Dr Vijay Darda Column: ದಿವಾಳಿಯಾದವರು ದಾನ ನೀಡಲು ಬಂದಾಗ !

ಹಿಂದಿಯಲ್ಲೊಂದು ಗಾದೆಯಿದೆ: “ಪಾಸ್ ಮೆ ಕೌದಿ ನಹಿ, ಬಾಟನೆ ಚಲೆ ರೇವಡಿ" (ತನ್ನ ಕೈಲಿ ಚಾದರ ಕೂಡ ಇಲ್ಲ, ಬೇರೆಯವರಿಗೆ ಸಿಹಿ ಹಂಚಲು ಹೊರಟಿದ್ದಾನೆ). ಸರಳವಾಗಿ ಹೇಳುವು ದಾದರೆ, ಮೊದಲೇ ಭಿಕಾರಿಯಾಗಿರುವವನು ದಾನ ಮಾಡಲು ಹೊರಟಂತೆ. ಅವನಿಗೇ ಯಾರಾ ದರೂ ಸಹಾಯ ಮಾಡಬೇಕು, ಅಂಥವನು ಬೇರೆಯವರಿಗೆ ಏನು ತಾನೇ ಸಹಾಯ ಮಾಡು ತ್ತಾನೆ? ಇಶಕ್ ದರ್ ಮುಂದಿನ ತಿಂಗಳು ಬಾಂಗ್ಲಾದೇಶಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ

Dr Vijay darda Column
Profile Ashok Nayak Jan 16, 2025 7:19 AM

Source : Vishwavani Daily News Paper

ಹೊಸ ವರ್ಷದ ಅತಿದೊಡ್ಡ ಜೋಕು: ಬಾಂಗ್ಲಾದೇಶಕ್ಕೆ ನೆರವು ನೀಡಲು ಪಾಕಿಸ್ತಾನ ಮುಂದೆ ಬಂದಿರುವುದು. ಬಾಂಗ್ಲಾದೇಶ ಕೂಡ ಪಾಕಿಸ್ತಾನದ ತಾಳಕ್ಕೆ ತಕ್ಕಂತೆ ಕುಣಿಯಲು ಆರಂಭಿಸಿದೆ. ಇದು ಎಲ್ಲಿಗೆ ಹೋಗಿ ತಲುಪುತ್ತದೆ ಎಂಬ ಕನಿಷ್ಠ ಅರಿವಾದರೂ ಮೊಹ ಮ್ಮದ್ ಯೂನಸ್ ಎಂಬ ನೊಬೆಲ್ ವಿಜೇತ ಶಾಂತಿದೂತ ನಿಗೆ ಇದೆಯೇ?

ನಿಮಗೆ ಹೊಸ ವರ್ಷದ ಅತಿದೊಡ್ಡ ಜೋಕು ಗೊತ್ತಾ? ಪಾಕಿಸ್ತಾನದ ವಿದೇಶಾಂಗ ಸಚಿವ ಇಶಕ್ ದರ್ ಅವರು ಬಾಂಗ್ಲಾದೇಶಕ್ಕೆ ತಮ್ಮ ದೇಶ ಎಲ್ಲಾ ರೀತಿಯಲ್ಲೂ ನೆರವು ನೀಡಲಿದೆ ಎಂದು ಘೋಷಿಸಿರುವುದು!

ಇದಕ್ಕೆ ಏನು ಹೇಳಲು ಸಾಧ್ಯ? ನಗಬೇಕಷ್ಟೆ. ಪಾಕಿಸ್ತಾನದ ಜನರು ಒಂದು ಹಿಡಿ ಗೋಧಿ ಹಿಟ್ಟು ಪಡೆದುಕೊಳ್ಳಲು ಕಿಲೋಮೀಟರ್‌ಗಟ್ಟಲೆ ಕ್ಯೂ ನಿಂತ ದೃಶ್ಯಗಳು ನೆನಪಾಗುತ್ತಿವೆ.

ಹಿಂದಿಯಲ್ಲೊಂದು ಗಾದೆಯಿದೆ: “ಪಾಸ್ ಮೆ ಕೌದಿ ನಹಿ, ಬಾಟನೆ ಚಲೆ ರೇವಡಿ" (ತನ್ನ ಕೈಲಿ ಚಾದರ ಕೂಡ ಇಲ್ಲ, ಬೇರೆಯವರಿಗೆ ಸಿಹಿ ಹಂಚಲು ಹೊರಟಿದ್ದಾನೆ). ಸರಳವಾಗಿ ಹೇಳುವುದಾದರೆ, ಮೊದಲೇ ಭಿಕಾರಿಯಾಗಿರುವವನು ದಾನ ಮಾಡಲು ಹೊರಟಂತೆ.

ಅವನಿಗೇ ಯಾರಾದರೂ ಸಹಾಯ ಮಾಡಬೇಕು, ಅಂಥವನು ಬೇರೆಯವರಿಗೆ ಏನು ತಾನೇ ಸಹಾಯ ಮಾಡುತ್ತಾನೆ? ಇಶಕ್ ದರ್ ಮುಂದಿನ ತಿಂಗಳು ಬಾಂಗ್ಲಾದೇಶಕ್ಕೆ ಭೇಟಿ ನೀಡುವು ದಾಗಿ ಹೇಳಿದ್ದಾರೆ. ಆ ಭೇಟಿಯ ಬಗ್ಗೆ ಅವರಿಗೆ ಬಹಳ ಕುತೂಹಲ ಹಾಗೂ ನಿರೀಕ್ಷೆಗಳು ಇರುವಂತಿದೆ. ಎಷ್ಟೆಂದರೆ, ಅವರು ಈಗಾಗಲೇ ಬಾಂಗ್ಲಾದೇಶವನ್ನು ‘ಕಳೆದುಹೋದ ಸಹೋದರ’ ಎಂದು ಭಾವನಾತ್ಮಕವಾಗಿ ಕರೆದಿದ್ದಾರೆ. ಹಾಗೆ ಕರೆಯುವಾಗ 1971ರಲ್ಲಿ ಬಾಂಗ್ಲಾದೇಶದ ಮನೆಮನೆಯಲ್ಲಿ ಪಾಕಿಸ್ತಾನದ ಸೈನಿಕರು ನಡೆಸಿದ ಭೀಕರ ಹತ್ಯಾಕಾಂಡ ಮತ್ತು ಅತ್ಯಾಚಾರಗಳನ್ನು ಮರೆತುಬಿಟ್ಟಿದ್ದಾರೆ. ಆಗ ಇವರ ಸಹೋದರ ಕಳೆದು ಹೋಗಿರ ಲಿಲ್ಲ, ಇವರ ಬಳಿಯೇ ಇದ್ದ.

ಆದರೂ ಅವನನ್ನು ಚೆನ್ನಾಗಿ ನೋಡಿಕೊಳ್ಳಲು ಇವರಿಗೆ ಆಗಿರಲಿಲ್ಲ. ಈಗ ನೆರವು ನೀಡಲು ಕಾತುರರಾಗಿದ್ದಾರಂತೆ! ಬಾಂಗ್ಲಾದೇಶದಲ್ಲೀಗ ಶೇಖ್ ಹಸೀನಾ ಅಧಿಕಾರದಲ್ಲಿಲ್ಲ. ಆ ದೇಶ ವೀಗ ಮಧ್ಯಂತರ ಸರಕಾರದ ಆಳ್ವಿಕೆಯಲ್ಲಿದೆ. ಅದು ಭಾರತದ ವಿರುದ್ಧ ಬಾಂಗ್ಲಾದೇಶಿ ಗರಲ್ಲಿ ದ್ವೇಷದ ಬೀಜ ಬಿತ್ತುವ ಪ್ರಯತ್ನ ಮಾಡುತ್ತಿದೆ. ಅದರ ಲಾಭ ಪಡೆದು ಬಾಂಗ್ಲಾದೇಶ ದ ಜತೆಗೆ ಸ್ನೇಹ ಸಾಧಿಸಲು ಪಾಕಿಸ್ತಾನ ಮುಂದಾಗಿದೆ.

ಆದ್ದರಿಂದಲೇ ಅದು ಬಾಂಗ್ಲಾದೇಶಕ್ಕೆ ನಾವು ನೆರವು ನೀಡುತ್ತೇವೆ ಎಂದು ಹೇಳುತ್ತಿದೆ. ಆದರೆ, ವಾಸ್ತವ ಏನೆಂದರೆ, ಬಾಂಗ್ಲಾದೇಶ ಈಗಾಗಲೇ ಪಾಕಿಸ್ತಾನಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಅಭಿವೃದ್ಧಿ ಸಾಧಿಸಿದೆ. ಮನಸ್ಸು ಮಾಡಿದರೆ ಪಾಕಿಸ್ತಾನವನ್ನು ಬಾಂಗ್ಲಾದೇಶ ಖರೀದಿ ಕೂಡ ಮಾಡಬಹುದು!

ಕಳೆದ ಒಂದು ದಶಕದಲ್ಲಿ ಪಾಕಿಸ್ತಾನದ ಆರ್ಥಿಕ ಅಭಿವೃದ್ಧಿ ದರ ಶೇ.3 ಮತ್ತು ಶೇ.4ರ ನಡುವೆ ಹೊಯ್ದಾಡುತ್ತಿತ್ತು. ನಡುವಿನ ಎರಡು ವರ್ಷಗಳಲ್ಲಿ ಅದು ಶೇ.1ಕ್ಕೂ ಕುಸಿದಿತ್ತು.

ಅದಕ್ಕೆ ವ್ಯತಿರಿಕ್ತವಾಗಿ, ಬಾಂಗ್ಲಾದೇಶದ ಆರ್ಥಿಕಾಭಿವೃದ್ಧಿ ದರ ನಿರಂತರವಾಗಿ ಶೇ.6 ರಷ್ಟಿದೆ. ಶೇಖ್ ಹಸೀನಾರನ್ನು ಪದಚ್ಯುತಿಗೊಳಿಸಿ ದೇಶದಿಂದ ಓಡಿಸಿದಾಗ ಬಾಂಗ್ಲಾದೇಶದ

ಆರ್ಥಿಕತೆಯ ಗಾತ್ರ 454 ಬಿಲಿಯನ್ ಡಾಲರ್ ಇತ್ತು. ಪಾಕಿಸ್ತಾನದ ಆರ್ಥಿಕತೆಯ ಗಾತ್ರ ಅದಕ್ಕಿಂತ 114 ಬಿಲಿಯನ್ ಡಾಲರ್ ಕಡಿಮೆ, ಅಂದರೆ 340 ಬಿಲಿಯನ್ ಡಾಲರ್ ಇತ್ತು.

ಈಗಲೂ ಪರಿಸ್ಥಿತಿ ಹೆಚ್ಚೇನೂ ಬದಲಾದಂತೆ ಕಾಣುತ್ತಿಲ್ಲ. ಈಗ ಎರಡೂ ದೇಶಗಳಲ್ಲಿರುವ ಬಡತನದ ಪ್ರಮಾಣವನ್ನು ಗಮನಿಸೋಣ. ವಿಶ್ವ ಬ್ಯಾಂಕ್ 2022ರಲ್ಲಿ ನೀಡಿದ ಅಂಕಿ-ಅಂಶಗಳ ಪ್ರಕಾರ ಬಾಂಗ್ಲಾದೇಶದಲ್ಲಿ ಬಡವರ ಸಂಖ್ಯೆ ಶೇ.11ರಷ್ಟಿದ್ದರೆ, ಪಾಕಿಸ್ತಾನದಲ್ಲಿ ಅದು ಶೇ.39ಕ್ಕೆ ಏರಿಕೆಯಾಗಿದೆ. ಪಾಕಿಸ್ತಾನದ ಸರಕಾರವೇ ನಡೆಸಿದ ಆರ್ಥಿಕ ಸಮೀಕ್ಷೆಯ ಪ್ರಕಾರ ಕಳೆದ ವರ್ಷ ಆ ದೇಶದ ತಲಾ ವಾರ್ಷಿಕ ಆದಾಯ 1548 ಡಾಲರ್ ಇತ್ತು. ಬಾಂಗ್ಲಾ ದೇಶಿಗರ ತಲಾ ವಾರ್ಷಿಕ ಆದಾಯ 2687 ಡಾಲರ್ ಇದೆ.

ಪರಿಸ್ಥಿತಿ ಹೀಗಿರುವಾಗ ಬಾಂಗ್ಲಾದೇಶಕ್ಕೆ ಪಾಕಿಸ್ತಾನ ಏನು ನೆರವು ನೀಡಲು ಸಾಧ್ಯ? ಪಾಕಿ ಸ್ತಾನದ ವಿದೇಶಾಂಗ ಮಂತ್ರಿ ಇಶಕ್ ದರ್ ಯಾವ ಬಾಯಿಯಲ್ಲಿ ನಾವು ಬಾಂಗ್ಲಾ ದೇಶಕ್ಕೆ ಸಹಾಯ ಮಾಡುತ್ತೇವೆ ಎಂದು ಹೇಳುತ್ತಾರೆ? ಬಾಂಗ್ಲಾದೇಶವನ್ನು ‘ಕಳೆದುಹೋದ ಸಹೋ ದರ’ ಎಂದು ಇಶಕ್ ದರ್ ಕರೆಯುವಾಗ ಆ ಸಹೋದರ ತಮ್ಮ ಬಳಿಯೇ ಇದ್ದಾಗ ಅವಿಭ ಜಿತ ಪಾಕಿಸ್ತಾನದ ಆರ್ಥಿಕತೆಯ ಪರಿಸ್ಥಿತಿ ಏನಿತ್ತು ಎಂಬುದನ್ನೂ ಅವರು ಗಮನಿಸ ಬೇಕಲ್ಲವೇ? ಬಾಂಗ್ಲಾದೇಶ ಆಗಿನ್ನೂ ಪಾಕಿಸ್ತಾನದ ಭಾಗವಾಗಿತ್ತು.

1960ರಲ್ಲಿ ಪಶ್ಚಿಮ ಪಾಕಿಸ್ತಾನದ (ಈಗಿನ ಪಾಕಿಸ್ತಾನ) ತಲಾದಾಯ ಪೂರ್ವ ಪಾಕಿಸ್ತಾನದ (ಈಗಿನ ಬಾಂಗ್ಲಾದೇಶ) ತಲಾದಾಯಕ್ಕಿಂತ ಶೇ.30ರಷ್ಟು ಹೆಚ್ಚಿತ್ತು. 1970ರ ವೇಳೆಗೆ ಈ ವ್ಯತ್ಯಾಸ ಶೇ.80ಕ್ಕೆ ಏರಿಕೆಯಾಗಿತ್ತು. ಒಂದು ಕಾಲದಲ್ಲಿ ಬಾಂಗ್ಲಾದೇಶದಲ್ಲಿ ಹತ್ತಿ ಕೃಷಿ ಬಹಳ ಕಡಿಮೆ ಪ್ರಮಾಣದಲ್ಲಿತ್ತು.

ಈಗ ಅದು ಜಗತ್ತಿನ ಎರಡನೇ ಅತಿದೊಡ್ಡ ಜವಳಿ ರಫ್ತು ಮಾಡುವ ದೇಶವಾಗಿ ಹೊರ ಹೊಮ್ಮಿದೆ. ಮೊದಲ ಸ್ಥಾನದಲ್ಲಿ ಚೀನಾ ಇದೆ. ಕಳೆದ ವರ್ಷ ಬಾಂಗ್ಲಾದೇಶ 64 ಬಿಲಿಯನ್ ಡಾಲರ್ ಮೌಲ್ಯದ ಸರಕು ಮತ್ತು ಸೇವೆಗಳನ್ನು ವಿದೇಶಗಳಿಗೆ ರಫ್ತು ಮಾಡಿದ್ದರೆ, ಪಾಕಿ ಸ್ತಾನ ಇದೇ ಅವಧಿಯಲ್ಲಿ 35 ಬಿಲಿಯನ್ ಡಾಲರ್ ಮೌಲ್ಯದ ಸರಕು ಮತ್ತು ಸೇವೆಗಳನ್ನು ರಫ್ತು ಮಾಡಿದೆ.

ಬಾಂಗ್ಲಾದೇಶ ಈ ಸಾಧನೆಯನ್ನು ಮಾಡಿರುವುದು ಶೇಖ್ ಹಸೀನಾ ನಾಯಕತ್ವದಲ್ಲಿ. ಶೇಖ್ ಹಸೀನಾ ಒಂದರ್ಥದಲ್ಲಿ ಸರ್ವಾಧಿಕಾರವನ್ನೇ ನಡೆಸಿದರು ಎಂಬುದನ್ನು ನಾನು

ಒಪ್ಪಿಕೊಳ್ಳುತ್ತೇನೆ. ಆದರೆ, ದೇಶ ಅಭಿವೃದ್ಧಿ ಹೊಂದಬೇಕು ಅಂದರೆ ನಾಯಕರಾದವರು ಕೆಲ ಮಟ್ಟಿಗೆ ಕಠಿಣವಾಗಿ ವರ್ತಿಸಬೇಕಾಗುತ್ತದೆ. ಇಲ್ಲದಿದ್ದರೆ ವಿಧ್ವಂಸಕ ಶಕ್ತಿಗಳನ್ನು

ಮಟ್ಟಹಾಕಲು ಸಾಧ್ಯವಾಗುವುದಿಲ್ಲ. ಶೇಖ್ ಹಸೀನಾ ಬಾಂಗ್ಲಾದೇಶದಲ್ಲಿ ಭಯೋತ್ಪಾದ ಕರು ಹಾಗೂ ದೇಶದ್ರೋಹಿಗಳ ಅಟಾಟೋಪಕ್ಕೆ ಕಡಿವಾಣ ಹಾಕಿದ್ದರು. ದೇಶದ ಅಭಿವೃದ್ಧಿಗೆ ಅಡ್ಡಿಯಾಗುವವರನ್ನು ಮಟ್ಟಹಾಕಿದ್ದರು. ಕೊನೆಗೆ ದುಷ್ಟ ಶಕ್ತಿಗಳು ಷಡ್ಯಂತ್ರ ನಡೆಸಿ ಅವರನ್ನೇ ದೇಶದಿಂದ ಹೊರಹಾಕಿದವು. ಆ ಷಡ್ಯಂತ್ರದಲ್ಲಿ ವಿದೇಶಿ ಶಕ್ತಿಗಳೂ ಭಾಗಿಯಾಗಿದ್ದವು. ಅವರಿಗೆ ಭಾರತಕ್ಕೆ ತೊಂದರೆ ನೀಡುವ ಶಕ್ತಿಗಳು ಬಾಂಗ್ಲಾ ದೇಶದಲ್ಲಿ ಅಧಿಕಾರ ನಡೆಸುವ ಅಗತ್ಯವಿತ್ತು.

ಈಗ ಅವರ ಉದ್ದೇಶ ಈಡೇರಿದೆ. ಅಂಥವರಿಗೆ ನಾನು ಹೇಳುವುದು ಇಷ್ಟೆ: ಎರಡಡಿ ಎತ್ತರದ ಮೂವರು ವ್ಯಕ್ತಿಗಳನ್ನು ಕರೆತಂದ ತಕ್ಷಣ ಅವರೆಲ್ಲ ಸೇರಿ ಆರಡಿ ಎತ್ತರದ ವ್ಯಕ್ತಿಯಾಗುವು ದಿಲ್ಲ! ಭಾರತವೆಂಬುದು ಹರಿಯುವ ನದಿಯಿದ್ದಂತೆ. ಇದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ನಿಂತ ನೀರಾದರೆ ಬಗ್ಗಡವಾಗುತ್ತದೆ ಎಂಬುದು ಭಾರತಕ್ಕೆ ಗೊತ್ತಿದೆ.

ಪಾಕಿಸ್ತಾನ ಭ್ರಮೆಯಲ್ಲಿದೆ. ಬಾಂಗ್ಲಾದೇಶದಲ್ಲಿ ಉಂಟಾಗಿರುವ ಅಸ್ಥಿರತೆಯ ಲಾಭ ಪಡೆದು ಆ ದೇಶವನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಸಾಧ್ಯವಿದೆ ಎಂದು ಪಾಕಿಸ್ತಾನ ಭಾವಿಸಿದೆ. ಇನ್ನೂ ಕೆಲ ನೆರೆದೇಶಗಳು ಭಾರತದ ಬಗ್ಗೆ ಅಸಮಾಧಾನಗೊಂಡಿವೆ ಎಂದು ಪಾಕಿಸ್ತಾನ ಅಂದುಕೊಂಡಿದೆ. ಆದರೆ, ಪ್ರಶ್ನೆಯಿರುವುದು ಏನೆಂದರೆ, ಬಾಂಗ್ಲಾದೇಶವು ಪಾಕಿಸ್ತಾನ ವನ್ನು ಬೆಂಬಲಿಸಿ, ಕೊನೆಗೆ ಆರ್ಥಿಕವಾಗಿ ದಿವಾಳಿಯಾದರೆ, ಅಲ್ಲಿನ ಜನರು ಸುಮ್ಮನಿರು ತ್ತಾರೆಯೇ? ಈ ಪ್ರಶ್ನೆ ಬಹಳ ಮುಖ್ಯ, ಏಕೆಂದರೆ ಭಾರತದ ದ್ವೇಷ ಕಟ್ಟಿಕೊಂಡು ಅಥವಾ ಭಾರತದ ನೆರವು ಇಲ್ಲದೆ ಬಾಂಗ್ಲಾದೇಶ ತನ್ನ ವ್ಯವಹಾರಗಳನ್ನು ಸುರಳೀತವಾಗಿ ನಡೆಸಲು ಸಾಧ್ಯವಿಲ್ಲ.

ಬಾಂಗ್ಲಾದೇಶವು ಭಾರತದ ಜತೆಗೆ ತನ್ನ ಶೇ.94ರಷ್ಟು ಗಡಿಯನ್ನು ಹಂಚಿಕೊಂಡಿದೆ. ಬಾಂಗ್ಲಾದೇಶ ‘ಲ್ಯಾಂಡ್ ಲಾಕ್’ ಆಗಿರುವ ದೇಶ. ಅಂದರೆ ಅದರ ಸುತ್ತಲೂ ಬೇರೆ ದೇಶ ಗಳಿವೆ. ಹೀಗಿರುವಾಗ ಭಾರತದ ವಿರೋಧ ಕಟ್ಟಿಕೊಂಡು ಬಾಂಗ್ಲಾದೇಶದ ಸರಕಾರ ಎಷ್ಟು ದಿನ ಅಧಿಕಾರ ನಡೆಸಲು ಸಾಧ್ಯ? ಭಾರತದ ಜತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗ ದಿದ್ದರೆ ಬಾಂಗ್ಲಾದೇಶದಲ್ಲಿ ಆರ್ಥಿಕ ಸ್ಥಿರತೆ ಮತ್ತು ರಾಜಕೀಯ ಸ್ಥಿರತೆ ಉಂಟಾಗಲು ಸಾಧ್ಯವಿಲ್ಲ.

ದುರದೃಷ್ಟವಶಾತ್ ಬಾಂಗ್ಲಾದೇಶದಲ್ಲೀಗ ಧಾರ್ಮಿಕವಾಗಿಯೂ ಜನರನ್ನು ಎತ್ತಿಕಟ್ಟಲು ಪ್ರಯತ್ನಗಳು ನಡೆಯುತ್ತಿವೆ. ಆದರೆ ಆ ದೇಶದಲ್ಲಿ ಅಧಿಕಾರ ನಡೆಸುತ್ತಿರುವವರು ಒಂದು ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇ.9ರಷ್ಟು ಹಿಂದೂಗಳಿದ್ದಾರೆ. ಸರಕಾರಿ ನೌಕರಿಯಲ್ಲಿ ಹಿಂದೂಗಳ ಪ್ರಮಾಣ ಶೇ.15ರಷ್ಟಿದೆ. ಹೀಗಾಗಿ ಪಾಕಿಸ್ತಾನ ಎಷ್ಟೇ ಪ್ರಯತ್ನಿಸಿದರೂ ಬಾಂಗ್ಲಾದೇಶದ ವ್ಯವಹಾರದಿಂದ ಭಾರತವನ್ನು ತೆಗೆದುಹಾಕಲು ಸಾಧ್ಯವಿಲ್ಲ.

ಆದರೆ, ಒಂದು ಅನುಮಾನವಿದೆ. ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಹಾಗೂ ಆರ್ಥಿಕಾ ಭಿವೃದ್ಧಿಯ ಹರಿಕಾರ ಮೊಹಮ್ಮದ್ ಯೂನುಸ್ ನಿಧಾನವಾಗಿ ಬಾಂಗ್ಲಾದೇಶವನ್ನು ಸರ್ವಾಧಿಕಾರದ ಕಡೆಗೆ ಒಯ್ಯುತ್ತಿದ್ದಾರೆಯೇ? ಅವರು ಹೇಳುವುದೇ ಒಂದು, ಮಾಡುವುದು ಇನ್ನೊಂದು. ಶೇಖ್ ಹಸೀನಾ ಬಾಂಗ್ಲಾದೇಶವನ್ನು ತೊರೆದು ಭಾರತಕ್ಕೆ ಬಂದು ಆಶ್ರಯ ಪಡೆದಿದ್ದರೆ, ಬಾಂಗ್ಲಾದೇಶದ ಇನ್ನೊಬ್ಬ ದೊಡ್ಡ ರಾಜಕೀಯ ನಾಯಕಿ ಹಾಗೂ ಮಾಜಿ ಪ್ರಧಾನಿ ಖಲೀದಾ ಜಿಯಾ ಕೂಡ ಲಂಡನ್‌ಗೆ ಹೋಗಿ ನೆಲೆಸಿದ್ದಾರೆ. ಅಲ್ಲಿಂದಲೇ ಅವರು, ‘ಬಾಂಗ್ಲಾದೇಶದಲ್ಲಿ ಬೇಗ ಚುನಾವಣೆ ನಡೆಸಬೇಕು’ ಎಂದು ಆಗ್ರಹಿಸುತ್ತಿದ್ದಾರೆ.

ಅಂದರೆ ಬಾಂಗ್ಲಾದೇಶದಲ್ಲೀಗ ಸಂಪೂರ್ಣ ರಾಜಕೀಯ ಶೂನ್ಯ ಆವರಿಸಿದೆ. ಮೊಹಮ್ಮದ್ ಯೂನಸ್ ರಾಜಕಾರಣಿಯಲ್ಲ. ಇನ್ನುಳಿದ ಇಬ್ಬರು ದೊಡ್ಡ ರಾಜಕೀಯ ನಾಯಕರು ವಿದೇಶದಲ್ಲಿದ್ದಾರೆ. ಹೀಗಾಗಿ ದೇಶಕ್ಕೆ ರಾಜಕೀಯ ನಾಯಕತ್ವವೆಂಬುದು ಮರೀಚಿಕೆ ಯಾಗುವ ಲಕ್ಷಣಗಳು ತೋರುತ್ತಿವೆ. ಆದರೆ ಇಲ್ಲೂ ಆಶಾಕಿರಣವೊಂದಿದೆ.

ಶೇಖ್ ಹಸೀನಾ ಎಂಥಾ ಗಟ್ಟಿಗಿತ್ತಿ ಅಂದರೆ, ಆಕೆಗೆ ಬೂದಿಯಿಂದ ಮೇಲೆದ್ದು ನಿಲ್ಲುವ ಛಾತಿಯಿದೆ. ಸದ್ಯಕ್ಕೆ ಅವರ ರಾಜಕೀಯ ಪಕ್ಷ ಭೂಗತವಾಗಿರಬಹುದು. ಆದರೆ ಅದು ಇನ್ನೂ ಸರ್ವನಾಶವಾಗಿಲ್ಲ. ಯಾವಾಗ ಬೇಕಾದರೂ ಅದು ಜಿಗಿದೆದ್ದು ನಿಲ್ಲಬಹುದು. ಬಾಂಗ್ಲಾದೇಶವನ್ನು ಸುದೀರ್ಘ ಅವಧಿಯವರೆಗೆ ಆಳಿದ ಅವರ ಪಕ್ಷಕ್ಕೆ ದೊಡ್ಡ ಪ್ರಮಾಣ ದಲ್ಲಿ ಜನಬೆಂಬಲ ಈಗಲೂ ಇದೆ. ವಿಚ್ಛಿದ್ರಕಾರಿ ಶಕ್ತಿಗಳ ಆರ್ಭಟದಲ್ಲಿ ಅದು ಮೇಲ್ನೋ ಟಕ್ಕೆ ಕಾಣಿಸುತ್ತಿಲ್ಲ ಅಷ್ಟೆ.

ಒಂದಂತೂ ನಿಜ. ಪಾಕಿಸ್ತಾನಕ್ಕೆ ಮತ್ತೆ ಬಾಂಗ್ಲಾದೇಶವನ್ನು ತನ್ನ ಕಪಿಮುಷ್ಟಿಗೆ ತೆಗೆದು ಕೊಳ್ಳುವ ಹೆಬ್ಬಯಕೆ ಮೂಡಿದೆ. ಆದ್ದರಿಂದಲೇ ಪಾಕಿಸ್ತಾನದ ಸೇನೆ ಮತ್ತು ಐಎಸ್‌ಐ ಗುಪ್ತಚರ ಸಂಸ್ಥೆಗಳು ಒಟ್ಟಾಗಿ ಪಾಕಿಸ್ತಾನದ ದಾರಿಗೆ ಬಾಂಗ್ಲಾದೇಶವನ್ನು ಎಳೆಯಲು ಯತ್ನಿಸುತ್ತಿವೆ. ಹೀಗಾಗಿ, ಮಿಸ್ಟರ್ ಮೊಹಮ್ಮದ್ ಯೂನಸ್ ಅವರೇ, ಹುಷಾರಾಗಿರಿ!

ನೀವು ಯಾವ ಪಾಕಿಸ್ತಾನದ ಸೇನೆ ಮತ್ತು ಐಎಸ್‌ಐ ಗುಪ್ತಚರ ಸಂಸ್ಥೆಯನ್ನು ಬಾಂಗ್ಲಾ ದೇಶದ ಸೇನೆಗೆ ತರಬೇತಿ ನೀಡಲು ಬರುವಂತೆ ಆಹ್ವಾನಿಸುತ್ತಿದ್ದೀರೋ ಅದೇ ಸೇನೆ ಮತ್ತು ಐಎಸ್‌ಐ ಪಾಕಿಸ್ತಾನವನ್ನು ಭೂಮಿಯ ಮೇಲಿನ ನರಕವನ್ನಾಗಿ ಮಾಡಿವೆ. ಬಾಂಗ್ಲಾದೇಶ ವನ್ನು ಕೂಡ ಹಾಗೆಯೇ ಮಾಡಿ ಸರ್ವನಾಶದ ಅಂಚಿಗೆ ತೆಗೆದುಕೊಂಡು ಹೋಗಲು ನೀವು

ಬಯಸುತ್ತೀರಾ?

(ಲೇಖಕರು ಹಿರಿಯ ಪತ್ರಿಕೋದ್ಯಮಿ)

ಇದನ್ನೂ ಓದಿ: ಉನ್ನತ ಸ್ಥಾನದಲ್ಲಿರುವವರು ಮೌನದ ಮಹತ್ವ ತಿಳಿದಿರಬೇಕು!

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

urea
2:13 PM January 22, 2025

ಕೃಷಿ ಸಬ್ಸಿಡಿಗೆ ರೈತರು ಬಿಟ್ಟು ಉಳಿದವರೆಲ್ಲ ಫಲಾನುಭವಿಗಳು!

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು