ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RR vs LSG: ಸಿಕ್ಸರ್‌ ಮೂಲಕ ಐಪಿಎಲ್‌ಗೆ ಅದ್ದೂರಿ ಪದಾರ್ಪಣೆ ಮಾಡಿದ ವೈಭವ ಸೂರ್ಯವಂಶಿ!

ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪರ ಇಂಪ್ಯಾಕ್ಸ್‌ ಪ್ಲೇಯರ್‌ ಆಗಿ ಆಡಿದ 14ರ ವಯಸ್ಸಿನ ವೈಭವ್‌ ಸೂರ್ಯವಂಶಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಪದಾರ್ಪಣೆ ಮಾಡಿದರು. ಆ ಮೂಲಕ ಐಪಿಎಲ್‌ ಟೂರ್ನಿಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಸೂರ್ಯವಂಶಿ ಬರೆದಿದ್ದಾರೆ. ತಮ್ಮ ವೃತ್ತಿ ಜೀವನದ ಮೊದಲನೇ ಎಸೆತದಲ್ಲಿ ಸಿಕ್ಸರ್‌ ಸಿಡಿಸಿದ ವೈಭವ್‌ ಎಲ್ಲರ ಗಮನವನ್ನು ಸೆಳೆದರು.

ಐಪಿಎಲ್‌ಗೆ ಪದಾರ್ಪಣೆ ಮಾಡಿ ವಿಶೇಷ ದಾಖಲೆ ಬರೆದ 14ರ ಪೋರ!

ಐಪಿಎಲ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ವೈಭವ್‌ ಸೂರ್ಯವಂಶಿ.

Profile Ramesh Kote Apr 19, 2025 10:15 PM

ಜೈಪುರ: ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ ಪಂದ್ಯದಲ್ಲಿ (RR vs LSG) ರಾಜಸ್ಥಾನ್‌ ರಾಯಲ್ಸ್‌ ಪರ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಣಕ್ಕೆ ಇಳಿಯುವ ಮೂಲಕ 14ರ ವಸಯಸ್ಸಿನ ವೈಭವ್‌ ಸೂರ್ಯವಂಶಿ (Vaibhav Suryavanshi) ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ (14 ವರ್ಷ, 23 ದಿನಗಳು) ಎಂಬ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಯಶಸ್ವಿ ಜೈಸ್ವಾಲ್‌ ಅವರ ಜೊತೆ ಇನಿಂಗ್ಸ್‌ ಆರಂಭಿಸಿದ ವೈಭವ್‌, ತಾವು ಎದರುಸಿದ ಮೊದಲನೇ ಎಸೆತದಲ್ಲಿ ದೊಡ್ಡ ಸಿಕ್ಸರ್‌ ಬಾರಿಸಿ ತಮ್ಮ ಐಪಿಎಲ್‌ ವೃತ್ತಿ ಜೀವನವನ್ನು ಅದ್ದೂರಿಯಾಗಿ ಆರಂಭಿಸಿದ್ದಾರೆ. ಆ ಮೂಲಕ ಐಪಿಎಲ್‌ ಟೂರ್ನಿಯಲ್ಲಿ ದೊಡ್ಡ ಭರವಸೆ ಮೂಡಿಸಿದ್ದಾರೆ.

ವೈಭವ್‌ ಸೂರ್ಯವಂಶಿ ಅವರು 2011ರಲ್ಲಿ ಜನಿಸಿದ್ದರು. 2008ರಲ್ಲಿ ಐಪಿಎಲ್‌ ಟೂರ್ನಿ ಆರಂಭವಾಗಿತ್ತು. ಐಪಿಎಲ್‌ ಟೂರ್ನಿ ಆರಂಭವಾದ ಬಳಿಕ ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್‌ಗೆ ಪದಾರ್ಪಣೆ ಮಾಡಿದ ಮೊದಲ ಆಟಗಾರ ಎಂಬ ದಾಖಲೆಯನ್ನು ವೈಭವ್‌ ಬರೆದಿದ್ದಾರೆ. ಟಾಸ್‌ ವೇಳೆ ಮಾತನಾಡಿದ್ದ ನಾಯಕ ರಿಯಾನ್‌ ಪರಾಗ್‌, ವೈಭವ್‌ ಸೂರ್ಯವಂಶಿ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಆಡಲಿದ್ದಾರೆಂದು ಮಾಹಿತಿ ನೀಡಿದ್ದರು. ಅದರಂತೆ ಗಾಯಾಳು ಸಂಜು ಸ್ಯಾಮ್ಸನ್‌ ಬದಲು ಯಶಸ್ವಿ ಜೈಸ್ವಾಲ್‌ ಜತೆ ವೈಭವ್‌ ಸೂರ್ಯವಂಶಿ ಇನಿಂಗ್ಸ್‌ ಆರಂಭಿಸಿದರು.

IPL 2025: ಆಶುತೋಷ್‌ ಶರ್ಮಾಗೆ ಬೆರಳು ತೋರಿಸಿ ಅವಾಜ್ ಹಾಕಿದ ಇಶಾಂತ್‌ ಶರ್ಮಾ! ವಿಡಿಯೊ

ವೇಗಿ ಸಂದೀಪ್ ಶರ್ಮಾ ಬದಲಿಗೆ ಬ್ಯಾಟಿಂಗ್‌ಗೆ ಬಂದ ವೈಭವ್ ಸೂರ್ಯವಂಶಿ, ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಸ್ಟ್ರೈಕ್ ಪಡೆದರು. ಲಖನೌ ಪರ ಶಾರ್ದುಲ್ ಠಾಕೂರ್ ಮೊದಲ ಓವರ್ ಬೌಲ್‌ ಮಾಡಿದರು. ಮೊದಲ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಸ್ಟ್ರೈಕ್ ಪಡೆದರು ಮತ್ತು ಅದರಲ್ಲಿ ಯಾವುದೇ ರನ್ ಗಳಿಸಲಿಲ್ಲ, ಎರಡನೇ ಎಸೆತದಲ್ಲಿ ಜೈಸ್ವಾಲ್‌, ಅದ್ಭುತವಾಗಿ ಬೌಂಡರಿ ಬಾರಿಸಿದರು. ಮೂರನೇ ಎಸೆತದಲ್ಲಿ ಅವರು ಒಂದು ರನ್ ತೆಗೆದುಕೊಂಡು ವೈಭವ್‌ಗೆ ಸ್ಟ್ರೈಕ್ ನೀಡಿದರು. ಭಯವಿಲ್ಲದೆ ಆಡಿ ತಮ್ಮ ಐಪಿಎಲ್ ವೃತ್ತಿಜೀವನದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ವೈಭವ್ ಸೂರ್ಯವಂಶಿ ತಮ್ಮ ಖಾತೆ ತೆರೆಯುವ ಮೂಲಕ ಎಲ್ಲರನ್ನೂ ಅಚ್ಚರಿ ಮೂಡಿಸಿದರು.



20 ಎಸೆತಗಳಲ್ಲಿ 34 ರನ್‌ ಸಿಡಿಸಿದ ವೈಭವ್‌

ತಮ್ಮ ಮೊಟ್ಟ ಮೊದಲ ಎಸೆತದಲ್ಲಿ ಸಿಕ್ಸರ್‌ ಬಾರಿಸಿದ ಬಳಿಕ ವೈಭವ್‌ ಸೂರ್ಯವಂಶಿ ತಮ್ಮ ಪವರ್‌ಫುಲ್‌ ಬ್ಯಾಟಿಂಗ್‌ ಮೂಲಕ ಎಲ್ಲರ ಗಮನವನ್ನು ಸೆಳೆದರು. ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಭಯಮುಕ್ತವಾಗಿ ಬ್ಯಾಟ್‌ ಮಾಡಿದ ವೈಭವ್‌, 20 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ ಎರಡು ಬೌಂಡರಿಗಳೊಂದಿಗೆ 34 ರನ್‌ ಚಚ್ಚಿದರು. ಅದರಲ್ಲಿಯೂ 170ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿ ಎಲ್ಲರ ಗಮನವನ್ನು ಸೆಳೆದರು. ಅಷ್ಟೇ ಅಲ್ಲದೆ, ಮುರಿಯದ ಮೊದಲನೇ ವಿಕೆಟ್‌ಗೆ ಜೈಸ್ವಾಲ್‌ ಜೊತೆ 81 ರನ್‌ ದಾಖಲಿಸಿದರು. ಆ ಮೂಲಕ ರಾಜಸ್ಥಾನ್‌ ರಾಯಲ್ಸ್‌ಗೆ ಭರ್ಜರಿ ಆರಂಭವನ್ನು ತಂದುಕೊಟ್ಟರು. ಅಂತಿಮವಾಗಿ ಏಡೆನ್‌ ಮಾರ್ಕ್ರಮ್‌ ಎಸೆತದಲ್ಲಿ ಸ್ಟಂಪ್‌ ಔಟ್‌ ಆದರು.



ಬಿಹಾರ ಪರ ದೇಶಿ ಕ್ರಿಕೆಟ್‌ ಆಡುವ ವೈಭವ್‌

ವೈಭವ್ ಸೂರ್ಯವಂಶಿ ಬಿಹಾರ ಕ್ರಿಕೆಟ್ ಪರ ಆಡುತ್ತಾರೆ. ವೈಭವ್ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ ಮತ್ತು ಭಾರತದ ವಯೋಮಾನದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷದ ಅಂತ್ಯದಲ್ಲಿ ನಡೆದಿದ್ದ 2025ರ ಐಪಿಎಲ್‌ ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್, ವೈಭವ್ ಸೂರ್ಯವಂಶಿ ಅವರನ್ನು 1.10 ಕೋಟಿ ರೂ.ಗಳಿಗೆ ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು. ಆದಾಗ್ಯೂ, ಮೊದಲ ಕೆಲವು ಪಂದ್ಯಗಳಲ್ಲಿ ವೈಭವ್‌ಗೆ ಆಡಲು ಅವಕಾಶ ಸಿಗಲಿಲ್ಲ, ಆದರೆ ನಿಯಮಿತ ನಾಯಕ ಸಂಜು ಸ್ಯಾಮ್ಸನ್ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ 14ರ ವಯಸ್ಸನಿ ಬಾಲಕನಿಗೆ ಅವಕಾಶ ಲಭಿಸಿತು.