ತುಮಕೂರು: ತುಮಕೂರಿನ ಮೊಟ್ಟ ಮೊದಲ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಸಿದ್ಧಾರ್ಥ 90.8 ಸಿಆರ್‌ಎಸ್ ಹಾಗೂ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವತಿಯಿಂದ 7 ದಿನಗಳ ಉಚಿತ ರೇಡಿಯೋ ಜಾಕಿ ತರಬೇತಿ ಕಾರ್ಯಾಗಾರವನ್ನು ಬೆಂಗಳೂರಿನ ಆಕಾಶವಾಣ ಕೇಂದ್ರದ ಹಿರಿಯ ಉದ್ಘೋಷಕಿ ಬಿ.ಕೆ.ಸುಮತಿ ಉದ್ಘಾಟಿಸಿದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ರೇಡಿಯೋ ಬೆಳೆದು ಬಂದ ಹಾದಿ ಹಾಗೂ ಈಗಿನ ಅಳಿವು ಉಳಿವು ಜೊತೆಗೆ ಪತ್ರಿಕೋದ್ಯಮದ ಪ್ರಸ್ತುತ ಸ್ಥಿತಿಗತಿಗಳ ಕುರಿತು ತಿಳಿಸಿದರು.
ರೇಡಿಯೋ ಕೌಶಲ್ಯಗಳನ್ನು ವೃದ್ಧಿ ಪಡಿಸಿಕೊಳ್ಳುವಂತಹ ತಂತ್ರಗಳ ಬಗ್ಗೆ, ರೇಡಿಯೋ ಕಾರ್ಯಕ್ರಮಗಳ ಪ್ರಸ್ತುತ ಪಡಿಸುವಾಗ ಮುಖ್ಯವಾಗಿ ಬೇಕಾಗಿರುವ ಧ್ವನಿಯ ಏರಿಳಿತಗಳ ಬಗ್ಗೆ, ರೇಡಿಯೋ ಹುಟ್ಟು ಬೆಳವಣಿಗೆ ಬಗೆಗೆ ಹಾಗೂ ಖಾಸಗಿ ರೇಡಿಯೋ, ಸರ್ಕಾರಿ ರೇಡಿಯೋಗಳ ಮತ್ತು ಸಮುದಾಯ ಬಾನುಲಿಯ ಕಾರ್ಯಕ್ರಮಗಳ ವ್ಯತ್ಯಾಸದ ಬಗ್ಗೆ ವಿವರಿಸಿದರು.
ಕಲಿಕೆ ಹಂತದಲ್ಲೇ ತಮ್ಮಲ್ಲಿರುವಂತಹ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು ಹಾಗೂ ಪತ್ರಿಕೋದ್ಯಮ ಕ್ಷೇತ್ರವು ಎಲ್ಲಾ ವಿಷಯಗಳಿಗಿಂತ ವಿಶೇಷವಾಗಿದ್ದು, ಎಲ್ಲ ರೀತಿಯ ಅಂಶಗಳನ್ನು ಒಳಗೊಂಡಿದೆ ತಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಹೆಚ್ಚು ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದರು.
ಪತ್ರಿಕೋದ್ಯಮ ಕ್ಷೇತ್ರವು ಸೃಜನಶೀಲವಾದ ಮಾಧ್ಯಮ. ಕೇಳುಗರ ಆಸಕ್ತಿಯ ಮೇರೆಗೆ ಉತ್ತಮವಾದ ಗುಣಮಟ್ಟದ ಪರಿಕಲ್ಪನೆಗಳ ಮೂಲಕ ಕಾರ್ಯಕ್ರಮಗಳನ್ನು ನೀಡಿದಾಗ ಎಂದಿಗೂ ರೇಡಿಯೋಗಳು ಅದರ ಅಸ್ತಿತ್ವವನ್ನು ಕಳೆದುಕೊಳ್ಳುವುದಿಲ್ಲ. ಇಂದಿನ ಜಗತ್ತು ಗುಣಮಟ್ಟವಾದ ವಿಷಯಗಳನ್ನು ನಿರೀಕ್ಷಿಸುತ್ತದೆ ಅಂತಹ ವಿಷಯಗಳ ಕುರಿತಾಗಿ ರೇಡಿಯೋ ಕಾರ್ಯಕ್ರಮಗಳನ್ನು ನೀಡಿದಾಗ ಜನರು ಕೂಡ ಕೇಳಿಸಿಕೊಳ್ಳುತ್ತಾರೆ. ಹಾಗಾಗಿ ರೇಡಿಯೋ ಕಾಲಕ್ಕೆ ತಕ್ಕಂತೆ ಅದರ ರೂಪವನ್ನು ಬದಲಾಗಿಸಿ ಕೊಳ್ಳುತ್ತದೆಯೇ ವಿನಹ ಅದು ತನ್ನ ಅಸ್ತಿತ್ವವನ್ನು ಕಳೆದು ಕೊಳ್ಳುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ರೇಡಿಯೋಗೆ ಧ್ವನಿ ಎಂಬುದು ಮೊದಲ ಸ್ಥಾನ ಎಲ್ಲರಿಗೂ ಅವರದೇ ಆದಂತ ಅನನ್ಯ ಕೌಶಲ್ಯಗಳು ಮುಖ್ಯವಾಗಿರು ತ್ತದೆ ಸಿಕ್ಕಂತಹ ಅವಕಾಶಗಳನ್ನು ಮಾರ್ಗದರ್ಶಕರೊಂದಿಗೆ ಸಂವಹನ ಬೆಳಸಿಕೊಂಡು ಒಳ್ಳೆಯ ಸ್ಥಾನದಲ್ಲಿ ಇರಬೇಕು ಎಂದು ಹೇಳಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ ಮಾತನಾಡಿ, ಬದಲಾವಣೆ ಜಗದ ನಿಯಮ ನಮ್ಮ ನಿರೀಕ್ಷೆಗಳನ್ನು ಕಾಲಕ್ಕೆ ತಕ್ಕ ಹಾಗೆ ಬದಲಾಯಿಸಬೇಕು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪರಿಣ ತರಾಗಬೇಕು ಎಲ್ಲಾ ಕ್ಷೇತ್ರಗಳ ಮಾರ್ಗದರ್ಶನ ಪಡೆದು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಹಾಗೆ ರೇಡಿಯೋ ಧ್ವನಿ ಮುಖ್ಯ ಎಂದು ತಿಳಿಸಿದರು.
ಎಸ್‌ಎಸ್‌ಐಬಿಎಂ ವಿಭಾಗದ ಪ್ರಾಂಶುಪಾಲರಾದ ಡಾ.ಮಮತ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಬಿ.ಟಿ. ಮುದ್ದೇಶ್, ಕಾರ್ಯಾಗಾರದ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಶ್ವೇತ ಎಂ.ಪಿ., ಡಾ ಜ್ಯೋತಿ ಸಿ. ಕಿರಣ್, ಶಿವಕುಮಾರ್, ರೇಡಿಯೋ ಸಿದ್ಧಾರ್ಥ 90.8 ಸಿಆರ್‌ಎಸ್‌ನ ಸಿಬ್ಬಂದಿ ಗೌತಮ್, ಸುದರ್ಶನ್, ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಮಣ , ಪತ್ರಿಕೋದ್ಯಮ ವಿದ್ಯಾರ್ಥಿಗಳು, ಎಸ್‌ಎಸ್‌ಸಿಎಂಎಸ್‌ನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಕಾರ್ಯಾ ಗಾರಕ್ಕೆ ನೊಂದಾಯಿಸಿಕೊಂಡ ವಿವಿಧ ಜಿಲ್ಲೆಗಳಿಂದ ಸುಮಾರು 20ಕ್ಕೂ ಹೆಚ್ಚು ಆಸಕ್ತರು ಉಚಿತ ಕಾರ್ಯಾಗಾರ ದಲ್ಲಿ ಭಾಗವಹಿಸಿದರು. ಸೆ.9ರಂದು ಪ್ರಾರಂಭವಾಗುವ ಕಾರ್ಯಾಗಾರ ಸೆ.17ರಂದು ಮುಕ್ತಾಯಗೊಳ್ಳಲಿದೆ.