ಚಿಕ್ಕನಾಯಕನಹಳ್ಳಿ: ಕುಪ್ಪೂರೇಶ್ವರ ಪತ್ತಿನ ಸಹಕಾರ ಸಂಘದ ಸಂಸ್ಥಾಪಕರಾಗಿ ಲಿಂಗೈಕ್ಯ ಡಾ.ಯತೀಶ್ವರಶೀವಾಚಾರ್ಯರು ಸಮಾಜಕ್ಕೆ ಸೇವೆಸಲ್ಲಿಸಿದ್ದಾರೆ ಎಂದು ಸಹಕಾರ ಸಂಘದ ಅಧ್ಯಕ್ಷರಾದ ವಾಗೀಶ್‌ಪಂಡಿತಾರಾಧ್ಯರು ಹೇಳಿದರು.
ಪಟ್ಟಣದ ಕುಪ್ಪೂರೇಶ್ವರ ಪತ್ತಿನ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಲಿಂಗೈಕ್ಯ ಡಾ.ಯತೀಶ್ವರರು ಕುಪ್ಪೂರು ಗದ್ದಿಗೆ ಮಠದ ಅಭಿವೃದ್ದಿಗೆ ಕಾರಣೀ ಭೂತ ರಾಗಿದ್ದವರು ತಾಲ್ಲೂಕಿನ ಜನತೆಯ ಆರ್ಥಿಕತೆ ಸುಧಾರಿಸುವ ಸದುದ್ದೇಶದಿಂದ ಷೇರುದಾರರನ್ನು ಒಗ್ಗೂಡಿಸಿ ಕುಪ್ಪೂರೇಶ್ವರ ಪತ್ತಿನ ಸಹಕಾರ ಸಂಘವನ್ನು ೨೦೦೪- ೦೫ನೇಸಾಲಿನಲ್ಲಿ ಸ್ಥಾಪನೆಮಾಡಿದರು. ಅಂದಿನಿAದ ಇಂದಿಗೂ ಪತ್ತಿನ ಸಹಕಾರ ಸಂಘ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ.
ಈ ಸಹಕಾರ ಸಂಘದಿ0ದ ವ್ಯಾಪಾರ,ವಾಹನಸಾಲ,ಅಡಮಾನಸಾಲವನ್ನು ನೀಡಲಾಗುತ್ತಿದ್ದು ಯತೀಶ್ವರರ ಅಕಾಲಿಕ ಮರಣದಿಂದ ಪತ್ತಿನ ಸಹಕಾರ ಸಂಘಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.ಶ್ರೀಗಳು ಬೆಳೆಸಿ ಹೋಗಿರುವ ಈ ಪತ್ತಿನ ಸಹಕಾರ ಸಂಘವನ್ನು ಅವರು ತೋರಿರುವ ಮಾರ್ಗದರ್ಶನದಲ್ಲಿ ನೆಡೆಸಿಕೊಂಡು ಹೋಗಲಾಗು ತ್ತಿದೆ ಎಂದರು.
ಕುಪ್ಪೂರೇಶ್ವರ ಪತ್ತಿನ ಸಹಕಾರ ಸಂಘದಲ್ಲಿ ೧೨೦೦ ಷೇರುದಾರರು ಇದ್ದು ಸದರಿ ೨.೫೦ಕೋಟಿ ಹಣವನ್ನು ಸಾಲವಾಗಿ ನೀಡಿದ್ದು. ೧೬.೫೦ ರೂ ಲಕ್ಷ ಲಾಭವನ್ನು ಪಡೆದಿದೆ. ಪತ್ತಿನ ಸಹಕಾರ ಸಂಘದಲ್ಲಿ ಲಿಂಗೈಕ್ಯ ಹಿರಿಯ ಶ್ರೀ ಚಂದ್ರಶೇಖರ ಶಿವಚಾ ರ್ಯರ ನೆನಪಿನಲ್ಲಿ ಚಂದ್ರಶೇಖರ ವಿಕಾಸ ನಿಶ್ಚಿತ ಠೇವಣೆಯನ್ನು ತೆರೆಯಲಾಗಿದೆ.
ಇಲ್ಲಿ ಗ್ರಾಹಕರು ಹಣವನ್ನು ಹೂಡಿ ದರೆ ಕೇವಲ ೭ವರ್ಷದಲ್ಲಿ ದ್ವಿಗುಣವಾಗುತ್ತದೆ ಆಸಕ್ತರು ಈ ಅನುಕೂಲತೆಯನ್ನು ಬಳಸಿ ಕೊಳ್ಳಬಹುದಾಗಿದೆ ಎಂದರು.
ಈ ವೇಳೆ ಪ.ಸ. ಸಂಘದ ಉಪಾಧ್ಯಕ್ಷರಾದ ಟಿ.ಎಂ.ಪ್ರಸನ್ನಕುಮಾರ್, ನಿರ್ದೇಶಕರುಗಳಾದ ಕೆ.ವೈ.ಮಹೇಶ್, ಕೆ.ಎಸ್.ಸುರೆಶ್, ಮಲ್ಲಿಕಾರ್ಜುನಯ್ಯ, ತ್ಯಾಗರಾಜು, ಸಿ.ಎಂ.ಶ0ಕರಪ್ಪ, ಆನಂದಚಾರ್, ಬಿ.ಎಂ.ರಾಧಾಮಣಿ, ಮಹದೇವಮ್ಮ,ಟಿ. ಬಿರೇಖಾ, ಪುಷ್ಪಲತಾ ಹಾಗು ಪುರಸಭಾ ಸದಸ್ಯ ಸಿ.ಮಲ್ಲಿಕಾರ್ಜುನಸ್ವಾಮಿ, ಷೇರುದಾರರಾದ ಕೊಬ್ಬರಿ ಲಿಂಗರಾಜಪ್ಪ ಸೇರಿದಂತೆ ಬ್ಯಾಂಕಿನ ಕಾನೂನು ಸಲಹೇಗಾರರಾದ ರವೀಂದ್ರಕುಮರ್, ಬ್ಯಾ0ಕಿನ ವ್ಯೆವಸ್ಥಾಪಕರಾದ ಶ್ರೀಧರ್ ಸೇರಿದಂತೆ ಮುಂತಾದವರಿದ್ದರು.