ಚಿಕ್ಕನಾಯಕನಹಳ್ಳಿ: ರಂಭಾಪುರಿ ಪೀಠದ ಲಿಂಗೈಕ್ಯ ವೀರ ರುದ್ರಮುನಿ ಶಿವಾಚಾರ್ಯ ಭಗವತ್ಪಾದರನ್ನ ಹಾಗು ನಮ್ಮ ಪೂರ್ವಿಕರನ್ನ ಸ್ಮರಿಸಿ ಅವರ ಮಾರ್ಗದರ್ಶನವನ್ನ ಅನುಸರಿಸಬೇಕು ಎಂದು ದೊಡ್ಡಗುಣಿ ಹಿರೇಮಠದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯಸ್ವಾಮೀಜಿ ಹೇಳಿದರು.
ಪಟ್ಟಣದ ಅರಳೇಪೇಟೆಯಲ್ಲಿರುವ ಶ್ರೀಉಚ್ಛಸಂಗಪ್ಪನವರ ಮಠದ ಸಮುದಾಯ ಭವನದಲ್ಲಿ ಬಾಳೇಹೊನ್ನೂರಿನ ರಂಭಾಪುರಿ ಪೀಠದ 1008 ಜಗದ್ಗುರು ಲಿಂಗೈಕ್ಯೆ ವೀರ ರುದ್ರಮುನಿ ಶಿವಾಚಾರ್ಯ ಭಗವತ್ಪಾದರ ಜನ್ಮ ಶತಮಾ ನೋತ್ಸವ ಸಮಾರಂಭದಲ್ಲಿ ಸಾನಿದ್ಯವಹಿಸಿ ಮಾತನಾಡಿದರು. ಪಂಚಾಚಾರ್ಯರ ಪರಂಪರೆಯಲ್ಲಿ ಬಾಳೇ ಹೊನ್ನೂರಿನ ರಂಭಾಪುರಿ ಪೀಠದ ಪ್ರಸನ್ನ ರೇಣುಕ ಡಾ.ವೀರ ಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಕೃಪ ಆಶೀರ್ವಾದದಲ್ಲಿ ದೇಶದಲ್ಲಿ ಅನೇಕ ಕಡೆ ಲಿಂಗೈಕ್ಯ ವೀರ ರುದ್ರಮುನಿ ಶಿವಾಚಾರ್ಯರು ಶತಮಾನೋತ್ಸವ ನೆಡೆದಿದೆ.
ಮಹಾರಾಷ್ಟ್ರದಲ್ಲಿ 1924 ಜನ್ಮಿಸಿದ ರುದ್ರಮುನಿ ಶಿವಾಚಾರ್ಯರು ಬಾಳೇಹೊನ್ನೂರು ರಂಭಾಪುರಿ ಪೀಠದ 120ನೇ ಜಗದ್ಗುರುಗಳ ಸ್ಥನವನ್ನ ಅಲಂಕರಿಸಿದ್ದರು.ಪೀಠದ ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರು ಕೃಪ ಆಶೀರ್ವಾ ದದಲ್ಲಿ 1972ರಲ್ಲಿ ಪಟ್ಟಾಭಿಷೇಕ ಅವರಿಗೆ ನೆಡೆದಿತ್ತು. ಶ್ರೀಗಳು ತಮ್ಮ ಬದುಕಿನಲ್ಲಿ ಪೂಜಾನುಷ್ಠಾನ ಆಚರಣೆಗಳನ್ನ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಅವರು ನೀರು ಮಡಿವಂತಿಕೆಯಲ್ವಿ ಸ್ವಲ್ಪ ವ್ಯತ್ಯಾಸ ವಾದರೂ ಒಪ್ಪತ್ತಿನ ಆಹಾರವನ್ನ ತ್ಯಜಿಸುತ್ತಿದ್ದರು ಎಂದರು.
ಆ ಪೂಜ್ಯ ಜಗದ್ಗುರುಗಳಿಗೂ ನಮ್ಮ ಮಠಕ್ಕೂ ಸಂಬಂದವಿದ್ದು ದೊಡ್ಡಗುಣಿ ಮಠದ ಹಿರಿಯ ಶ್ರೀಗಳು ಪ್ರೀತಿಯನ್ನ ಗಳಿಸಿದ್ದರು ಅಲ್ಲದೆ ನಮ್ಮ ಪಟ್ಟಾಭಿಷೇಕವು ಅವರ ಅಮೃತ ಹಸ್ತದಿಂದಲೇ ನೆಡೆದಿತ್ತು ಎಂದು ಸ್ಮರಿಸಿದರು. ಗುರು ಲಿಂಗ ಜಂಗಮ ಪಾದೊದಕ ವಿಭೂತಿ ರುದ್ರಾಕ್ಷಿ ಪ್ರಸಾದ ಈ ಅಟ್ಟಾಭರಣಗಳನ್ನ ವೀರಶೈವ ಧರ್ಮದವರು ಚಾಚು ತಪ್ಪದೆ ಪಾಲಿಸ ಬೇಕು ಇಷ್ಚಲಿಂಗಕ್ಕೆ ಅನ್ನವನ್ನ ನೈವ್ಯೇದ್ಯಮಾಡಿ ಸೇವಿಸಿದಾಗ ಅದು ಪ್ರಸಾದವಾಗುತ್ತದೆ. ಈ ಸಂಸ್ಕಾರವನ್ನ ನೀಡಿರುವ ನಮ್ಮ ಮಾತ ಪಿತೃ ಗುರುವಿನ ಮಾರ್ಗ ದರ್ಶನವನ್ನ ಅನುಸರಿಸೇ ಬಾಳ ಬೇಕು ಎಂದು ಆಶೀರ್ವಚನ ನೀಡಿದರು.
ಕುಪ್ಪೂರು ಗದ್ದಿಗೆ ಮಠದ ಆಢಳಿತಾಧಿಕಾರಿ ವಾಗೀಶ್ ಪಂಡಿತಾರಾಧ್ಯ ಮಾತನಾಡಿ ಗದ್ದಿಗೆ ಮಠದ ಹಿರಿಯಶ್ರೀ ಗಳಾದ ಚಂದ್ರಶೇಖರ ಶಿವಾಚಾರ್ಯರು ಲಿಂಗೈಕ್ಯ ಶ್ರೀ ವೀರರುದ್ರಮುನಿ ಶಿವಾಚಾರ್ಯ ಭಗವತ್ಪಾದರಿಗೆ ತೀರ ಹತ್ತಿರದ ಗುರುಶಿಷ್ಯರ ವಾತ್ಸಲ್ಯವನ್ನ ಪಡೆದುಕೊಂಡಿದ್ದರು. ರಂಭಾಪುರಿ ಪೀಠದ ಆಢಳಿತ ವರ್ಗದಲ್ಲಿ ಕರ್ತವ್ಯವನ್ನ ನಿರ್ವಹಿಸುತ್ತಿದ್ದರು.
ಅವರ ಮಾರ್ಗದರ್ಶನದಲ್ಲಿ 1986ರಲ್ಲಿ ಶೆಟ್ಟೆಕೆರೆ ಗ್ರಾಮ ಹಾಗೂ 1987ರಲ್ಲಿ ಚಿಕ್ಕನಾಯಕನಹಳ್ಳಿ ಪಟ್ಟಣ ದಲ್ಲಿ ಪಂಚಪೀಠಗಳ ಪಂಚಾಚಾರ್ಯರ ವೈಭವದ ಅಡ್ಡಪಲ್ಲಕಿ ಉತ್ಸವದ ನೆಡೆದಿದ್ದು ಒಂದು ಇತಿಹಾಸವನ್ನ ಸೃಷ್ಟೀಸಿತ್ತು.ಆ ಸಂದರ್ಭದಲ್ಲಿ ವೀರ ರುದ್ರಮುನಿ ಶಿವಾಚಾರ್ಯರು ಆಗಮಿಸಿ ನೀಡಿದ ಆಶೀರ್ವಚನಗಳು ಭಕ್ತರ ಮನಸ್ಸಿನಲ್ಲಿ ಇನ್ನೂ ಅಚ್ಚಹಸಿರಾಗಿದೆ ಎಂದರು.
ಟೌನ್ ವೀರಶೈವ ಮುಖಂಡರಾದ ಮರುಳಾರಾಧ್ಯ ಮಾತನಾಡಿ ಪಂಚಪೀಠಗಳು ಮನುಷ್ಯನ ಬದುಕಿನ ಮೌಲ್ಯ ಗಳನ್ನ ಎತ್ತಿ ಹಿಡಿದಿದೆ. ವ್ಯೆಕ್ತಿ ಭಗವಂತನನ್ನ ಕಾಣಲು ಇಷ್ಟಲಿಂಗ ಪೂಜೆ ಶ್ರೇಷ್ಠ ಎಂದು ಪಂಚಚಾರ್ಯರು ನುಡಿದ್ದಿದ್ದಾರೆ ನನಗೆ ಶೆಟ್ಟೀಕೆರೆಯಲ್ಲಿ ಜಗದ್ಗುರುಗಳಿಂದ ಧೀಕ್ಷೆಯನ್ನ ಪಡೆದಿದ್ದು ನನ್ನ ಪುಣ್ಯ. ವೀರಶೈವ ಸಮಾಜಕ್ಕೆ ರುದ್ರಭೂಮಿಯ ಅವಶ್ಯವಿದೆ. ನಮ್ಮ ತಂದೆ ತಾಯಿ ಹೆಸರಿನಲ್ಲಿ ಕೈಲಾಸ ರಥವನ್ನ ಸಮಾಜಕ್ಕೆ ದಾನನೀಡಲು ತೀರ್ಮಾನಿಸಿ ಹಾಗು ಅದರ ನಿರ್ವಹಣೆಗೂ ಹಣವನ್ನ ಮೀಸಲು ಇಡಲು ಯೋಜನೆಯನ್ನ ಮಾಡಿರುವುದಾಗಿ ತಿಳಿಸಿದರು.
ಶ್ರೀ ಉಚ್ಚಸಂಗಪ್ಪ ನವರ ಮಠದ ಸೇವಾಟ್ರಷ್ಟ್ ಅಧ್ಯಕ್ಷ ಸಿ.ಮಲ್ಲಿಕಾರ್ಜುನಸ್ವಾಮಿˌಟ್ರಷ್ಟಿನ ಉಪಾಧ್ಯೆಕ್ಷೆ ಪುಷ್ಪಶಿವಣ್ಣˌಅಕ್ಕಮಹಾದೇವಿ ಸಮಾಜದ ಮಾಜಿ ಅಧ್ಯೆಕ್ಷೆ ಶಶಿಕಲಾಜಯದೇವ್ˌತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜು ಹೇನ್ನೇಬಾಗಿ ˌಮಹಂತಿಮಠದ ನೀರ್ದೇಶಕ ಹೊಸಕೆರೆ ರಾಜಶೇಖರ್ ಪಂಚಮುಖಿ ಕುಮಾರಸ್ವಾಮಿ ಶಾಸ್ತ್ರೀ ಮಾತನಾಡಿದರು. ಅಂದಿನ ಕಾಲದ ಪಂಚಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಶ್ರಮಿಸಿದ ಎಲ್ಲಾ ಮುಖಂಡರನ್ನ ಸ್ಮರಿಸಿ ಸಾಂಖೇತಿಕವಾಗಿ ಹಿರಿಯರಿಗೆ ಗೌರವಿಸಲಾಯಿತು.
ಮಹಂತಿಮಠದ ಸೇವಾಟ್ರಷ್ಟ್ .ˌಅಕ್ಕಮಹಾದೇವಿ ಸಮಾಜದ ˌಅಖಿಲ ಭಾರತ ವೀರಶೈವ ಮಹಾ ಸಭಾದ ಸದಸ್ಯರುಗಳು ಭಾಗವಹಿಸಿದ್ದರು.ಟ್ರಷ್ಟಿನ ಪ್ರಧಾನ ಕಾರ್ಯದರ್ಶಿ ಗುರುಮೂರ್ತಿ ಸ್ವಾಗತಿಸಿ ಸುಮಪ್ರವೀಣ್ ನಿರೂಪಿಸಿದರು.