ಚಿಕ್ಕನಾಯಕನಹಳ್ಳಿ: ಮಹಿಳಾ ಸಬಲೀಕರಣಕ್ಕೆ ಹಾಗು ಉನ್ನತಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೊಡುಗೆ ಅಪಾರ ಎಂದು ವಿಶ್ವವಾಣಿ ಪತ್ರಿಕೆ ತಾಲ್ಲೂಕು ವರದಿಗಾರ ಧನಂಜಯ್ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಅರುಣೋದಯ ಜ್ಞಾನವಿಕಾಸ ಕೇಂದ್ರದ ವಾರ್ಷಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಕುಟುಂಬವನ್ನು ಮೀಟರ್ ಬಡ್ಡಿ ಸುಳಿಯಿಂದ ರಕ್ಷಿಸಲಾಗಿದೆ. ದರ್ಮಸ್ಥಳ ಸಂಘದ ಕುರಿತು ಯೂಟ್ಯೂಬ್ ಚಾನಲ್‌ಗಳಲ್ಲಿ ಬರುತ್ತಿರುವ ಅನೇಕ ವಿಷಯಗಳ ಬಗ್ಗೆ ಮಹಿಳೆಯರು ಎಚ್ಚರದಿಂದ ವ್ಯವಹರಿಸಬೇಕು. ಸಂಘದ ದ್ಯೇಯೋಧ್ದೇಶಗಳನ್ನು ಅರಿತು ವ್ಯವಹರಿಸುವುದು ಬಹಳ ಮುಖ್ಯ. ಶಿಕ್ಷಣ, ಆರೋಗ್ಯ, ಉಳಿತಾಯ ಮನೋಭಾವನೆ ಸೇರದಂತೆ ಎಲ್ಲಾ ವಿಭಾಗಗಳಲ್ಲೂ ಮಹಿಳೆಯರಿಗೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿ ಸರ್ವಾಂಗೀಣ ಅಭಿವೃದ್ದಿಗೆ ಡಾ. ವಿರೇಂದ್ರ ಹೆಗ್ಗಡೆಯವರು ಶ್ರಮಿಸಿದ್ದಾರೆ ಎಂದು ನುಡಿದರು.
ತಾಲ್ಲೂಕು ಯೋಜನಾಧಿಕಾರಿ ಪ್ರೇಮಾನಂದ, ವಲಯದ ಮೇಲ್ವಿಚಾರಕ ಭಾಸ್ಕರ್, ಜ್ಞಾನವಿಕಾಸ ಸಮನ್ವಯಾ ಧಿಕಾರಿ ಕವಿತಾ, ಸ್ಪರ್ಧೆಗಳಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿದರು. ಸೇವಾಪ್ರತಿನಿಧಿ ನೇತ್ರಾವತಿ, ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷೆ ಚಂದ್ರಕಲಾ ಒಕ್ಕೂಟದ ಅಧ್ಯಕ್ಷ ಶಿವಕುಮಾರ್, ಸೇರಿದಂತೆ ಇತರರು ಇದ್ದರು.