ತಿಪಟೂರು: ನಗರದ ಪ್ರತಿಷ್ಠಿತ ಕಲ್ಪತರು ವಿದ್ಯಾಸಂಸ್ಥೆಯ ಕಲ್ಪತರು ಸೆಂಟ್ರಲ್ ಶಾಲೆಯ ೨೦೨೨-೨೩ನೇ ಶೈಕ್ಷಣಿಕ ಸಾಲಿನ ೧೦ನೇ ತರಗತಿಯ (ಸಿ.ಬಿ.ಎಸ್.ಇ) ಫಲಿತಾಂಶ ಪ್ರಕಟ ವಾಗಿದ್ದು ಈ ಬಾರಿಯೂ ಶೇ. ೧೦೦ ಫಲಿತಾಂಶವನ್ನು ತನ್ನದಾಗಿಸಿ ಕೊಂಡಿದೆ.
ವಿದ್ಯಾರ್ಥಿಗಳು ತಮ್ಮ ಶ್ರಮ ಮತ್ತು ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷರು ಮತ್ತು ಪದಾಧಿ ಕಾರಿಗಳ ಸಹಕಾರ, ಪ್ರಾಂಶುಪಾಲರು ಹಾಗು ಸಿಬ್ಬಂದಿ ವರ್ಗದವರ ಮಾರ್ಗದÀರ್ಶ ನದಡಿಯಲ್ಲಿ ಸತತವಾಗಿ ೧೭ನೇ ಬಾರಿಯೂ ನೂರಕ್ಕೆ ನೂರರಷ್ಟು ಫಲಿತಾಂಶ ವನ್ನು ಗಳಿಸಿ ಶಾಲೆ. ಪೋಷಕರು ಮತ್ತು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.
ಒಟ್ಟು ವಿದ್ಯಾರ್ಥಿಗಳು – ೧೧೬
ಅತ್ಯುನ್ನತ ಶ್ರೇಣಿ – ೪೪
ಉನ್ನತ ಶ್ರೇಣಿ – ೬೯
ದ್ವಿತೀಯ ಶ್ರೇಣಿ – ೦೩
ಈ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗು ಪೋಷಕರಿಗೆ ಕಲ್ಪತರು ವಿದ್ಯಾಸಂಸ್ಥೆಯ ಅಧ್ಯ಼ಕ್ಷರಾದ ಪಿ ಕೆ ತಿಪ್ಪೇರುದ್ರಪ್ಪ ಮತ್ತು ಪದಾಧಿಕಾರಿಗಳು, ಪ್ರಾಂಶುಪಾಲರಾದ ದೇವಿಕ ಬಿ.ಸ್ವಾಮಿ ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.