Thursday, 21st November 2024

Vijayapura News: ಸಂಸ್ಕೃತ ಭಾಷೆ ದೇವವಾಣಿ, ಸರ್ವಶ್ರೇಷ್ಠ ಭಾಷೆ – ಶರಣಬಸಪ್ಪಾ ಕಾಂಬಳೆ ಅಭಿಮತ

ಇಂಡಿ- ಸಂಸ್ಕೃತ ಭಾಷೆಗೆ ತನ್ನದೆಯಾದ ಇತಿಹಾಸ ಹೊಂದಿದ್ದು ಮಾತೃ ಭಾಷೆ ಕನ್ನಡದಲ್ಲಿ ಶೆ. 90 ರಷ್ಟು ಸಂಸ್ಕೃತ ಭಾಷೆ ಸಮ್ಮಿಲಿತವಾಗಿದೆ ಸಂಸ್ಕೃತ ಭಾಷೆ ದೈವವಾಣಿ, ಗಿರಿವಾಣಿ ಸರ್ವಶ್ರೇಷ್ಠ ವಾಣಿ ಎಂದು ವಿಶ್ವವಾಣಿ ಪತ್ರಕರ್ತ ಶರಣಬಸಪ್ಪಾ ಕಾಂಬಳೆ ಹೇಳಿದರು.

ಕರ್ನಾಟಕ ಸಂಸ್ಕೃತ ವಿಶ್ವವಿಧ್ಯಾಲಯ ಸಂಸ್ಕೃತ ಶಿಕ್ಷಣ ನಿರ್ದೇನಾಲಯ ಬೆಂಗಳೂರು. ಶ್ರೀವೃಷಭಲಿಂಗಾರ್ಯ ಕೃಪಾಘೋಷಿತ ಸಂಸ್ಕೃತ ಪಾಠ ಶಾಲೆ ಬೋಳೆಗಾಂವ್ ,ಕಿತ್ತೂರರಾಣಿ ಚೆನ್ನಮ್ಮಾ ಶಾಲೆ ಇಂಡಿ ಇವರ ಸಂಯುಕ್ತಾ ಶ್ರಯದಲ್ಲಿ ಹಮ್ಮಿಕೊಂಡ ಅಸ್ಮಾಕಂ ಸಂಸ್ಕೃತ ಕಾರ್ಯಕ್ರಮ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸಂಸ್ಕೃತ ಭಾಷೆ ಎಲ್ಲಾ ಭಾಷೇಗಳ ಮೂಲ ಬೇರು. ದೇವರನ್ನು ಒಲಿಸಿಕೊಳ್ಳಬೇಕಾದರೆ ಸಂಸ್ಕೃತ ಶ್ಲೋಕಗಳಿಂದ ಮಾತ್ರ ಸಾಧ್ಯೆ.

ಆಂಗ್ಲ ಭಾಷೆ ಅಂತರಾಷ್ಟ್ರೀಯ ಭಾಷೆಯಾದರೆ ಸಂಸ್ಕೃತ ಭಾಷೆ ಅಂತರಲೋಕೀಯಾ ಭಾಷೆ ಪರಲೋಕಿಯಪಿ ಸಂಸ್ಕೃತ ಭಾಷಾ ವರ್ತತಿ, ಸಂಸ್ಕೃತಿ ಭಾಷೆ ಗೊತ್ತಿಲ್ಲದಿದ್ದರೆ ಸ್ವರ್ಗಕ್ಕೆ ಹೋಗುವುದು ಅಸಾಧ್ಯ ಆದ್ದರಿಂದ ಸಂಸ್ಕೃತ ಯಾರ ಸ್ವತ್ತು ಅಲ್ಲ ಇದು ಎಲ್ಲರೂ ಕಲಿಯುವ ಸರಳ ಸುಲಲೀತ ಭಾಷೆ. ಇಂದು ಸರಕಾರಗಳು ಕೂಡಾ ಉದ್ಯೋಗ, ಪ್ರವೇಶ ಇತರೆ ಕ್ಷೇತ್ರಗಳಲ್ಲಿ ಸಂಸ್ಕೃತ ಭಾಷೆ ಕಲಿತ ವಿಧ್ಯಾರ್ಥಿಗಳಿಗೆ ಮೀಸಲಾತಿ ಕಲ್ಪಿಸಬೇಕು ಎಂದಾಗ ಮಾತ್ರ ಸಂಸ್ಕೃತ ಭಾಷೆ ಉಳಿಯಲು ಸಾಧ್ಯ ಎಂದರು.

ಎಲ್ಲಾ ಭಾಷೆಗಳಿಗಿಂತಲೂ ಪ್ರಾಚೀನ ಭಾಷೆ ಸಂಸ್ಕೃತ ಭಾರತ ೨೨ ಅಧಿಕೃತ ಭಾಷೆಗಳಲ್ಲಿ ಸಂಸ್ಕೃತ ಭಾಷೆ ಒಂದು ಇದು ಜಗತ್ತಿನಲ್ಲಿಯೇ ಶ್ರೇಷ್ಠ ಸ್ಥಾನ ಪಡೆದುಕೊಂಡಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಸಂಸ್ಕೃತ ಪರಿಚಯಿಸುವ ಉದ್ದೇಶದಿಂದ ಅಸ್ಮಾಕಂ ಸಂಸ್ಕೃತ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಇದರ ಸದುಪಯೋಗ ಪ್ರತಿಯೋಬ್ಬ ಮಕ್ಕಳು ಪಡೇದುಕೊಂಡು ಪ್ರಾಚೀನ ಭಾರತ ಸಂಸ್ಕೃತಿ ಉಳಿಸಬೇಕು. ಸರ್ವ ಭಾಷೆಗಳಿಗೆ ಸಂಸ್ಕೃತ ಭಾಷೆ ಜನನಿ.ಯವಂ ಸಮಗ್ರ ಕುಟುಂಬ ಸಂಸ್ಕೃತ ಭಾಷೆಂ ಎಂದು ಬೆಳಗಾಂವ್ ವಲಯ ವಿಷಯ ಪರಿವೀಕ್ಷಕ ಜಗದೀಶ ಕರೇಪ್ಪನವರ್ ಸಂಸ್ಕೃತ ಭಾಷೆಯ ಕುರಿತು ವಿವರಣೆ ನೀಡಿದರು.

ರಾಮಾಯಣ ಮಹಾಭಾರತ ಮಹಾಕಾವ್ಯಗಳು ಸಂಸ್ಕೃತದಲ್ಲಿ ರಚನೆಗೊಂಡಿವೆ. ಸಂಸ್ಕೃತ ಭಾಷೆ ವೇದೋಪ ನಿಷತ್ತು ಕಾಲದಿಂದ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದ್ದವು ನಂತರ ದಿನಗಳಲ್ಲಿ ಸಂಸ್ಕೃತ ಭಾಷೆಗೆ ಅಷ್ಟೋಂದು ಮಹತ್ವ ಕೊಡದೆ ಇರುವುದು ನಮ್ಮ ದೇಶದ ದುರ್ದೈವ, ದೇವಭಾಷೆ ,ಶ್ರೇಷ್ಠ ಭಾಷೆ ನಿಜ ಆದರೆ ಶಾಲಾ ಕಾಲೇಜುಗಳಲ್ಲಿ ಇದರ ಬಗ್ಗೆ ನಿರಾಸಕ್ತಿ ತೊರುತ್ತಿದ್ದಾರೆ, ಸರಕಾರ ಪ್ರತಿ ಶಾಲೆ, ಕಾಲೇಜುಗಳಿಗೆ  ಒಂದು ವಿಷಯ ಸಂಸ್ಕೃತ ಭಾಷೆ ಕಡ್ಡಾಯಗೊಳಿಸಿ  ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಹಾಗೂ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಸಂಸ್ಕೃತ ಶಿಕ್ಷಕರನ್ನು ನೇಮಕ ಮಾಡಬೇಕು ಎಂದಾಗ ಮಾತ್ರ ಸಂಸ್ಕೃತ ಭಾಷೆ ಉತ್ತೇಜಿಸಲು ಸಾಧ್ಯ ಎಂದು ನಿವೃತ್ತ ಪ್ರಾಚಾರ್ಯ ಆಯ್.ಸಿ ಪೂಜಾರ ಮಾತನಾಡಿದರು.

ಭಾರತೀಯ ಕಿಸಾನ ಸಂಘದ ರಾಜ್ಯ ಕರ‍್ಯಕಾರಣಿ ಸದಸ್ಯ ಗುರುನಾಥ ಬಗಲಿ  ಸಂಸ್ಕೃತದಲ್ಲಿ ಶ್ಲೋಕ ಹಾಗೂ ಸಂಸ್ಕೃತ ಉಪನಿಷತ್ತು ಹೇಳಿದರು. ಶ್ರೀಮತಿ ಮಾಲಾ ತಾಂಡೂರ ಸಂಸ್ಕೃತ ಭಾಷೆ ನಡೆದು ಬಂದ ದಾರಿ ಕುರಿತು ಮಾತನಾಡಿದರು.

ಉದ್ಘಾಟಕರಾಗಿ ಅನೀಲ ಪತಂಗೆ , ಅಧ್ಯಕ್ಷತೆ ಆಕಾಶ ಇಂಡಿ ವಹಿಸಿದರು, ಮಾಜಿ ಪುರಸಭೆ ಸದಸ್ಯ ಸಿದ್ದು ಡಂಗಾ, ವಿನಯಾ ಕುಲಕರ್ಣಿ ವೇದಿಕಯಲ್ಲಿದ್ದರು.

ಎಸ್.ಸಿ ಇಂಡಿ, ಎಸ್.ಎಂ ಅಂಗಡಿ,ಜಿ.ಎನ್ ಘೋರ್ಪಡೆ, ಅಳ್ಳೊಳ್ಳಿ ,ಎಸ್.ಕೆ ಮಿರಗಿ, ಸವಿತಾ ಕಟ್ಟಿಮನಿ, ಸುಮಾ ಹೊಸಮನಿ, ಪ್ರೀತಿ ರಾಠೋಡ, ಎಸ್ಜಿ ಕಟ್ಟಿಮನಿ ಸೇರಿದಂತೆ ತಾಲೂಕಿನ ವಿವಿಧ ಸಂಸ್ಕೃತ ಪಾಠ ಶಾಲೆಗಳ ಮುಖ್ಯ ಗುರುಗಳು ,ಶಾಲಾ ಶಿಕ್ಷಕರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

ಶ್ರೀಮತಿ ಸ್ವಪ್ನಾ ಎಸ್. ಇಂಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಇದೇ ಸಂದರ್ಬದಲ್ಲಿ ತಾಲೂಕಿನ ವಿವಿಧ ಸಂಸ್ಕೃತ ಶಾಲೆಗಳ ವಿಧ್ಯಾರ್ಥಿ, ವಿಧ್ಯಾರ್ಥಿನಿಯವರು ಸಂಸ್ಕೃತ ಶ್ಲೋಕ ಹಾಗೂ ಸಂಸ್ಕೃತ ನಾಟಕ ,ಸಂಸ್ಕೃತ ಗೀತೆ ಹಾಡುವ ಮೂಲಕ ಇಡೀ ಪಾಲಕ ,ಪೋಷಕರ ಗಮನ ಸೆಳೆದರು.

ಇದನ್ನೂ ಓದಿ: Ford To Return To India : 2 ವರ್ಷಗಳ ಬಳಿಕ ಭಾರತಕ್ಕೆ ಮರಳಿದ ಫೋರ್ಡ್‌