ಕೊರಟಗೆರೆ: ಗ್ರಾಮ ಆಡಳಿತ ಅಧಿಕಾರಿಗಳಿಗೆ ಆಧಿಕ ಕೆಲಸದ ಒತ್ತಡ ಹಾಗೂ ತಾಂತ್ರಿಕ ಕೆಲಸಗಳಿಗೆ ಮಾಹಿತಿ ನೀಡದೆ ಹಾಗೂ ಮೂಲಭೂತ ಸೌಕರ್ಯ ನೀಡದೆ ಒತ್ತಡ ಏರಿ ಕೆಲಸ ಮಾಡಿಸುತ್ತಿರುವುದನ್ನು ವಿರೋಧಿಸಿ ಹಾಗೂ ಸಂಘದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವದಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಗ್ರಾಮ ಆಡಳಿತ ಅಧಿಕಾರಿಗಳ ತಾಲೂಕು ಸಂಘದ ಅಧ್ಯಕ್ಷ ಟಿ.ಬಸವರಾಜು ತಿಮ್ಮಾಪುರ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಬಾಗದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ತಾಲೂಕು ಸಂಘದಿಂದ ಏರ್ಪಡಿಸ ಲಾಗಿದ್ದ ಪ್ರತಿಭಟನೆಯಲ್ಲಿ ತಹಶೀಲ್ದಾರ್ ಮಂಜುನಾಥ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮತನಾಡಿದರು.
ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ೬ ಮೊಬೈಲ್ ಆಪ್ಗಳಲ್ಲಿ ಒಂದೇ ಬಾರಿಗೆ ಪ್ರಗತಿ ಸಾಧಿಸುವಂತೆ ಒತ್ತಡ ಏರಿರುವು ದರಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಧಿಕ ಕೆಲಸದ ಒತ್ತಡ ಉಂಟಾಗಿದ್ದು ಅಧಿಕ ಕೆಲಸದ ಒತ್ತಡದಿಂದ ಕೆಲವು ಗ್ರಾಮ ಆಡಳಿತ ಅಧಿಕಾರಿಗಳು ಹೃದಯಾಘಾತದಿಂದ ಮರಣ ಹೊಂದಿದ್ದು, ಕೆಲವು ಗ್ರಾಮ ಆಡಳಿತ ಅಧಿಕಾರಿಗಳು ಕೆಲಸಕ್ಕೆ ರಾಜಿನಾಮೆ ಸಲ್ಲಿಸುವ ಹಂತಕ್ಕೆ ತಲುಪಿದ್ದಾರೆ ಎಂದರು.
ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯಗಳಾದ ನಿದಿಷ್ಠ ಕಛೇರಿ, ಉತ್ತಮ ಗುಣಮಟ್ಟದ ಮೊಬೈಲ್, ಸಿಯುಜಿ ಸಿಮ್ ಮತ್ತು ಡೇಟಾ, ಗೂಗಲ್ ಕ್ರೋಮ್ ಬುಕ್, ಲ್ಯಾಪ್ ಟಾಪ್, ಟೇಬಲ್, ಕುರ್ಚಿ ಮತ್ತು ಅಲ್ಮೆರಾ ಸೇರಿ ದಂತೆ ಹಾಗೂ ಪದೋನ್ನತಿಯಲ್ಲಿ ವಂಚಿತರಾಗಿದ್ದು ಗ್ರೇಡ್೧ ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನಾಗಿ ಮೇಲ್ದರ್ಜೆಗೇರಿಸಿ ಪದ್ದೋನ್ನತಿ ನೀಡುವುದರೊಂದಿಗೆ ಸಂಘದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಿದ್ದು ಸೆ.೨೬ ವರೆಗೆ ಸರ್ಕಾರ ಸಂಘದ ಬೇಡಿಕೆ ಈಡರದಿದ್ದರೆ ಸೆ.೨೬ ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್ ಮತನಾಡಿ ಕೊರಟಗೆರೆ ತಾಲೂಕಿನಲ್ಲಿ ೩೩ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೆ ಕೇವಲ ೧೮ ಮಂದಿ ಕೆಲಸ ನಿರ್ವಹಿಸುತ್ತಿದ್ದು ೩ ಮಂದಿಗೆ ಪ್ರಭಾರ ಕಂದಾಯ ಅಧಿಕಾರಿಗಳ ಹೆಚ್ಚುವರಿ ಹುದ್ದೆಯನ್ನು ನಿರ್ವಹಿಸುವಂತೆ ಸೂಚಿಸಲಾಗಿದ್ದು, ತಾಲೂಕಿನಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ೩೩ ಮಂದಿಯ ಕಾರ್ಯವನ್ನು ಕೇವಲ ೧೮ ಮಂದಿ ನಿರ್ವಹಿಸುತ್ತಿದ್ದು ತಾಲೂಕಿನಲ್ಲಿ ಖಾಲಿ ಇರುವ ೧೫ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಕ್ಷಣ ತುಂಬುವAತೆ ಸರ್ಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಲ ಸಂಘದ ಗೌರವಾಧ್ಯಕ್ಷ ಭರತ್ಕುಮಾರ್, ಉಪಾಧ್ಯಕ್ಷ ಪವನ್, ಕಾರ್ಯದರ್ಶಿ ಎಂ.ಸಲ್ಮಾನ್, ಸದಸ್ಯರುಗಳಾದ ರಮೇಶ್, ಸಬೀಹಾಬಾನು, ಹಾರಿಕಾ, ಮೋಹಿತ್, ಕೃಷ್ಣಮೂರ್ತಿ, ಸುಧೀಶ್, ಮಂಜುನಾಥ್, ಗುರುಶಂಕರ್, ಪರಶುರಾಮ್, ಸೇರಿದಂತೆ ಇತರರು ಇದ್ದರು.
*
ಗ್ರಾಮ ಆಡಳಿತ ಅಧಿಕಾರಿಗಳು ಫೀಲ್ದ್ ವರ್ಕ್ ಹೋದಂತಹ ಸಮಯದಲ್ಲಿ ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೇ ನಡೆದಿರುತ್ತದೆ, ಗಲ್ಬುರ್ಗ ಜಿಲ್ಲೆಯಲ್ಲಿ ೩ ಮಂದಿ ಗ್ರಾಮ ಆಡಳಿತ ಅಧಿಕಾರಿಗಳನ್ನು ಅಮಾನತ್ತು ಮಾಡಲಾ ಗಿದೆ. ಸೆ.೨೨ ರಂದು ಭಾನುವಾರ ರಜಾದಿನವಾಗಿದ್ದರೂ ಚಿತ್ರದುರ್ಗಾ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಮದ್ಯಾಹ್ನ ೧-೩೦ ವರೆಗೂ ಮೀಟಂಗ್ ಕರೆದು ಮೊಬೈಲ್ ಆಫ್ ಪ್ರಗತಿಗೆ ಒತ್ತಡ ಹಾಕಿದ್ದಾರೆ
ಟಿ.ಬಸವರಾಜು ತಿಮ್ಮಾಪುರ. ತಾಲೂಕು ಸಂಘದ ಅಧ್ಯಕ್ಷ
ಇದನ್ನೂ ಓದಿ: Tumkur News: ದಾಸರಹಳ್ಳಿ ಮೀಸಲು ಅರಣ್ಯದಲ್ಲಿ ಶವ ಸಂಸ್ಕಾರ- ಖಂಡನೆ