Sunday, 15th December 2024

ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಉತ್ತಮ ಬೆಳವಣಿಗೆ

ತುಮಕೂರು: ಇದು ವಿಜ್ಙಾನ ಯುಗವಾಗಿದ್ದು ಮಕ್ಕಳು ವಿಜ್ಙಾನದ ಜ್ಙಾನವನ್ನು ಹೆಚ್ಚಾಗಿ ಹೊಂದಬೇಕಿದೆ. ಇತ್ತೀಚಿನ ದಿನಗಳಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗಳು ಆಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು
ಮಾರುತಿ ವಿದ್ಯಾಕೇಂದ್ರದ ಕಾರ್ಯದರ್ಶಿ ಮುರುಳೀಧರ ಅಭಿಪ್ರಾಯಪಟ್ಟರು.

ರಾಷ್ಟಿçÃಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಸ್ಮಾರ್ಟ್ಸಿಟಿ ಪ್ರಾಜೆಕ್ಟ್ ಆಶ್ರಯದೊಂದಿಗೆ ಮಾರುತಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ವಿಜ್ಙಾನ ವಸ್ತು ಪ್ರದರ್ಶನದಲ್ಲಿ ಮಾತ ನಾಡಿ, ಯಾವುದೇ ವಿಚಾರವಾದರೂ ಅದನ್ನ ಓದಿ ಕಲಿಯುವುದಕಿಂತ ಪ್ರಯೋಗದ ಮೂಲಕ ಕಲಿಯುವುದು ವಿದ್ಯಾರ್ಥಿಗಳ ಜ್ಙಾನಾರ್ಜನೆಗೆ ಹೆಚ್ಚು ಸಹಕಾರಿಯಾಗುತ್ತದೆ ಎಂದರು.

ಶಾಲೆಯ ಪ್ರಾಂಶುಪಾಲ ಉಮಾಪ್ರಸಾದ್ ಮಾತನಾಡಿ, ಮಕ್ಕಳು ವಿಜ್ಞಾನಕ್ಕೆ ಸಂಬ0ಧಿಸಿ ದ0ತೆ ಹಲವು ರೀತಿಯ ವಿನ್ಯಾಸದ ಮಾದರಿಯನ್ನು ಅದ್ಬುತವಾಗಿ ಮಾಡಿದ್ದಾರೆ. ಈ ಕಾರ್ಯಕ್ರಮದಿಂದ ವಿಜ್ಞಾನದ ಅರಿವು ಮೂಡುತ್ತದೆ. ಮಕ್ಕಳು ಸೋಷಿಯಲ್ ಮೀಡಿಯಾ ಗಳಲ್ಲಿ ಕಳೆದುಹೋಗುತ್ತಾರೆ ಎಂಬ ಆರೋಪ ಕೇಳಿ ಬರುತ್ತಿರುವ ನಡುವೆಯಯೇ ಮಕ್ಕಳು ಆಸಕ್ತಿವಹಿಸಿ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ.

ತುಮಕೂರು ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ತೋರಿಸಿದ್ದಾರೆ. ಸ್ಮಾರ್ಟ್ ಸಿಟಿ ಹೇಗೆ ಕೆಲಸ ಮಾಡುತ್ತದೆ ಮುಂದಿನ ದಿನಗಳಲ್ಲಿ ಹೇಗೆ ಬೆಳೆಯುತ್ತದೆ ಎಂಬುದನ್ನು ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ ಎಂದರು.

೧ ರಿಂದ ೮ನೇ ತರಗತಿಯ ವಿದ್ಯಾರ್ಥಿಗಳು ವಿಜ್ಞಾನ ಪಠ್ಯ ಪುಸ್ತಕದ ಕೆಲವು ವಿಜ್ಞಾನ ಮಾದರಿಗಳನ್ನು ಪ್ರದರ್ಶನ ಮಾಡಿ, ಸಾರ್ವಜನಿಕರಿಗೆ ಅದರ ವಿವರಣೆ ನೀಡಿದರು. ಎಂಟನೇ ತರಗತಿಯ ವಿದ್ಯಾರ್ಥಿ ಟಿ.ಎಸ್.ಪ್ರತೀಕ್, ಅಭಯ್ ಹಾಗೂ ಸ್ನೇಹಿತರು ಗಾಳಿಯಿಂದ ವಿದ್ಯುತ್ ಉತ್ಪಾಧನೆ ಮಾಡುವುದು ಹೇಗೆ ಎಂಬುದರ ಬಗ್ಗೆ ಪ್ರಯೋಗದ ಮೂಲಕ ವಿವರಿಸಿದರು. ೯ನೇ ವಿದ್ಯಾರ್ಥಿ ಗಳು ತುಮಕೂರು ಸ್ಮಾರ್ಟ್ಸಿಟಿ ಯೋಜನೆಯ ವಿವಿಧ ಕಾಮಗಾರಿಗಳ ಮಾದರಿಯನ್ನು ಪ್ರದರ್ಶಿಸಿದರು.

ಶಿಕ್ಷಕರಾದ ಕಲ್ಪನಾ, ಪ್ರಭಾ, ದೀಪ, ಚಿತ್ರಲೇಖ, ಅರುಣ, ಜಯಂತಿ, ಮಂಜುಳ, ಲಲಿತಾ, ಹೇಮ, ಸದಾಶಿವಯ್ಯ, ದೇವರಾಜು, ಶಿಕ್ಷಕರು, ಸಿಬ್ಬಂದಿ ಭಾಗವಹಿಸಿದ್ದರು.