Friday, 29th November 2024

Tumkur News: ಅಗಣಿತ ಗುಣಗಳ ಆದರ್ಶದ ಗಣಿ ಕಿತ್ತೂರು ರಾಣಿ ಚನ್ನಮ್ಮ

ತುಮಕೂರು: ಧೈರ್ಯ, ಶೌರ್ಯ, ಪ್ರೀತಿ, ಮಮತೆಗಳಂತಹ ಅಸಂಖ್ಯ ಗುಣಗಳನ್ನೊಂದಿದ್ದ ಕಿತ್ತೂರು ರಾಣಿ ಚೆನ್ನಮ್ಮ ಅವರನ್ನು ಅಗಣಿತ ಗುಣಗಳ ಆದರ್ಶದ ಗಣಿ ಎಂದು ಬಣ್ಣಿಸಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ತಿಳಿಸಿದರು.

ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಭಾರತ ವೀರಶೈವ ಮಹಾಸಭಾ, ನಗರ ವೀರಶೈವ ಸಮಾಜ ಸೇವಾ ಸಮಿತಿ, ಬಸವ ಸೇವಾ ಸಮಿತಿ, ಮೈತ್ರಿ ಮಹಿಳಾ ಸಮಾಜ, ಕದಳಿ ವೇದಿಕೆ ವತಿಯಿಂದ ಆಚರಿಸ ಲಾದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ದಿಟ್ಟ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ. ಅವರ ಬದುಕು, ಸಾಧನೆ ಗಳನ್ನು ನೆನಪಿಸಿಕೊಳ್ಳಲು ಸರ್ಕಾರದ ವತಿಯಿಂದ ಜಯಂತಿ ಕಾರ್ಯಕ್ರಮವನ್ನು ಆಚರಿಸ ಲಾಗುತ್ತಿದ್ದು, ಇಂಥಹ ಸಾಧಕರ ಜಯಂತಿಗಳನ್ನು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸದೆ ಎಲ್ಲರೂ ಒಗ್ಗೂಡಿ ಅವರಿಗೆ ಗೌರವ ಸಲ್ಲಿಸಬೇಕು ಎಂದು ತಿಳಿಸಿದರು.

ಸ್ವಾಭಿಮಾನದ ಪ್ರತೀಕವಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಅವರ ಜೀವನ, ಹೋರಾಟದ ಹಾದಿಯನ್ನು ನೆನಪಿಸಿ ಕೊಳ್ಳುವ ಮತ್ತು ಅವರನ್ನು ಸ್ಮರಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧಿಕಾರಿ ಮರಿಯಪ್ಪ, ತಹಶೀಲ್ದಾರ್ ರಾಜೇಶ್ವರಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಅಧ್ಯಕ್ಷ ಬಾ.ಹ. ರಮಾಕುಮಾರಿ, ಹಿರಿಯ ಮಹಿಳಾ ಚಿಂತಕರು ಹಾಗೂ ಲೇಖಕಿ ಶೈಲಾ ನಾಗರಾಜು, ಕದಳಿ ಮಹಿಳಾ ವೇದಿಕೆ ಉಪಾಧ್ಯಕ್ಷ ಶಿವಲಿಂಗಮ್ಮ, ಮಂಜುಳಮ್ಮ, ಮುತ್ತುರಾಜ್, ಲಕ್ಕೇಗೌಡ, ಲಕ್ಷ್ಮೀಕಾಂತ್, ಭವನಮ್ಮ ಗುರುಮಲ್ಲಪ್ಪ, ಶಂಕರಪ್ಪ, ವಿರೇಶ್ ಕಲಾತಂಡ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಇದನ್ನೂ ಓದಿ: Tumkur News: ಹೇಮಾವತಿ ನೀರಿಗಾಗಿ ಮನೆಗೊಬ್ಬರಂತೆ ಜೈಲಿಗೆ ಹೋಗಲು ಸಿದ್ದ