Monday, 25th November 2024

Tumkur News: ದಾಸರಹಳ್ಳಿ ಮೀಸಲು ಅರಣ್ಯದಲ್ಲಿ ಶವ ಸಂಸ್ಕಾರ- ಖಂಡನೆ

ತುಮಕೂರು: ತಾಲ್ಲೂಕಿನ ಕಸಬಾ ಹೋಬಳಿ ತಿಪ್ಪನಹಳ್ಳಿ ಗ್ರಾಮದ ಸರ್ವೆ ನಂ 35ರ ದಾಸರಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶವ ಸಂಸ್ಕಾರ ಮಾಡಿ ಅರಣ್ಯ ಕಾಯ್ದೆ ಮತ್ತು ಅರಣ್ಯ ಅಧಿನಿಯಮ ಉಲ್ಲಂಘನೆ ಮಾಡಿರುವುದನ್ನು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯು ಖಂಡಿಸಿದೆ.

ತಿಪ್ಪನಹಳ್ಳಿ ಸರ್ವೆ ನಂ-35೫ರಲ್ಲಿ 482.10ಎಕರೆ ಗುಂಟೆ ಪ್ರದೇಶವು ಸಂಪೂರ್ಣ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವೆಂದು 1878ರ ಅರಣ್ಯ ಕಾಯಿದೆ ಸೆಕ್ಷನ್ 9ರ ಪ್ರಕಾರ ಮಹರಾಜ ಮೈಸೂರು ಸರಕಾರವು ದಿ: 02.06.1896 ರಂದು ದಾಸರಹಳ್ಳಿ ಅರಣ್ಯ ನೆಡುತೋಪು ಎಂದು ಮೈಸೂರು ಗೆಜೆಟ್ ನೋಟಿಫಿಕೇಷನ್‌ಲ್ಲಿ ನಮೂದಾಗಿದೆ ನಂತರದಲ್ಲಿ ದಿನಾಂಕ 07.01.1901ರಲ್ಲಿ ಈ ಪ್ರದೇಶವನ್ನು ರಾಜ್ಯ ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸಿದೆ.

ತುಮಕೂರು ತಾಲ್ಲೂಕು ತಹಶಿಲ್ದಾರ್ ಬಗರ್ ಹುಕುಂ ಕಮಿಟಿಯಲ್ಲಿ ಎಲ್.ಎನ್.ಡಿ/ಆರ್.ಯು.ಸಿ/ಕೆ.ಎ.ಎಸ್:೪೫/೧೯೯೯-೨೦೦೦ ದಿ: ೨೨.೦೨.೨೦೦೨ರಂತೆ ಸರ್ವೆ ನಂ ೩೫ರ ದಾಸರಹಳ್ಳಿ ಮೀಸಲು ಅರಣ್ಯ ಪ್ರದೇಶವು ಕರ್ನಾಟಕ ಅರಣ್ಯ ಇಲಾಖೆಗೆ ಸೇರಿರುವುದರಿಂದ ಸದರಿ ಅರ್ಜಿದಾರರಿಗೆ ಬಗರ್ ಹುಕುಂ ಕಮಿಟಿಯಿಂದ ಮಂಜೂರು ಮಾಡಲು ಬರುವುದಿಲ್ಲವೆಂದು ತಹಶೀಲ್ದಾರ್  ಆದೇಶಿಸಿರುತ್ತಾರೆ.

ಆದರೆ ದಿನಾಂಕ ೧೭.೦೨.೨೦೧೮ರಂದು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಬಗರ್ ಹುಕುಂ ಕಮಿಟಿಯಲ್ಲಿ ನಂತರದಲ್ಲಿ ಬಂದಂತಹ ತಾಲ್ಲೂಕು ತಹಶೀಲ್ದಾರ್ ರವರು ಹಿಂದೆಮುAದೆ ನೋಡದೇ ಮೀಸಲು ಅರಣ್ಯ ಪ್ರದೇಶ ದಲ್ಲಿ ಬಗರ್ ಹುಕುಂ ಅರ್ಜಿದಾರರಿಗೆ ಜಮೀನು ಮಂಜೂರು ಮಾಡಿ ಅರಣ್ಯ ಕಾಯ್ದೆ ಮತ್ತು ಅರಣ್ಯ ಅಧಿನಿಯಮ ವನ್ನು ಉಲ್ಲಂಘಿಸಿದ್ದಾರೆ.

ದಿ:೧೮.೦೩.೨೦೨೧ರಂದು ಅನಧಿಕೃತವಾಗಿ ಗ್ರೇಡ್-೨ ತಹಶೀಲ್ದಾರ್ ರವರು ದಾಸರಹಳ್ಳಿ ಮೀಸಲು ಅರಣ್ಯ ದಲ್ಲಿ ೩.೨೦ಎಕರೆ/ಗುಂಟೆ ಅರಣ್ಯ ಜಮೀನನ್ನು ಮಂಜೂರು ಮಾಡಿರುತ್ತಾರೆ ಅರಣ್ಯ ಇಲಾಖೆಗೆ ಮಾಹಿತಿ ಸಲ್ಲಿಸದೇ ಮಂಜೂರಾತಿ ನೀಡಿರುತ್ತಾರೆ. ದಿನಾಂಕ:೧೭.೦೭.೨೦೨೧ರಂದು ಸದರಿ ಅರ್ಜಿದಾರರು ಅನಧಿಕೃತ ವಾಗಿ ಅರಣ್ಯ ಪ್ರದೇಶದಲ್ಲಿ ಒತ್ತುವರಿ ಮಾಡಲು ಬಂದಾಗ ಇವರ ಮೇಲೆ ಅರಣ್ಯ ಸಿಬ್ಬಂದಿ ಇವರ ಮೇಲೆ ಅರಣ್ಯ ಮೊಕದ್ದಮೆ ಸಹ ದಾಖಲೆ ಮಾಡಿರುತ್ತಾರೆ.

ನಂತರದಲ್ಲಿ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ೨೦೧೫ರಲ್ಲಿ ಜೆ.ಎಮ್.ಎಪ್.ಸಿ ನ್ಯಾಯಾಲಯ ತುಮಕೂರು ಇಲ್ಲಿ ಸದರಿಯವರಿಗೆ ಡಿಕ್ರೀ ಆಗಿದ್ದು ಇದರ ವಿರುದ್ದ ಕರ್ನಾಟಕ ಸರಕಾರದಿಂದ ಅನುಮತಿ ಪಡೆದು ದಿನಾಂಕ:೨೦.೦೯.೨೦೨೧ರಂದು ತುಮಕೂರು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು  ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ,  ಅರ್ಜಿದಾರರ ವಿರುದ್ದ ದಾವೆ ಊಡಲಾಯಿತು.

ಬಗರ್ ಹುಕುಂನಲ್ಲಿ ಮಂಜೂರಾದ ೩.೨೦ಎ/ಗುಂ ಜಾಗದಲ್ಲಿ ಇದ್ದಂತಹ ಗಿಡ-ಮರಗಳನ್ನು ಕಡಿದು ಸುಟ್ಟು ಹಾಕಲು ಪ್ರಯತ್ನಿಸಿದಾಗ ಅರಣ್ಯ ಇಲಾಖೆಯ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ ಅರಣ್ಯ ಇಲಾಖೆ ಇವರ ಮೇಲೆ ಕೋರ ಗ್ರಾಮಾಂತರ ಆರಕ್ಷಕ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.

ದಾಸರಹಳ್ಳಿ   ಮೀಸಲು ಅರಣ್ಯ ಪ್ರದೇಶವನ್ನು ಬಗರ್ ಹುಕುಂ ಅರ್ಜಿ ನಂ ೫೩ರಲ್ಲಿ ಮಂಜೂರು ಮಾಡಿ ರುವ ತುಮಕೂರು ತಹಶೀಲ್ದಾರ್, ಉಪ ವಿಭಾಗಾಧಿಕಾರಿಗಳು, ಹಾಗೂ ಮೀಸಲು ಅರಣ್ಯದಲ್ಲಿ ಜಮೀನು ಮಂಜೂರು ಮಾಡಿದರೂ ಹಾಗೂ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಶವ ಸಂಸ್ಕಾರ ಮಾಡಲು ಅನುವು ಮಾಡಿಕೊಟ್ಟು ಕೈಕಟ್ಟಿ ಕುಳಿತ ತುಮಕೂರು ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿಗಳು ಕಠಿಣ ಕ್ರಮ ತೆಗೆದುಕೊಂಡು ರಾಜ್ಯ ಮೀಸಲು ಅರಣ್ಯ ಪ್ರದೇಶವನ್ನು ಸಂರಕ್ಷಿಸಬೇಕೆಕದು ನಿಸರ್ಗ ಸಂಸ್ಥೆ ಪ್ರಕಟಣೆಯಲ್ಲಿ ಒತ್ತಾಯಿಸಿದೆ.

ಇದನ್ನೂ ಓದಿ: Tumkur News: ಸಾಲ ಮರುಪಾವತಿಯಾದಾಗ ಸಹಕಾರಿ ಸಂಘಗಳು ಅಭಿವೃದ್ಧಿ-ಶ್ರೀನಿವಾಸ್