ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಆಶುತೋಷ್‌ ಶರ್ಮಾಗೆ ಬೆರಳು ತೋರಿಸಿ ಅವಾಜ್ ಹಾಕಿದ ಇಶಾಂತ್‌ ಶರ್ಮಾ! ವಿಡಿಯೊ

Ishant Sharma vs Ashutosh Sharma: ಗುಜರಾತ್ ಟೈಟನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್ ಪಂದ್ಯದ ಸಮಯದಲ್ಲಿ ಅನುಭವಿ ವೇಗಿ ಇಶಾಂತ್ ಶರ್ಮಾ ಮತ್ತು ಡೆಲ್ಲಿ ಆಟಗಾರ ಆಶುತೋಷ್ ಶರ್ಮಾ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಯುವ ಆಟಗಾರನ ಕಡೆಗೆ ಬೆರಳು ತೋರಿಸಿದ್ದ ಇಶಾಂತ್‌ ಶರ್ಮಾ ಅವಾಜ್‌ ಹಾಕಿದ್ದರು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

DC vs GT ಪಂದ್ಯದ ವೇಳೆ ಆಶುತೋಷ್‌ ಶರ್ಮಾಗೆ ಇಶಾಂತ್‌ ಶರ್ಮಾ ಅವಾಜ್!

ಆಶುತೋಷ್‌ ಶರ್ಮಾಗೆ ದಮಕಿ ಹಾಕಿದ ಇಶಾಂತ್‌ ಶರ್ಮಾ!

Profile Ramesh Kote Apr 19, 2025 9:48 PM

ಅಹಮದಾಬಾದ್: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಒಂದಲ್ಲ ಒಂದು ಅಚ್ಚರಿ ಘಟನೆಗಳು ನಡೆಯುತ್ತಲೇ ಇರುತ್ತವೆ. ಆಟಗಾರರನ್ನು ಸ್ಲೆಡ್ಜ್‌ ಮಾಡುವುದು, ಕಾಲೆಳೆಯುವುದು ಹಾಗೂ ಆಟಗಾರರ ವಿರುದ್ಧ ಮೈದಾನದಲ್ಲಿ ಆಕ್ರೋಶ ವ್ಯಕ್ತಪಡಿಸುವುದು ಸಾಮಾನ್ಯ. ಅದೇ ರೀತಿ ಶನಿವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಗುಜರಾತ್‌ ಟೈಟನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳ ನಡುವಣ (GT vs DV) ಪಂದ್ಯದಲ್ಲಿಯೂ ಒಂದು ಅಪರೂಪದ ಘಟನೆ ನಡೆಯಿತು. ಟೈಟನ್ಸ್‌ ಹಿರಿಯ ವೇಗಿ ಇಶಾನ್‌ ಶರ್ಮಾ (Ishant Sharma) ಬೌಲಿಂಗ್‌ ವೇಳೆ ಎದುರಾಳಿ ತಂಡದ ಆಶುತೋಷ್‌ ಶರ್ಮಾಗೆ (Ashutosh Sharma) ದಮಕಿ ಹಾಕಿದರು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

2025ರ ಐಪಿಎಲ್‌ ಟೂರ್ನಿಯ 35ನೇ ಪಂದ್ಯ ಗುಜರಾತ್ ಟೈಟನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ, ಗುಜರಾತ್ ಟೈಟನ್ಸ್ ನಾಯಕ ಶುಭಮನ್ ಗಿಲ್ ಟಾಸ್ ಗೆದ್ದು ಮೊದಲು ಬೌಲ್‌ ಮಾಡಲು ನಿರ್ಧರಿಸಿದರು. ಈ ಪಂದ್ಯದಲ್ಲಿ ಜಿಟಿ ಪರ ಆಡುವಾಗ ಭಾರತದ ಅನುಭವಿ ವೇಗಿ ಇಶಾಂತ್ ಶರ್ಮಾ ಅದ್ಭುತವಾಗಿ ಬೌಲಿಂಗ್ ಪ್ರದರ್ಶನವನ್ನು ತೋರಿದರು. ಅವರು ತಮ್ಮ 3 ಓವರ್‌ಗಳ ಅವಧಿಯಲ್ಲಿ 19 ರನ್‌ ನೀಡಿ ಒಂದು ವಿಕೆಟ್‌ ಪಡೆದಿದ್ದರು. ಆದರೆ, ಈ ಪಂದ್ಯದ ಸಮಯದಲ್ಲಿ ಇಶಾಂತ್ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಆಶುತೋಷ್ ಶರ್ಮಾ ಜತೆ ಮಾತಿನ ಚಕಮಕಿ ನಡೆಸಿದರು.

GT vs DC: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗುಜರಾತ್‌ ಟೈಟನ್ಸ್‌ಗೆ ಜಯ ತಂದುಕೊಟ್ಟ ಜೋಸ್‌ ಬಟ್ಲರ್‌!

ಇದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇನಿಂಗ್ಸ್‌ನ 19ನೇ ಓವರ್‌ನಲ್ಲಿ ನಡೆದಿದ್ದ ಘಟನೆ. ಈ ಓವರ್ ಅನ್ನು ಗುಜರಾತ್ ಟೈಟನ್ಸ್ ಪರ ಇಶಾಂತ್ ಶರ್ಮಾ ಬೌಲ್ ಮಾಡಿದ್ದರು. ಆಶುತೋಷ್ ಶರ್ಮಾ 19ನೇ ಓವರ್‌ನ ಕೊನೆಯ ಎಸೆತದಲ್ಲಿ ಸ್ಟ್ರೈಕ್‌ನಲ್ಲಿದ್ದರು. ಇಶಾಂತ್ ಶರ್ಮಾ, ಆಶುತೋಷ್‌ ಶರ್ಮಾಗೆ ಶಾರ್ಟ್ ಬಾಲ್ ಎಸೆದರು. ಈ ಚೆಂಡು ಆಶುತೋಷ್ ಶರ್ಮಾ ಅವರ ಭುಜಕ್ಕೆ ಬಡಿದು ವಿಕೆಟ್ ಕೀಪರ್ ಕೈ ಸೇರಿತು. ಆದರೆ, ಇಶಾಂತ್ ಶರ್ಮಾ ಮತ್ತು ಗುಜರಾತ್ ತಂಡ ಕ್ಯಾಚ್‌ ಎಂದು ಮನವಿ ಮಾಡಿದರು. ಆದರೆ ಅಂಪೈರ್ ಅವರಿಗೆ ಔಟ್ ನೀಡಲಿಲ್ಲ. ಚೆಂಡು ತಗುಲಿದ ನಂತರ ಆಶುತೋಷ್ ಶರ್ಮಾ ಒಂದು ರನ್‌ ಓಡಿದರು ಮತ್ತು ಅಂಪೈರ್ ಲೆಗ್ ಬೈ ಆಗಿ ಒಂದು ರನ್ ಕೊಟ್ಟರು.



ಆಶುತೋಷ್ ಶರ್ಮಾ ಬೌಲಿಂಗ್ ತುದಿಯನ್ನು ತಲುಪಿದಾಗ ಅವರ ಮತ್ತು ಇಶಾಂತ್ ಶರ್ಮಾ ನಡುವೆ ಸಣ್ಣ ವಾಗ್ವಾದ ನಡೆಯಿತು. ಇಬ್ಬರೂ ಒಬ್ಬರಿಗೊಬ್ಬರು ಏನೋ ಹೇಳಿಕೊಳ್ಳುತ್ತಿರುವುದು ಕಂಡುಬಂತು. ಆದರೆ, ಇಬ್ಬರೂ ಪರಸ್ಪರ ಏನು ಮಾತನಾಡುತ್ತಿದ್ದರು ಎಂಬುದು ರಿವೀಲ್‌ ಆಗಿಲ್ಲ. ಆದರೆ, ಇಶಾಂತ್ ಶರ್ಮಾ, ಎದುರಾಳಿ ಬ್ಯಾಟರ್‌ ಆಶುತೋಷ್ ಶರ್ಮಾ ಮೇಲೆ ಕಿಡಿ ಕಾರಿದದ್ದರು. ಈ ವೇಳೆ ಆಕ್ರೋಶ ಭರಿತರಾಗಿದ್ದ ಇಶಾಂತ್‌ ಶರ್ಮಾ ತಮ್ಮ ಕೈ ಬೆರಳು ತೋರಿಸುವ ಮೂಲಕ ಡೆಲ್ಲಿ ಕ್ಯಾಟ್ಸ್‌ಮನ್‌ಗೆ ಅವಾಜ್‌ ಹಾಕಿದರು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಅಂದ ಹಾಗೆ 19ನೇ ಓವರ್‌ನಲ್ಲಿ ಇಶಾಂತ್ ಶರ್ಮಾ ಕೇವಲ 6 ರನ್‌ಗಳನ್ನು ನೀಡಿದ್ದರು.



ಗುಜರಾತ್‌ ಟೈಟನ್ಸ್‌ಗೆ 7 ವಿಕೆಟ್‌ ಭರ್ಜರಿ ಜಯ

ಇನ್ನು ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 203 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಗುಜರಾತ್‌ ಟೈಟನ್ಸ್‌ ತಂಡಕ್ಕೆ 204 ರನ್‌ಗಳ ಗುರಿಯನ್ನು ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ ಗುಜರಾತ್‌ ಟೈಟನ್ಸ್‌ ತಂಡ ಜೋಸ್‌ ಬಟ್ಲರ್‌ (97* ರನ್‌) ಸ್ಪೋಟಕ ಬ್ಯಾಟಿಂಗ್‌ ಬಲದಿಂದ 19.2 ಓವರ್‌ಗಳಿಗೆ ಗೆಲುವಿನ ದಡ ಸೇರಿತು. ಈ ಗೆಲುವಿನ ಮೂಲಕ ಗುಜರಾತ್‌ ಟೈಟನ್ಸ್‌ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿತು.