ಚಿಕ್ಕನಾಯಕನಹಳ್ಳಿ: ನಗರದ ಪಶು ಆಸ್ಪತ್ರೆ ಬಳಿ ಡಾಕ್ಟರ್ ಅಗರವಾಲ್ಸ್ ನೇತ್ರ ಚಿಕಿತ್ಸಾಲಯದ ಉದ್ಘಾಟನಾ ಕಾರ್ಯಕ್ರಮ (Tumkur News) ಜರುಗಿತು. ಶಾಸಕ ಸಿ.ಬಿ. ಸುರೇಶಬಾಬು ಚಿಕಿತ್ಸಾಲಯವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ, ಬೆಂಗಳೂರು, ತುಮಕೂರು ಮೈಸೂರು ಸೇರಿದಂತೆ ವಿವಿಧ ಮಹಾನಗರಗಳಲ್ಲಿ ಮಾತ್ರ ಆತ್ಯಾಧುನಿಕ ವೈದ್ಯಕೀಯ ಸೇವೆ ದೊರೆಯುತ್ತದೆ. ತಾಲೂಕು ಕೇಂದ್ರಗಳಲ್ಲಿ ವೈದ್ಯಕೀಯ ಸೌಲಭ್ಯ ಕಡಿಮೆ ಆದರೆ ಇಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಹೊಂದಿರುವ ಮತ್ತು ಸುಧಾರಿತ ಕಣ್ಣಿನ ಆರೈಕೆಗಾಗಿ ವೈದ್ಯಕೀಯ ಸೇವೆ ನೀಡುತ್ತಿರುವ ಡಾಕ್ಟರ್ ಅಗರವಾಲ್ಸ್ ಆಸ್ಪತ್ರೆ ನಗರದಲ್ಲಿ ಕಾರ್ಯಾರಂಭಗೊಂಡಿರುವುದು ಸಂತಸದ ವಿಚಾರ. ಡಾಕ್ಟರ್ ಅಗರವಾಲ್ಸ್ ಚಿಕಿತ್ಸಾಲಯ ನೇತ್ರ ಚಿಕಿತ್ಸೆ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆ ನೀಡಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | World Handwashing Day : ಕೈ ತೊಳೆಯುವುದೆಂದರೆ ಅನಾರೋಗ್ಯವನ್ನು ಓಡಿಸಿದಂತೆ!
ತುಮಕೂರು ಚಿಕಿತ್ಸಾಲಯದ ಸಹಾಯಕ ನೇತ್ರ ತಜ್ಞ ಡಾ. ಗಿರೀಶ್‌ರೆಡ್ಡಿ ಮಾತನಾಡಿ, ಚಿಕಿತ್ಸಾಲಯದ ಕಾರ್ಯಾರಂಭದಿಂದ ತಾಲೂಕಿನ ಹಾಗೂ ಸುತ್ತಮತ್ತಲಿನ ಜನರಿಗೆ ಕಣ್ಣಿನ ರಕ್ಷಣೆಯ ಉತ್ತಮ ಆರೋಗ್ಯ ಸೇವೆ ದೊರೆಯಲಿದೆ. ಚಿಕಿತ್ಸಾಲಯದಲ್ಲಿ ನಾವು ಯಾವಾಗಲೂ ನಮ್ಮ ರೋಗಿಗಳಿಗೆ ನಿರೀಕ್ಷೆಗೂ ಮೀರಿದ ಸೇವೆಯನ್ನು ನೀಡುವ ಗುರಿ ಹೊಂದಿದ್ದೇವೆ. ಯಶಸ್ವಿನಿ ಯೋಜನೆ, ಇಎಸ್‌ಐ ಪಾವತಿಸುವ ಕಾರ್ಮಿಕರಿಗೆ, ಮತ್ತು ಹೆಲ್ತ್ ಇನ್ಸೂರೆನ್ಸ್ ಸೌಲಭ್ಯ ಹೊಂದಿರುವವರಿಗೆ ಚಿಕಿತ್ಸಾಲಯ ಸೇವೆಯನ್ನು ಒದಗಿಸುತ್ತದೆ. ಆಪ್ಟಿಕಲ್, ಅನುಭವಿ ನೇತ್ರ ತಂತ್ರಜ್ಞರಿಂದ ಉಚಿತ ಕಣ್ಣಿನ ತಪಾಸಣೆ, ಕಣ್ಣಿನಪೊರೆ ಮೌಲ್ಯಮಾಪನ ಈ ರೀತಿಯ ಕಣ್ಣಿನ ಆರೋಗ್ಯ ಸೇವೆಯನ್ನು ನಮ್ಮ ಚಿಕಿತ್ಸಾಲಯ ಕೈಗೆಟಕುವ ದರದಲ್ಲಿ ಒದಗಿಸುತ್ತದೆ. ತಾಲೂಕಿನ ಇಬ್ಬರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Reliance Jio: ಜಿಯೋಭಾರತ್ ವಿ3, ವಿ4 ಮೊಬೈಲ್ ಫೋನ್ ರಿಲೀಸ್; ಏನಿದರ ವಿಶೇಷ? ಬೆಲೆ ಎಷ್ಟು?
ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಕೆಂಗಲ್ ದಯಾನಂದ್, ತಹಸೀಲ್ದಾರ್ ಪುರಂದರ್, ಸಿಪಿಐ ನಢಾಫ್, ಮಾರುಕಟ್ಟೆ ಮುಖ್ಯಸ್ಥ ಧೀರಜ್, ಕ್ಲಿನಿಕ್ ಸಹಾಯಕ ಮದನ್ ಹಾಗೂ ಇತರರಿದ್ದರು.