ಗುಬ್ಬಿ: ಆ.26 ರಂದು ತುಮಕೂರಿನ ಗಾಜಿನ ಮನೆಯಲ್ಲಿ ಜಗದ್ಗುರು ಜ್ಞಾನಾನಂದಪುರಿ ಸ್ವಾಮೀಜಿಗಳ ಗುರುವಂದನೆ ಹಾಗೂ ತಿಗಳ ಕ್ಷತ್ರಿಯ ಸಮಾಜದ ಜಾಗೃತಿ ಸಮಾವೇಶ ನಡೆಯಲಿದೆ ಎಂದು ರಾಜ್ಯ ತಿಗಳ ಕ್ಷತ್ರಿಯ ಸಮಾಜದ ರಾಜ್ಯ ಅಧ್ಯಕ್ಷ ನರೇಂದ್ರ ಬಾಬು ತಿಳಿಸಿದರು.
ಗುಬ್ಬಿ ತಾಲೋಕಿನ ಹಿಂಡಿಸ್ಕೆರೆ ಗ್ರಾಮದ ತಿಗಳ ಕ್ಷತ್ರಿಯ ಸಮಾಜದ ಸಮುದಾಯ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಪ್ರಬಲ ಸಮುದಾಯ ವಾಗಿದ್ದರೂ ಸಹ ಕೇವಲ ಇಬ್ಬರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ತಿಗಳ ಕ್ಷತ್ರಿಯ ಸಮುದಾಯವನ್ನು ಪ್ರವರ್ಗ ಒಂದಕ್ಕೆ ಸೇರಿಸಿದರೆ ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಈ ಸಮಾವೇಶಕ್ಕೆ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಪಾಂಡಿಚೇರಿ ಮುಖ್ಯಮಂತ್ರಿ ರಂಗಸ್ವಾಮಿ, ಸಭಾಪತಿ ಆರ್.ಸೆಲ್ವಂ, ಮಾಜಿ ಮುಖ್ಯಮಂತ್ರಿ ಯಡಿ ಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿಕೆಶಿ ಸೇರಿದಂತೆ ಹಲವು ರಾಜ್ಯದ ಮಂತ್ರಿಗಳು, ವಿವಿಧ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ ಅವರು ತುಮಕೂರು, ರಾಮನಗರ, ಕೋಲಾರ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಜಿಲ್ಲೆಯಲ್ಲಿ ಅತಿ ಹೆಚ್ಚು ತಿಗಳ ಜನಾಂಗದವರು ಈ ಎಲ್ಲಾ ಭಾಗಗಳಿಂದ ಬಂಧುಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ನಮ್ಮ ಸಮುದಾಯವು ಮಕ್ಕಳ ವಿದ್ಯಭ್ಯಾಸಕ್ಕಾಗಿ ಹಾಸ್ಟೆಲ್ ತೆರೆದಿದೆ ಜೊತೆಗೆ ಒಂದನೇ ತರಗತಿಯಿಂದ ಬಿ ಎಡ್ ವರೆಗೂ ವಿದ್ಯಾಭ್ಯಾಸಕ್ಕಾಗಿ ಶಾಲೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದ ಅವರು ನಮ್ಮ ಸಮುದಾಯಕ್ಕೆ ನಿಗಮ ಮಂಡಳಿ ನೇಮಕ ಮಾಡದೇ ಇದ್ದರೂ ಸಹ ಸಮಾಜದ ಮಠಕ್ಕೆ ಅನುದಾನ ಬಿಡುಗಡೆ ಮಾಡಿದ್ದು, ದೇವಾಲಯಗಳು, ಸಮುದಾಯ ಭವನಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿ ಎಲ್ಲಾ ಸಮುದಾಯವನ್ನು ಸಮಾನ ಮನಸ್ಕರಂತೆ ನೋಡಿದ್ದಾರೆ ಎಂದು ತಿಳಿಸಿದರು.
ರಾಜ್ಯ ತಿಗಳ ಕ್ಷೇಮಾಭಿವೃದ್ದಿ ಸಂಘ ಜನಾಂಗದ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜಗದ್ಗುರು ಶ್ರಿ ಜ್ಞಾನಾನಂದ ಪುರಿ ಸ್ವಾಮೀಜಿಗಳ ಗುರುವಂದನೆ ಹಾಗೂ ತಿಗಳ ಕ್ಷತ್ರಿಯ ಸಮಾಜದ ಜ, ಸಮಾಜದ ಬಂಧುಗಳು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ವಿಶ್ವ ಕ್ಷತ್ರಿಯ ಮಹಾ ಸಂಸ್ಥಾನದ ಅಧ್ಯಕ್ಷ ಸೂರ್ಯಪ್ರಕಾಶ್, ರೇವಣ್ಣ ಸಿದ್ದಯ್ಯ, ಲಕ್ಷ್ಮಯ್ಯ, ಮಂಜಣ್ಣ, ರಾಮಣ್ಣ, ಸಮುದಾಯದ ಯಜಮಾನರು ಉಪಸ್ಥಿತರಿದ್ದರು.