ತಿಪಟೂರು: ೧೮ ವರ್ಷ ಪೂರ್ಣಗೊಂಡ ಎಲ್ಲಾ ಪ್ರಜೆಗಳು ಗ್ರಾಮಾಂತರದಲ್ಲಿ ತಮ್ಮ ಹತ್ತಿರದ ಗ್ರಾಮ ಪಂಚಾಯಿತಿ ಹಾಗೂ ನಗರವಾಸಿಗಳು ನಗರಸಭೆಯ ಚುನಾವಣಾ ಸಹಾಯಕರನ್ನು ಭೇಟಿ ಮಾಡಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಸೇರ್ಪಡೆ ಮಾಡಿ ಕೊಳ್ಳುವಂತೆ ತಾಲ್ಲೂಕು ಉಪವಿಭಾಗದಿ ಕಾರಿಗಳಾದ ಶ್ರೀಮತಿ ಕಲ್ಪಾಶ್ರೀಯವರು ತಿಳಿಸಿದರು.
ನಗರದ ಪೈ ಹೋಟೇಲ್ ಬಳಿ ಮಾನವ ಸರಪಳಿ ಮಾಡಿ ಮೇಣದ ಬತ್ತಿ ಬೆಳಗಿ ಸುವ ಮೂಲಕ ಅಂದೋಲನದ ಮೂಲಕ ಸಾರ್ವಜನಿಕರಿಗೆ ಮತದಾರರ ಪಟ್ಟಿಗೆ ಸೇರ್ಪಡೆ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ದಂಡಾಧಿಕಾರಿ ಚಂದ್ರಶೇಖರ್, ಸ್ಪೀಪ್ ಸಮಿತಿ ಅದ್ಯಕ್ಷರಾದ ಸುದರ್ಶನ್, ನಗರಸಭೆ ಆಯುಕ್ತ ಉಮಾಕಾಂತ್, ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಮತ್ತಿತ್ತರು ಹಾಜರಿದ್ದರು.