವೆ. ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಇದರ ಶ್ರೇಯಸ್ಸು ನಮಗೆ ಸಲ್ಲುತ್ತದೆ ಎಂದು ಬೆನ್ನುತಟ್ಟಿಕೊಂಡು ಎತ್ತಿನಹೊಳೆ, ಅಪ್ಪರ್ ಭದ್ರ ಯೋಜನೆಗಳಲ್ಲಿ ನಮ್ಮ ತಾಲ್ಲೂಕಿಗೆ ನೀರನ್ನು ಸರಿಯಾಗಿ ನಿಗದಿ ಪಡಿಸದೆ ಅನ್ಯಾಯ ಮಾಡಿದ್ದರು. ಅದನ್ನು ಸರಿ ಪಡಿಸಲು ನಾವೇ ಬರಬೇಕಾಯಿತು. ಮೂರು ಯೋಜನೆಗಳಿಂದ ತಾಲ್ಲೂಕಿಗೆ ೬ ಟಿಎಂಸಿ ನೀರು ನಿಗದಿಯಾಗಿದೆ. ಅದಕ್ಕೆ ನೀವು ಮತ ನೀಡಬೇಕೆಂದರು.

ಎತ್ತಿನಹೊಳೆ ಯೋಜನೆ ಬಹುತೇಕ ಪೂರ್ಣಗೊಂಡು ನೀರು ಹರಿಸುವ ಕೆಲಸ ಮಾಡಬೇಕಿತ್ತು. ಬೈರಗೊಂಡ್ಲುವಿನಲ್ಲಿ ಜಲಾಶಯ ನಿರ್ಮಾಣಕ್ಕೆ ಸಂಬAಧಿಸಿದAತೆ ಭೂ ಸ್ವಾಧೀನ ಪ್ರಕ್ರಿಯೆ ನಡೆಸಲು ರೈತರ ಮನವೊಲಿಕೆ ಕೆಲಸ ಯಶಸ್ವಿಯಾಗಿಲ್ಲ. ಇದರಿಂದ ಯೋಜನೆಗೆ ಹಿನ್ನಡೆಯಾಗಿದೆ. ಇದು ಮಾಜಿ ಉಪ ಮುಖ್ಯಮಂತ್ರಿಯೊಬ್ಬರ ನಿಷ್ಕಿçಯತೆಗೆ ಕನ್ನಡಿಯಾಗಿದೆ ಎಂದು ಪರಮೇಶ್ವರ್ ಹೆಸರೇಳದೆ ಟೀಕಿಸಿ, ರಾಜ್ಯದಲ್ಲಿ ಸ್ವತಂತ್ರವಾಗಿ ಜೆಡಿಎಸ್ ಅಧಿಕಾರಕ್ಕೇರುವುದಿಲ್ಲ. ಹೀಗಾಗಿ ಅವರು ಘೋಷಿಸುವ ಯಾವ ಯೋಜನೆಯನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಕುಟುಕಿದರು.

ಮನೆ ಮನೆಗೆ ತೆರಳಿ ಸಾಧನೆ ತಿಳಿಸಿ: ಅಟಲ್ ಬಿಹಾರಿ ವಾಜಪೇಯಿ ಅವರು ಉತ್ತಮ ಆಡಳಿತ ನೀಡಿದರು ಅವರಿಗೆ ಹಿನ್ನಡೆಯಾಯಿತು. ಬಿಜೆಪಿ ಮತ್ತೋಮ್ಮೆ ಅಧಿಕಾರಕ್ಕೇರಲು ಕಾರ್ಯಕರ್ತರು ಮನೆ ಮನೆಗೆ ತೆರಳಿ ಸರಕಾರದ ಸಾಧನೆಗಳನ್ನು ತಿಳಿಸಬೇಕು. ವಿವಿಧ ಸಮುದಾಯಗಳ ಅಭಿವೃದ್ದಿಗೆ ಬಿಜೆಪಿ ಶ್ರಮಿಸುತ್ತಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ನುಡಿದರು.

ಸಮಾವೇಶದಲ್ಲಿ ನರಸಿಂಹನಾಯಕ, ಹೇಮಲತ, ಕುಮಾರಸ್ವಾಮಿ, ಸಂದೀಪ್, ಮಹೇಶ್, ಗಂಗಾಧರ್, ಪಾವಗಡ ಶಿವು, ಇದ್ದರು.