
126 ನರ್ಸಿಂಗ್ ವಿದ್ಯಾರ್ಥಿನಿಯರು ಹಾಸ್ಟೆಲ್ ನಲ್ಲಿದ್ದು, ಊಟ, ತಿಂಡಿ ಸೇರಿದಂತೆ ಇನ್ನಿತರ ಸವಲತ್ತು ನೀಡದೆ ವಾರ್ಡನ್ ಬೇಜವಾಬ್ದಾರಿ ತೋರಿದ್ದರು. ಈ ಬಗ್ಗೆ ನರ್ಸಿಂಗ್ ಹಾಸ್ಟೆಲ್, ಸಮಸ್ಯೆಗಳ ತೊಟ್ಟಿಲು ಎಂಬ ಶೀರ್ಷಿಕೆಯಡಿ ಜೂ.3, ಶನಿವಾರ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು.
ಪರಿಣಾಮವಾಗಿ ಹಾಸ್ಟೆಲ್ ಗೆ ಜಿಲ್ಲಾ ಬಿಸಿಎಂ ಅಧಿಕಾರಿ ಗಂಗಪ್ಪ, ಇನ್ನಿತರ ಅಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಆಲಿಸಿ ನಿರ್ಲಕ್ಷ್ಯವಹಿಸಿರುವ ವಾರ್ಡನ್ ಅನಿತಾಲಕ್ಷ್ಮಿ ಅವರನ್ನು ವರ್ಗಾವಣೆ ಮಾಡುವುದಾಗಿ ತಿಳಿಸಿದ್ದಾರೆ.