ಚಿಂತಾಮಣಿ: ಅಲ್ಪಸಂಖ್ಯಾತರ ಸಮುದಾಯದ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಒತ್ತು ನೀಡಲು ವಕ್ಫ್ ಬೋರ್ಡ್ ವತಿಯಿಂದ ಪ್ರತಿ ಜಿಲ್ಲೆಯಲ್ಲೂ ಪದವಿ ಪೂರ್ವ ಕಾಲೇಜು ಸ್ಥಾಪನೆ ಮಾಡಲು ವಕ್ಫ್ ಸಚಿವ ಜಮೀರ್ ಅಹ್ಮದ್ ಭರವಸೆ ನೀಡಿದ್ದು ಅದರಂತೆ ಜಿಲ್ಲೆಯ ಅಲಿಪುರ ಗ್ರಾಮದ ವಕ್ಫ್ ಸಂಸ್ಥೆ ಅಂಜುಮನ್-ಈ-ಜಾಫ್ರಿಯಾದಲ್ಲಿ ಮಹಿಳಾ ಕಾಲೇಜು ಸ್ಥಾಪನೆಯಾಗಲಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಮುಜಾಮಿಲ್‌ಪಾಷಾ ತಿಳಿಸಿದರು.
ಚಿಂತಾಮಣಿಗೆ ನಗರಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಕ್ಕಳಿಗಾಗಿ ಮಂಜೂರು ಆಗಿರುವ ಸ್ಥಳದಲ್ಲಿಯೇ ಮಹಿಳಾ ಕಾಲೇಜು ನಿರ್ಮಾಣ ಮಾಡಲು ಶಂಕು ಸ್ಥಾಪನೆ ಈಗಾಗಲೇ ಮಾಡಲಾಗಿದೆ ಎಂದರು.
ಮಹಿಳೆಯರಿಗಾಗಿ ಪ್ರತ್ಯೇಕ ಮಹಿಳಾ ಕಾಲೇಜ್ ಕಟ್ಟಡಗಳ ಸ್ಥಾಪನೆಗೆ ಅಂದಾಜು ವೆಚ್ಚ 3.18ಕೋಟಿ ಸರ್ಕಾರದಿಂದ ಅನುದಾನ ಮಂಜೂರು ಮಾಡಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆಧ್ಯತೆ ನೀಡಲಾಗುವುದು. ಸಮುದಾಯಕ್ಕೆ ಸೇವೆ ಮಾಡುವ ಬದ್ಧತೆ ಇದ್ದರೆ.ಏನೆಲ್ಲಾ ಸಾಧನೆ ಮಾಡಬಹುದು ಎಂಬುದಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಉತ್ತಮ ಉದಾಹರಣೆ ಎಂದು ಎಂದು ಮುಜಮ್ಮಿಲ್ ಪಾಷಾ ಹೇಳಿದರು.