ತುಮಕೂರು:ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಗಣಿತಶಾಸ್ತ್ರ ವಿಷಯದ ಪುನಶ್ಚೇತನ ಶೈಕ್ಷಣಿಕ ಕಾರ್ಯಾಗಾರ ವನ್ನು ನಡೆಸಲಾಯಿತು.
ಉದ್ಘಾಟನೆಯನ್ನು ವಿದ್ಯಾನಿಧಿ ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್ ಕುಮಾರ್.ಎನ್.ಬಿ ನೆರವೇರಿಸಿ ಮಾತನಾಡಿ, ಗಣಿತಶಾಸ್ತ್ರ ವಿಷಯ ಕಬ್ಬಿಣದ ಕಡೆಲೆಯಾಗಿದ್ದು ಇಂತಹ ಕಾರ್ಯಾಗಾರದಿಂದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗೆ ಉಪಯೋಗ ವಾಗುತ್ತದೆ ಎಂದು ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಾಧರ್ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ(ಅತಿ ಹೆಚ್ಚು ಅಂಕ ಗಳಿಸಿದ) ಹಾಗೂ ಗಣಿತದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಜಿಲ್ಲೆಯ ಫಲಿತಾಂಶವನ್ನು ಉತ್ತಮ ಪಡಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಸಿದ್ದೇಶ್ವರ ಸ್ವಾಮಿ, ಗಂಗಾಧರಯ್ಯ, ಸಂಪ ನ್ಮೂಲ ವ್ಯಕ್ತಿ ಅನಂತಕುಮಾರ್, ಕೆ.ಆರ್. ಲೋಕೇಶ್ ಬಾಬು, ಜಿ.ಹನುಮಂತಯ್ಯ, ಜಾನಕಿರಾಮ, ಶ್ರೀಧರದತ್ತರಾಜು, ವಿದ್ಯಾರ್ಥಿಗಳಿದ್ದರು.