Monday, 25th November 2024

Tumkur News: ಕೃಷಿ ಖಸುಬು, ಬೀಜೋಪಚಾರ ವಿಷಯ ಕುರಿತ ಪ್ರಾತ್ಯಕ್ಷಿಕೆ

ತುಮಕೂರು: ತಾಲೂಕಿನ ಸ್ವಾಂದೇನಹಳ್ಳಿಯಲ್ಲಿ ಬೆಂಗಳೂರು ಕೃಷಿ ವಿಜ್ಞಾನ ಕೇಂದ್ರದ ಅಂತಿಮ ವರ್ಷದ ಬಿಎಸ್‌ಸಿ ಕೃಷಿ ವ್ಯವಹಾರ ನಿರ್ವಹಣೆ ವಿಭಾಗದ ವಿದ್ಯಾರ್ಥಿಗಳು ರೇಷ್ಮೆ ಕೃಷಿ ಒಂದು ನಿರಂತರ ಆದಾಯ ತರುವ ಕೃಷಿ ಖಸುಬು ಮತ್ತು ಬೀಜೋಪಚಾರ ವಿಷಯ ಕುರಿತ ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು.

ರೇಷ್ಮೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀನರಸಯ್ಯ ಮಾತನಾಡಿ, ರೇಷ್ಮೆ ಹೆಚ್ಚು ಇಳುವರಿ, ಹೆಚ್ಚು ಆದಾಯ, ಇಲಾಖೆಯ ಯೋಜನೆಗಳು, ಕೃಷಿ ಹಾಗೂ ರೇಷ್ಮೆಗೂಡು ಮಾರುಕಟ್ಟೆ ಒಂದು ನಿರಂತರ ಆದಾಯ ತರುವ ಕೃಷಿ ಕಸುಬು ಎಂದು ರೈತರಲ್ಲಿ ಅರಿವು ಮೂಡಿಸಿದರು.

ರೇಷ್ಮೆ ಕೃಷಿ ವಿಭಾಗದ ಪ್ರಾಧ್ಯಾಪಕ ಡಾ.ಮಂಜುನಾಥಗೌಡ ಹಾಗೂ ಡಾ.ಎಸ್.ಚಂದ್ರಶೇಖರ್ ಹಿಪ್ಪು ನೇರಳೆ ಬೇಸಾಯ, ತಳಿಗಳು, ಮಣ್ಣಿನ ಫಲವತ್ತತೆ ಹೆಚ್ಚಿಸುವುದು, ಕೀಟ ಸಾಗಾಣಿಕೆ, ಹಾಗೂ ಅದರಿಂದಾಗುವ ಲಾಭಗಳ ಕುರಿತು ಅರಿವು ಮೂಡಿಸಿದರು.

ಪ್ರಾಧ್ಯಾಪಕ ಡಾ.ಆ‌ರ್.ಸಿದ್ದರಾಜ್ ಬೀಜೋಪಚಾರ ಅಧಿಕ ಇಳುವರಿಗೆ ಆಧಾರ, ಬೀಜೋಪಚಾರದಿಂದ ತಡೆಗಟ್ಟ ಬಹುದಾದ ರೋಗಗಳು ರೇಷ್ಮೆ ಕೃಷಿ ವಿಭಾಗದ ಪ್ರಾಧ್ಯಾಪಕ ಡಾ.ಮಂಜುನಾಥಗೌಡ ಹಾಗೂ ಡಾ.ಎಸ್.ಚಂದ್ರ ಶೇಖರ್ ಹಿಪ್ಪು ನೇರಳೆ ಬೇಸಾಯ, ತಳಿಗಳು, ಮಣ್ಣಿನ ಫಲವತ್ತತೆ ಹೆಚ್ಚಿಸುವುದು, ಕೀಟ ಸಾಗಾಣಿಕೆ, ಹಾಗೂ ಅದರಿಂದಾಗುವ ಲಾಭಗಳ ಕುರಿತು ಅರಿವು ಮೂಡಿಸಿದರು.

ಪ್ರಾಧ್ಯಾಪಕ ಡಾ.ಆ‌ರ್.ಸಿದ್ದರಾಜ್ ಬೀಜೋಪಚಾರ ಅಧಿಕ ಇಳುವರಿಗೆ ಆಧಾರ, ಬೀಜೋಪಚಾರದಿಂದ ತಡೆಗಟ್ಟ ಬಹುದಾದ ರೋಗಗಳು ಮತ್ತು ಅವುಗಳಿಗೆ ಬಳಸಬಹುದಾದ ರಾಸಾಯನಿಕ ಮತ್ತು ಜೈವಿಕ ಗೊಬ್ಬರದ ಕುರಿತು ಮಾಹಿತಿ ನೀಡಿದರು.

ಸ್ಥಳೀಯ ರೈತರಾದ ದೊಡ್ಡರಾಮಯ್ಯ, ಸಹಪ್ರಾಧ್ಯಾಪಕಿ ಡಾ.ಸಿ.ಎಂ.ಸವಿತಾ, ಡಾ.ಎಸ್.ಕೆ.ಪೃಥ್ವಿರಾಜು ಮತ್ತಿತರರು ಇದ್ದರು.

ಇದನ್ನೂ ಓದಿ: Tumkur News: ಸರ್ಕಾರಿ ಶಾಲೆಗಳಲ್ಲೂ ಪ್ರತಿಭಾವಂತ ಶಿಕ್ಷಕರಿದ್ದಾರೆ: ಶಾಸಕ ಬಿ. ಸುರೇಶ್‌ಗೌಡ