ತುಮಕೂರು:ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಅಪಾರ ಬೆಂಬಲಿಗ ರೊಂದಿಗೆ ಗುರುವಾರ ನಾಮಪತ್ರ ಸಲ್ಲಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮಾಂತರ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವಿನ ಯುದ್ದ ವಾಗಿದೆ. ತಮ್ಮ ಹತ್ತು ವರ್ಷಗಳ ಅವಧಿ ಯಲ್ಲಿ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ಎಂದು ಕೇಳಿ, ನೇರವಾಗಿ ಚುನಾವಣೆಯಲ್ಲಿ ಎದುರಿಸಲಾಗದೆ ಹಿಂಬಾಗಿಲಿನ ಮೂಲಕ ನನ್ನನ್ನು ಸೋಲಿಸುವ ಹುನ್ನಾರ ನಡೆಸಿದ್ದಾರೆ ಎಂದರು.
ನಾನು ಚುನಾವಣೆಗೋಸ್ಕರ ಬಂದಿಲ್ಲ.ಕೋರೋನದಂತಹ ಸಂಕಷ್ಟದ ಸಂದರ್ಭದಲ್ಲಿ ಮನೆ ಮಠ ಬಿಟ್ಟು ನಿಮ್ಮ ಸೇವೆ ಮಾಡಿದ್ದೇನೆ.ಮನೆ ಮಗನಾಗಿ ಕೆಲಸ ಮಾಡಿದ್ದೇನೆ.ಶಾಸಕ ಎಂಬ ಹಮ್ಮು, ಬಿಮ್ಮು ಎಂದಿಗೂ ತೋರಿಸಿಲ್ಲ.ಆದರೆ ಮಾಜಿ ಶಾಸಕರ ಸಾಧನೆ ಎಂದರೆ ಕ್ಷೇತ್ರದ 3500ಜನ ಯುವಕರ ಮೇಲೆ ಕೇಸು ಹಾಕಿದ್ದು,ನಿಮ್ಮ ಮನೆ ಬಾಗಿಲಿಗೆ ಮತ ಕೇಳಲು ಬಂದಾಗ ನಿಮ್ಮ ಸಾಧನೆ ಏನು ಎಂದು ಪ್ರಶ್ನೆ ಮಾಡಿ ಎಂದು ಕರೆ ನೀಡಿದರು.
ಈ ವೇಳೆ ಡಿ.ಸಿ.ವೇಣುಗೋಪಾಲ್,ರಾಹುಲ್ಗೌಡ, ಹಾಲೆನೂರು ಲೇಪಾಕ್ಷ, ಹಾಲನೂರು ಆನಂತ, ಬೆಳಗುಂಬ ವೆಂಕಟೇಶ್,ಹಿರೇಹಳ್ಳಿ ಮಹೇಶ್, ಹರೀಶ್ ನರಸಾಪುರ, ಗೂಳೂರು ಉಸ್ತುವಾರಿ ಪಾಲನೇತ್ರಯ್ಯ,ನರುಗನಹಳ್ಳಿ ವಿಜಯಕುಮಾರ್,ಮಂಜುನಾಥ್ ಹೊನ್ನುಡಿಕೆ,ದೀಪು,ರಾಮಣ್ಣ, ಚಿಕ್ಕಣ್ಣನಹಟ್ಟಿ ದೇವಾಲಯದ ಆರ್ಚಕ ಪಾಪಣ್ಣ, ಅಲ್ಪಸಂಖ್ಯಾತರ ಘಟಕದ ತನ್ವೀರ್,ಅಜ್ಹಾಮ್,ಗೂಳೂರು ಕೃಷ್ಣೇಗೌಡ, ಚಿಕ್ಕಸಾರಂಗಿ ರವಿ,ಪುಟ್ಟರಾಜು ಗೂಳೂರು, ವಿಷ್ಣುವರ್ಧನ್,ನಗರಪಾಲಿಕೆ ಸದಸ್ಯರಾದ ಹೆಚ್.ಡಿ.ಕೆ.ಮಂಜುನಾಥ್, ಶ್ರೀನಿವಾಸ್, ಉಪಮೇಯರ್ ನರಿಸಿಂಹಮೂರ್ತಿ, ರವೀಶ್ ಜಹಂಗೀರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.