Monday, 23rd December 2024

Vijayapura News: ಶ್ರೀಸಿದ್ದೇಶ್ವರ ಶ್ರೀಗಳು ಈ ಭಾಗದ ಜನರಿಗೆ ಹೃದಯ ಶ್ರೀಮಂತಿಕೆ ನೀಡಿದ್ದಾರೆ: ಶಾಸಕ ಯಶವಂತರಾಯಗೌಡ ಪಾಟೀಲ

ಇಂಡಿ: ನಡೆದಾಡುವ ದೇವರಾದ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳು ಈ ಭಾಗದ ಜನರಿಗೆ ಸಂಸ್ಕಾರ ಹಾಗೂ ಹೃದಯ ಶ್ರೀಮಂತಿಕೆಯನ್ನು ಕರುಣಿಸಿ ಜ್ಞಾನದ ದಾಸೋಹ ನೀಡಿದ ಮಹಾನ್ ದಾರ್ಶನಿಕ ಯುಗಪುರುಷ ಇವರ ಆದರ್ಶ ಗಳು ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ(MLA YeshwantRaya Gowda Patil) ಹೇಳಿದರು.

ಸಾಮಾಜಿಕ ಅರಣ್ಯ ವಿಭಾಗ ವಿಜಯಪೂರ, ಸಾಮಾಜಿಕ ಅರಣ್ಯ ವಲಯ ಇಂಡಿ ಇವರ ಸಹಯೋಗದಲ್ಲಿ ಸಾವಳ ಸಂಗ ಗುಡ್ಡದ ಜ್ಞಾನಯೋಗಿ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳ ವೃಕ್ಷೋಧ್ಯಾನ ಭೂಮಿ ಪೂಜೆಯನ್ನು ನೆರವೇಸರಿಸಿ ಮಾತನಾಡಿದ ಅವರು ಈ ಭಾಗ ನೀರಾವರಿಯಿಂದ ವಂಚಿತವಾಗಿತ್ತು ಪೂಜ್ಯ ಶ್ರೀಗಳು ರೈತರ ಬದಕು ಭವಣೆ ಅರಿತು ಜನಪ್ರತಿನಿಧಿಗಳಿಗೆ ಒಂದು ಸಂದೇಶ ನೀಡಿದರು ಈ ಭಾಗದಲ್ಲಿ ರೈತರ ಭೂಮಿಗೆ ಒಂದು ಹನಿ ನೀರು ಒದಗಿಸಿ ಪುಣ್ಯ ಕಟ್ಟಿಕೊಳ್ಳಿ ಎಂಬ ಅವರ ವಾಣಿಗೆ ಜನಪ್ರತಿನಿಧಿಗಳು ಒಗ್ಗೂಡಿ ಈ ಭಾಗದ ನೀರಾವರಿಗೆ ಶ್ರಮಿಸಲಾಗುತ್ತಿದೆ.

ಸಾವಳಸಂಗ ಗುಡ್ಡ ಅತೀ ಸೌದರ್ಯ ತಾಣವಾಗಿದ್ದು ಈ ಪ್ರದೇಶದಲ್ಲಿ ಪೂಜರು ಪಾದಸ್ಪರ್ಷ ಮಾಡಿದ್ದಾರೆ ಅಂದಿ ನಿಂದ ಇಂದಿನವರೆಗೆ ಸಾಮಾಜಿಕ ಅರಣ್ಯವಲಯದ ಅಧಿಕಾರಿಗಳು ಒಳ್ಳೆಯ ಗಿಡಮರಗಳನ್ನು ಬೆಳೆಸಿ ಸಸ್ಯಕಾಶಿ ಮಾಡಿದ್ದಾರೆ. ಈ ಸಾವಳಸಂಗ ಗುಡ್ಡ ಪ್ರದೇಶ ಶ್ರೀಸಿದ್ದೇಶ್ವರ ಶ್ರೀಗಳ ಹೆಸರು ನಾಮಕರಣ ಮಾಡಲಾಗಿದ್ದು ಪವಿತ್ರ ತಾಣವಾಗಿ ಕಂಗೊಳಿಸುತ್ತಿದ್ದೆ ಮುಂದೊಂದು ದಿನ ಸಾಲಸಂಗ ಗುಡ್ಡ ಪ್ರದೇಶ ಶ್ರೀಸಿದ್ದೇಶ್ವರ ಮಹಸ್ವಾಮಿ ಗಳ ಪ್ರವಾಸ ತಾಣವಾಗಿ ಇಡೀ ಪ್ರವಾಸಿಗರಿಗೆ ಅಕರ್ಷಿಣಿಯ ಕೇಂದ್ರವಾಗುವುದರಲ್ಲಿ ಸಂದೇಹವಿಲ್ಲ. ಸರಕಾರದಿಂದ ಸಿಗುವ ಸೌಲಭ್ಯ ಪ್ರಮಾಣಿಕವಾಗಿ ತಲುಪಿಸಿ ರಮಣಿಯ ತಾಣ ಮಾಡುವುದಾಗಿ ಹೇಳಿದರು.

ಬಾಲಗಾಂವ್ ಕಾತ್ರಾಳ ಗುರುದೇವಾಶ್ರಮ ಅಮೃತಾನಂದ ಮಹಾಸ್ವಾಮಿಗಳು ಅರ್ಶೀವಚನ ನೀಡಿದರು. ಭಾಲ್ಕಿಯ ಸಿದ್ದರಾಮೇಶ್ವರ ಪಟ್ಟದೇವರು ಸಾನಿಧ್ಯ ವಹಿಸಿದರು.

ಶ್ರೀಮತಿ ಸಾವಿತ್ರಿ ಮೋರೆ ಅಧ್ಯಕ್ಷರು ಗ್ರಾ.ಪಂ ಕೋಳೂರಗಿ, ಎ.ಸಿ, ಅಬೀದ ಗದ್ಯಾಳ, ತಹಶೀಲ್ದಾರ ಕಡಕಭಾವಿ, ತಾ.ಪಂ ಅಧಿಕಾರಿ ನಂದೀಪ ರಾಠೋಡ , ಚಡಚಣ ತಾ.ಪಂ ಅಧಿಕಾರಿ ಖಡಗೇಕರ್, ನೌ.ಸಂಘದ ಅಧ್ಯಕ್ಷ ಬಸವ ರಾಜ ರಾವೋರ, ವನೀತಾ ಆರ್ ಡಿ.ಎಫ್ ಓ ಸಾಮಾಜಿಕ ಅರಣ್ಯ ವಿಜಯಪೂರ, ಶಿವಶರಣಯ್ಯಾ ಡಿ.ಎಫ್. ಓ ಪ್ರಾದೇಶಿಕ ಅರಣ್ಯ ವಲಯ ವಿಜಯಪೂರ, ಅನಂತಕುಮಾರ ಪಾಕಿ ಎಸಿ. ಎಫ್. ಸಾಮಾಜಿಕ ಅರಣ್ಯ ವಿಜಯಪೂರ, ಭಾಗ್ಯವಂತ ಮಸೂದಿ ಎ.ಸಿ.ಓ ಎಫ್ ಪ್ರಾದೇಶಿಕ ಅರಣ್ಯ ವಿಜಯಪೂರ, ಮಂಜುನಾಥ ಧೂಳೆ ಆರ್ .ಎಫ್ ಓ ಸಾಮಾಜಿಕ ಅರಣ್ಯ ಇಂಡಿ, ಎಸ್.ಜಿ ಸಂಗಾಲಕ ಆರ್.ಎಫ್ ಓ ಪ್ರಾದೇಶಿಕ ಅರಣ್ಯ ಇಂಡಿ, ದುಂಡಪ್ಪಾಸಾಹುಕಾರ ಖೇಡ, ಎಂ. ಆರ್ ಪಾಟೀಲ, ಶ್ರೀಮಂತ ಇಂಡಿ, ಗುರನಗೌಡ ಪಾಟೀಲ,ಮಹಾದೇವ ಪೂಜಾರಿ, ಭೀಮುಸಾಹುಕಾರ ಬಸನಾಳ, ಶೇಖರ ನಾಯಕ, ಧನರಾಜ ಮುಜಗೊಂಡ ಸೇರಿದಂತೆ ಅನೇಕರಿದ್ದರು.

ಇದನ್ನೂ ಓದಿ: #VijayapuraBreaking