ತುಮಕೂರು: ನಗರದ ಎಂ.ಜಿ ರಸ್ತೆಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ವಿಜ್ಞಾನ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಅಪರಿಚಿತ ವ್ಯಕ್ತಿಗಳು ನುಗ್ಗಿ ದಾಂಧಲೆ ನಡೆಸಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿದ್ಯಾರ್ಥಿನಿಲಯದಲ್ಲಿದ್ದ ವಾರ್ಡನ್, ರಾತ್ರಿ ಕಾವಲುಗಾರರು ಹಾಗೂ ವಿದ್ಯಾರ್ಥಿಗಳನ್ನು ವಿಚಾರಿಸಿ ವಿದ್ಯಾರ್ಥಿ ಗಳಿಂದ ಹೇಳಿಕೆ ಪಡೆದರು.
ವಿದ್ಯಾರ್ಥಿಗಳಿಂದ ಹೇಳಿಕೆ
ನಿಲಯಪಾಲಕರು ರೂ.ನಂ:17ರಲ್ಲಿ ವಾಸ್ತವ್ಯವಿದ್ದ ವಿದ್ಯಾರ್ಥಿಗಳಾದ ನಾಗರಾಜು ಜಿ.ಹೆಚ್, ಗೋಪಲ್‌ರೆಡ್ಡಿ ಹಾಗೂ ರವಿಚಂದ್ರ ಆದ ನಮ್ಮನ್ನು ನಿಲಯಪಾಲಕರ ಕಚೇರಿಗೆ ಕರೆಸಿ ನಿಮ್ಮ ಕೊಠಡಿಯಲ್ಲಿ ಯಾರದಾರು ಅಪರಿಚತರು ಇದ್ದಾರೆಯೇ ಎಂದು ಕೇಳಿದರು ಆಗ ನಾವು ಯಾರು ಇರುವುದಿಲ್ಲ ಎಂದು ತಿಳಿಸಿದೆವು. ನಂತರ ಪೋಲೀಸ್ ಸಿಬ್ಬಂದಿ ಒಬ್ಬ ವ್ಯಕ್ತಿಯ ಭಾವ ಚಿತ್ರವನ್ನು ತೋರಿಸಿ ಇವರು ಏನಾದರೂ ತಮ್ಮ ಕೊಠಡಿಗೆ ಬಂದಲ್ಲಿ ನಮಗೆ ಮಾಹಿತಿ ನೀಡಲು ತಿಳಿಸಿ ನಮ್ಮನ್ನು ನಮ್ಮ ಕೊಠಡಿಗೆ ವಾಪಸ್ಸು ಕಳುಹಿಸಿಕೊಟ್ಟಿರುತ್ತಾರೆ. ನಮಗೆ ಪೋಲೀಸ್ ರವರಿಂದಗಾಲಿ ಅಥವಾ ಬೇರೆಯವರಿಂದಗಾಲಿ, ಒತ್ತಾಯ ಮಾಡುವುದು, ಗಲಾಟೆ ಮಾಡಿರುವುದು, ತೊಂದರೆ ಉಂಟು ಮಾಡಿರುವುದು ಯಾವುದು ಸಹ ನಮ್ಮ ನಿಲಯದಲ್ಲಿ ಹಾಗಿರುವುದಿಲ್ಲ ಪತ್ರಿಕೆಯಲ್ಲಿ ಹಾಗೂ ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವಿಷಯವು ಸತ್ಯಕ್ಕೆ ದೂರವಾಗಿರುತ್ತದೆ ಎಂದು ವಿದ್ಯಾರ್ಥಿಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
ಪಾವಗಡದ ಒಬ್ಬ ಪೊಲೀಸ್ ಪೇದೆ ಹಾಗೂ ತುಮಕೂರಿನ ಸ್ಥಳೀಯ ಪೋಲೀಸ್ ಪೇದೆ ಹೆಣ್ಣು ಮಕ್ಕಳ ಪೋಷಕರು ಸೇರಿದಂತೆ ನಿಲಯಪಾಲಕರನ್ನು ನಿಲಯದಲ್ಲಿ ಹೆಣ್ಣು ಮಕ್ಕಳನ್ನು ಅಪಹರಿಸಿಕೊಂಡು ಬಂದಿರುವ ಆರೋಪಿ ತಮ್ಮ ನಿಲಯದಲ್ಲಿ ಅಡಗಿರುವ ಬಗ್ಗೆ ಮಾಹಿತಿ ಪಡೆಯಲು ಅವಕಾಶ ಮಾಡಿಕೊಡಲು ಕೋರಿರುವ ಮೇರೆಗೆ ನಿಲಯಪಾಲಕರು ಸಹ ನಾನೇ ಖುದ್ದು ನಿಲಯಕ್ಕೆ ಭೇಟಿ ಮಾಡಿ ರೂ.ನಂ:೧೭ರ ವಿದ್ಯಾರ್ಥಿಗಳನ್ನು ವಿಚಾರಿಸ ಲಾಗಿರುತ್ತದೆ. ಇದರಲ್ಲಿ ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವುದಿಲ್ಲ ಆರೋಪಿ ಅಪರಿಚಿತರು ಯಾರು ನಮ್ಮ ನಿಲಯದಲ್ಲಿ ವಾಸ್ತವ್ಯವಿರುವುದಿಲ್ಲ ಎಂದು ನಿಲಯಪಾಲಕರು ಹಾಗೂ ರಾತ್ರಿಕಾವಲುಗಾರರು ಸಹ ಪೋಲೀಸರಿಗೆ ತಿಳಿಸಿದ ಮೇರೆಗೆ ಪೋಲೀಸರು ಹಾಗೂ ಹೆಣ್ಣು ಮಕ್ಕಳ ಪೋಷಕರು ಅಲ್ಲಿಂದ ಹಿಂದಿರುಗಿರುತ್ತಾರೆ ಎಂದು ಹೇಳಿಕೆ ನೀಡಿರುತ್ತಾರೆ.
ಒಟ್ಟಾರೆ ನಿಲಯಲ್ಲಿ ಹೆಣ್ಣು ಮಕ್ಕಳ ಪೋಷಕರು ಹಾಗೂ ಪೋಲೀಸರು ಬಂದು ಒತ್ತಾಯಿಸಿದ ಮೇರೆಗೆ ರೂ.ನಂ. 17 ರ ವಿದ್ಯಾರ್ಥಿಗಳನ್ನು ನಿಲಯಪಾಲಕರ ಮೂಲಕ ವಿಚಾರಿಸಿ ಮಾಹಿತಿ ನೀಡಿ ಕಳುಹಿಸಲಾಗಿರುತ್ತದೆ.
ವಿದ್ಯಾರ್ಥಿ ನಿಲಯದಲ್ಲಿ ಯಾವುದೇ ದೌರ್ಜನ್ಯ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಕಿರುಕುಳ ನೀಡಿರುವುದು ಕಂಡುಬಂದಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Tumkur News: ಸರ್ಕಾರಿ ಶಾಲೆಗಳಲ್ಲೂ ಪ್ರತಿಭಾವಂತ ಶಿಕ್ಷಕರಿದ್ದಾರೆ: ಶಾಸಕ ಬಿ. ಸುರೇಶ್‌ಗೌಡ