ಮಧುಗಿರಿ: ಬುದ್ದಿಮಾಂದ್ಯಳ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ಮಧುಗಿರಿಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ೧೫ ವರ್ಷ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ.
ಬಡವನಹಳ್ಳಿಯಲ್ಲಿ ವಾಸವಾಗಿದ್ದ ಬುದ್ದಿಮಾಂದ್ಯಳನ್ನು ಆರೋಪಿ ತಿಮ್ಮಪ್ಪ ( 65) ಎಂಬಾತ ಸೆ.೬ ರಂದು ಸುಮಾರು 3.30 ಗಂಟೆಗೆ ಬಂಡೆಯ ಹತ್ತಿರ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿ ಆಕೆ 4 ತಿಂಗಳು ಗರ್ಭಿಣಿ ಯಾಗಲು ಕಾರಣನಾಗಿದ್ದನು. ಈ ಸಂಬಂದ ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಹನುಮಂತರಾಯಪ್ಪ ಹೆಚ್.ಜಿ. ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮಧುಗಿರಿಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಯಾದವ ಕರಕೇರ ಆರೋಪಿಗೆ ೧೫ ವರ್ಷ ಶಿಕ್ಷೆ ಹಾಗೂ ೧ ಲಕ್ಷ ರೂ. ದಂಡ ವಿಧಿಸಿದ್ದಾರೆ.
ದಂಡದ ಸಂಪೂರ್ಣ ಹಣವನ್ನು ಸಂತ್ರಸ್ಥೆಗೆ ಪರಿಹಾರವಾಗಿ ನೀಡುವಂತೆ ಹಾಗೂ ಹೆಚ್ಚುವರಿ ಪರಿಹಾರವನ್ನು ಸಂತ್ರಸ್ಥರ ಪರಿಹಾರ ನಿಧಿಯಿಂದ ನೀಡುವಂತೆಯೂ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ಬಿ.ಎಂ. ನಿರಂಜನಮೂರ್ತಿ