Tuesday, 26th November 2024

Tumkur News: ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಗೋ ಪೂಜೆ ಮಾಡುವುದರೊಂದಿಗೆ ಚಾಲನೆ

ಚಿಕ್ಕನಾಯಕನಹಳ್ಳಿ:ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ  ರಾಷ್ಟ್ರೀಯ ಜಾನು ವಾರು ರೋಗ ನಿಯಂತ್ರಣ ಕಾಯ೯ಕ್ರಮದಡಿಯಲ್ಲಿ ೬ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾ ನಕ್ಕೆ ಶಾಸಕ ಸಿ.ಬಿ ಸುರೇಶ್ ಬಾಬು ಅವರು ಸೋಮವಾರ ಪಟ್ಟಣದ ತೀ.ನಂ.ಶ್ರೀ ಭವನದ ಆವರಣದಲ್ಲಿ ಗೋ ಪೂಜೆ ಮಾಡುವುದರೊಂದಿಗೆ ಚಾಲನೆ ನೀಡಿದರು. 

ಹಳ್ಳಿಕಾರ್ ಕರುವಿಗೆ ಲಸಿಕೆ ಹಾಕುವುದರ ಮುಖಾಂತರ ನೆರವೇರಿಸಿದರು. ನಂತರ ಅವರು ಮಾತನಾಡಿ ಜಾನುವಾರು ರೋಗ ನಿಯಂತ್ರಣ ಕಾಯ೯ಕ್ರಮದಡಿ ಇಲಾಖೆಯು ಪ್ರತಿ ಆರು ತಿಂಗಳಿಗೊಮ್ಮೆ ಕಾಲು ಬಾಯಿ ರೋಗದ ವಿರುದ್ದ ಲಸಿಕೆ ಹಾಕುತ್ತಿರುವುದು ರೈತರಿಗೆ ವರವಾಗಿದೆ.ಏಕೆಂದರೆ ಈ ರೋಗವನ್ನು ನಿಯಂತ್ರಿಸುವುದು ಕೇವಲ ಲಸಿಕೆ ಹಾಕುವುದರಿಂದ ಮಾತ್ರ ಎಂದು ವಿಜ್ಞಾನಿಗಳು ಮನವರಿಕೆ ಮಾಡಿಕೊಟ್ಟಿದ್ದಾರೆ.

ಆದುದರಿಂದ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿಕೊಂಡಿದ್ದರೂ ಸಹಿತ ಜಾನುವಾರುಗಳಿಗೆ ತಪ್ಪದೇ ಇಲಾಖೆ ಯವರು ಬಂದಾಗ ಲಸಿಕೆ ಹಾಕಿಸಿಕೊಳ್ಳಲು ಮನವಿ ಮಾಡಿಕೊಂಡರು. ಇಲಾಖೆಯವರು ಇಂತಹ ಪುಣ್ಯದ ಕೆಲಸವನ್ನು ಮಾಡುತ್ತಿರುವುದು ಅವರಿಗೆ ಮತ್ತಷ್ಟು ಪುಣ್ಯವನ್ನು ತಂದುಕೊಡುತ್ತದೆ ಎಂದು ಪ್ರಶಂಸಿಸಿ ಇಲಾಖೆಯ ಲಸಿಕೆದಾರರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪ್ರತಿಯೊಂದು ಜಾನುವಾರುವಿಗೂ ತಪ್ಪದೇ ಲಸಿಕೆ ಹಾಕುವ ಕೆಲಸ ವನ್ನು ಪ್ರಾಮಾಣಿಕತೆಯಿಂದ ಮಾಡ ಬೇಕೆಂದು ಕಿವಿ ಮಾತು ಹೇಳಿದರು.

ಇಲಾಖೆಯ ಸಹಾಯಕ ನಿದೇ೯ಶಕರಾದ ಡಾ.ರೆ.ಮ ನಾಗಭೂಷಣರವರು ಮಾತನಾಡಿ ತಾಲ್ಲೂಕಿನಲ್ಲಿ ಈ ಕಾಯ೯ಕ್ರಮವು ಅಕ್ಟೋಬರ್-೨೧ ರಿಂದ ನವೆಂಬರ್-೨೦ರ ವರೆಗೆ ಒಂದು ತಿಂಗಳು ನಡೆಯಲ್ಲಿದ್ದು ಸುಮಾರು ೪೭೦೦೦ ದಿಂದ ೫೦೦೦೦ ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದ್ದು, ಮೂರು ತಿಂಗಳ ಮೇಲ್ಪಟ್ಟ ಎಲ್ಲಾ ಕರು,ಕಡಸು,ಮಣಕ,ಹಸು,ಎಮ್ಮೆ,ಎತ್ತು,ಹೋರಿಗಳಿಗೆ ಲಸಿಕೆ ಹಾಕಲಾಗುವುದು. ಹಂದಿಗಳಿಗೂ ಸಹಿತ ಈ ಲಸಿಕೆಯನ್ನು ಹಾಕಲಾಗುತ್ತದೆ ಎಂದು ತಿಳಿಸಿದರು. ಈಗಾಗಲೇ ೫೦೦೦೦ಡೋಸ್ ಲಸಿಕೆ ಸಂಗ್ರಹಿಸಿ ಕೊಂಡು ಪ್ರತಿ ಗ್ರಾಮದ ಮೈಕ್ರೋಪ್ಲಾನ್ ತಯಾರಿ ಮಾಡಿಕೊಂಡು ೩೬೦ ಬ್ಲಾಕ್ಗಳಲ್ಲಿ ಪ್ರತಿ ಲಸಿಕೆದಾರ ದಿನವೊಂದಕ್ಕೆ ೧೦೦ ಜಾನುವಾರುಗಳಿಗೆ ಲಸಿಕೆ ಹಾಕುವಂತೆ ತಯಾರಿ ಮಾಡಿಕೊಳ್ಳಲಾಗಿದೆ. ತಾಲ್ಲೂಕಿನಲ್ಲಿ ೫೬ ಮಂದಿ ಲಸಿಕೆದಾರರನ್ನು ನಿಯೋಜಿಸಲಾಗಿದೆ, ೦೬ ಜನ ಪಶುವೈದ್ಯರನ್ನು ಪರಿಶೀಲನ ಅಧಿಕಾರಿಗಳಾಗಿ ನೇಮಿಸ ಲಾಗಿದೆ ಎಂದರು.

ತಹಶೀಲ್ದಾರ್ ಪುರಂದರರವರು ಮಾತನಾಡಿ ಅತಿಯಾದ ಜ್ವರ, ಬಾಯಿಯಲ್ಲಿ ಹುಣ್ಣು, ಜೊಲ್ಲು ಸೋರಿಸುವುದು, ಕಾಲು ಕುಂಟುವುದು ಮುಂತಾದ ಲಕ್ಷಣಗಳಿಂದ ಕೊಡಿದ ಮಾರಣಾಂತಿಕ ಮತ್ತು ಅಪಾರ ನಷ್ಟವನ್ನು ಉಂಟು ಮಾಡುವ ಈ ರೋಗವನ್ನು ಹಿಂದೆ ಕಾಡುತ್ತಿದ್ದ ದೊಡ್ಡ ರೋಗದಂತೆ ನಿಮೂ೯ಲನೆ ಮಾಡುವ ಕೈಂಕಯ೯ವನ್ನು ನಾವೆಲ್ಲರೂ ತೊಡಬೇಕಿದೆ. ಹಿಂದೆ ಚಾಮರಾಜ ನಗರದಲ್ಲಿ ಕಾಯ೯ನಿವ೯ಹಿಸುತ್ತಿದ್ದ ವೇಳೆ ಗೋಶಾಲೆ ಒಂದರಲ್ಲಿ ಕಾಲು ಬಾಯಿ ಜ್ವರ ಕಾಣಿಸಿಕೊಂಡು ಅಪಾರವಾದ ನಷ್ಟವನ್ನು ಉಂಟುಮಾಡಿದ್ದ ಘಟನೆಯನ್ನು ಅವರು ನೆನಪು ಮಾಡಿಕೊಂಡರು. ಮತ್ತೋವ೯ ಅತಿಥಿಗಳಾಗಿ ಆಗಮಿಸಿದ್ದ ತಾಲ್ಲೂಕು ಪಂಚಾಯತ್ನ ಕಾಯ೯ನಿವ೯ಹಣಾಧಿ ಕಾರಿಗಾಳದ ಶ್ರೀ ದೊಡ್ಡ ಸಿದ್ದಪ್ಪನವರು ಕಾಯ೯ಕ್ರಮ ಯಶಸ್ವಿಯಾಗಲೆಂದು ಶುಭ ಕೋರಿದರು.