Tuesday, 7th January 2025

Youth Hospitalized: ಜೈ ಭೀಮ್ ಹಾಡು ಹಾಕಿದ್ದಕ್ಕೆ ದಲಿತ ಯುವಕನ ಮೇಲೆ ಗಂಭೀರ ಹಲ್ಲೆ: ಯುವಕ ಆಸ್ಪತ್ರೆಗೆ ದಾಖಲು

ಗುಬ್ಬಿ: ರಸ್ತೆಯಲ್ಲಿ ಸಂಚರಿಸುತ್ತಿದ್ದ ಹಾಲಿನ ಗಾಡಿಯಲ್ಲಿ ಕೇಳಿ ಬರುತ್ತಿದ್ದ ಅಂಬೇಡ್ಕರ್ ಅವರ ಜೈ ಭೀಮ್ ಹಾಡು ಕೇಳಿ ಆಕ್ರೋಶ ಗೊಂಡು ಹಾಲಿನ ವಾಹನ ತಡೆದು ಈ ಹಾಡು ಹಾಕದಂತೆ ವಾಹನದಲ್ಲಿದ್ದ ದಲಿತ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಮರ್ಮಾಂಗಕ್ಕೆ ಗಂಭೀರವಾಗಿ ಹೊಡೆದು ಜಾತಿ ನಿಂದನೆ ಮಾಡಿರುವ ಘಟನೆಯ ತಾಲ್ಲೂಕಿನ ಮುದ್ದನಹಳ್ಳಿ ಗ್ರಾಮದ ಬಳಿ ನಡೆದಿದೆ ಎಂದು ಗುಬ್ಬಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲ್ಲೂಕಿನ ಕಸಬಾ ಹೋಬಳಿ ಮುದ್ದನಹಳ್ಳಿ ಗ್ರಾಮದ ರೈಲ್ವೆ ಇಲಾಖೆ ಪೊಲೀಸ್ ಚಂದ್ರಶೇಖರ್ ಮತ್ತು ಮತ್ತೊಬ್ಬ ವ್ಯಕ್ತಿ ನರಸಿಂಹರಾಜು ಎನ್ನುವವರು ಜಾತಿ ನಿಂದನೆ ಮಾಡಿ ದಲಿತ ಯುವಕನ ಮರ್ಮಾಂಗಕ್ಕೆ ಗಂಭೀರವಾಗಿ ಹಲ್ಲೆ ಮಾಡಿರುವ ವ್ಯಕ್ತಿಗಳು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಹಲ್ಲೆಗೊಳಗಾದ 19 ವರ್ಷದ ದೀಪು ಎಂಬಾತ ತುಮಕೂರು ಗ್ರಾಮಾಂತರದ ಸಿರಿವರ ಗ್ರಾಮದ ದಲಿತ ಸಮುದಾಯದ ಯುವಕ ಎನ್ನಲಾಗಿದ್ದು ಮತ್ತೊಬ್ಬ ನರಸಿಂಹಮೂರ್ತಿ ಸೇರಿದಂತೆ ಇಬ್ಬರು ಗುಬ್ಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಂದಿನಂತೆ ಹಾಲಿನ ವಾಹನ ಚಾಲನೆ ಮಾಡಿಕೊಂಡು ಇಬ್ಬರು ದಲಿತ ಸಮುದಾಯದ ಯುವಕರು ಸರಿಸುಮಾರು ಸಂಜೆ 6 ಗಂಟೆ ಸಮಯದಲ್ಲಿ ಕಸಬಾ ಹೋಬಳಿಯ ಮುದ್ದನಹಳ್ಳಿ ಗ್ರಾಮದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಅವರಿಗೆ ಇಷ್ಟವಾದ ಬಾಬಾ ಸಾಹೇಬ ಅಂಬೇಡ್ಕರ್ ಅವರ ಬಗೆಗಿನ ಜೈ ಭೀಮ್ ಹಾಡು ಹಾಕಿಕೊಂಡು ಬರುತ್ತಿದ್ದ ವೇಳೆ ಈ ಇಬ್ಬರು ವ್ಯಕ್ತಿಗಳು ರಸ್ತೆಯಲ್ಲಿ ಅಡ್ಡಗಟ್ಟಿ ನೀವು ಯಾವ ಜಾತಿಯವರು ಎಂದು ಜಾತಿ ನಿಂದಿಸಿ ಅವಾಚ್ಯ ಶಬ್ದಗಳಿಂದ ಬೈದು ಜೊತೆಗೆ ಈ ಹಾಡು ಎಲ್ಲಿಯೂ ಹಾಕದಂತೆ ತಾಕೀತು ಮಾಡಿರುವ ಘಟನೆ ಖಂಡನೀಯ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಎಂದು ದಲಿತ ಮುಖಂಡರು ಆಗ್ರಹಿಸಿದರು.

ಇದನ್ನೂ ಓದಿ: #TumkurBreaking

Leave a Reply

Your email address will not be published. Required fields are marked *