ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM internship scheme: ಪಿಎಂ ಇಂಟರ್ನ್‌ಶಿಪ್ ಯೋಜನೆ ನೋಂದಣಿ ಆರಂಭ; ಅರ್ಹತೆ ಏನು? ಅರ್ಜಿ ಸಲ್ಲಿಸುವುದು ಹೇಗೆ?

ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಪಿಎಂ ಇಂಟರ್ನ್‌ಶಿಪ್ ಯೋಜನೆ 2025ಗಾಗಿ ನೋಂದಣಿ ಪ್ರಾರಂಭಿಸಿದೆ. ತನ್ನ ಅಧಿಕೃತ ಪೋರ್ಟಲ್, pminternship.mca.gov.in ನಲ್ಲಿ PM ಇಂಟರ್ನ್‌ಶಿಪ್ ಯೋಜನೆ 2025 ನೋಂದಣಿ ಪ್ರಕ್ರಿಯೆ ಶುರು ಮಾಡಿದ್ದು ಆಸಕ್ತರು ನೋಂದಣಿ ಮಾಡಿಕೊಳ್ಳಬಹುದಾಗಿದೆ. 21 ರಿಂದ 24 ವರ್ಷದೊಳಗಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ಪಿಎಂ ಇಂಟರ್ನ್‌ಶಿಪ್ ಯೋಜನೆಗೆ  ನೋಂದಣಿ ಆರಂಭ

ಸಾಂದರ್ಭಿಕ ಚಿತ್ರ

Profile Vishakha Bhat Mar 7, 2025 3:27 PM

ನವದೆಹಲಿ: ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಪಿಎಂ ಇಂಟರ್ನ್‌ಶಿಪ್ ಯೋಜನೆ 2025ಗಾಗಿ (PM internship scheme 2025) ನೋಂದಣಿ (Registration) ಪ್ರಾರಂಭಿಸಿದೆ. ತನ್ನ ಅಧಿಕೃತ ಪೋರ್ಟಲ್, pminternship.mca.gov.in ನಲ್ಲಿ PM ಇಂಟರ್ನ್‌ಶಿಪ್ ಯೋಜನೆ (PMIS) 2025 ನೋಂದಣಿ ಪ್ರಕ್ರಿಯೆ ಶುರು ಮಾಡಿದ್ದು ಆಸಕ್ತರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ನೋಂದಣಿ ಕಾರ್ಯಕ್ರಮ ಮುಂದಿನ ವಾರದ ವರೆಗಿದ್ದು, ಮಾರ್ಚ್ 12, 2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. 21 ರಿಂದ 24 ವರ್ಷದೊಳಗಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಯೋಜನೆ ಪ್ರಾರಂಭಿಸಿದ್ದು, ಯುವ ಜನರ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯೋಗ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಭಾರತ ಸರ್ಕಾರ ಈ ಯೋಜನೆ ಶುರುಮಾಡಿದೆ. ಸಚಿವಾಲಯದ ಪ್ರಕಾರ, ಇಂಟರ್ನ್‌ಗಳಿಗೆ ಮಾಸಿಕ 5,000 ರೂ.ಗಳ ಆರ್ಥಿಕ ಸಹಾಯ ದೊರೆಯಲಿದ್ದು, ಇದರ ಜೊತೆಗೆ ಒಂದು ಬಾರಿ 6,000 ರೂ.ಗಳ ಆರ್ಥಿಕ ಸಹಾಯ ದೊರೆಯಲಿದೆ. 10ನೇ ಅಥವಾ 12ನೇ ತರಗತಿ ಪೂರ್ಣಗೊಳಿಸಿದ ಅಥವಾ ಪದವಿ/ಪಿಜಿ ಪದವಿ ಪಡೆದಿರುವ 21 ರಿಂದ 24 ವರ್ಷದೊಳಗಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಅರ್ಜಿ ಸಲ್ಲಿಸುವುದು ಹೇಗೆ?

  • ಅಧಿಕೃತ ವೆಬ್‌ಸೈಟ್ pminternship.mca.gov.in ಗೆ ಭೇಟಿ ನೀಡಿ.
  • PM ಇಂಟರ್ನ್‌ಶಿಪ್ ಸ್ಕೀಮ್ 2025 ನೋಂದಣಿ ಫಾರ್ಮ್‌ ಲಿಂಕ್‌ ಮೇಲೆ ಪ್ರೆಸ್‌ ಮಾಡಿ
  • ನೋಂದಾಯಿಸಿ ಮತ್ತು ಲಾಗಿನ್ ಐಡಿ ರಚಿಸಿ*ಪೋರ್ಟಲ್ ಮಾರ್ಗದರ್ಶನದಂತೆ ಅರ್ಜಿ ನಮೂನೆಯನ್ನು ವಿವರಗಳನ್ನು ಭರ್ತಿ ಮಾಡಿ
  • ಅರ್ಜಿ ನಮೂನೆಯನ್ನು ಸಲ್ಲಿಸಿ

ಈ ಸುದ್ದಿಯನ್ನೂ ಓದಿ: Bima Sakhi Scheme: 10ನೇ ಕ್ಲಾಸ್‌ ಓದಿದ್ರೆ ತಿಂಗಳಿಗೆ 7,000 ರೂ. ಗಳಿಸಿ! LICಯ ಹೊಸ ಬಿಮಾ ಸಖಿ ಸ್ಕೀಮ್‌ ಡಿಟೇಲ್ಸ್

ಅಗತ್ಯವಿರುವ ದಾಖಲೆಗಳು

  • ಆಧಾರ್ ಕಾರ್ಡ್
  • ಶೈಕ್ಷಣಿಕ ಪ್ರಮಾಣಪತ್ರಗಳು
  • ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ

ಅಕ್ಟೋಬರ್ 3, 2024 ರಂದು ಅಧಿಕೃತವಾಗಿ ಈ ಯೋಜನೆ ಪ್ರಾರಂಭವಾಗಿದ್ದು, ನಿರುದ್ಯೋಗಿ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ಪ್ರಾಯೋಗಿಕ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ . ಮುಂದಿನ ಐದು ವರ್ಷಗಳ ಅವಧಿಯಲ್ಲಿ ಒಂದು ಕೋಟಿ ಯುವಜನರಿಗೆ ಇಂಟರ್ನ್‌ಶಿಪ್ ಸೌಲಭ್ಯ ಕಲ್ಪಿಸುವ ಗುರಿಯನ್ನು ಈ ಪಿಎಂ ಇಂಟರ್ನ್​ಶಿಪ್​ ಯೋಜನೆ ಹೊಂದಿದೆ.