ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Miss Universe Karnataka: ಮಿಸ್‌ ಯೂನಿವರ್ಸ್‌ ಕರ್ನಾಟಕ ಪೇಜೆಂಟ್‌ಗೆ ಕೈ ಜೋಡಿಸಿದ ವಿಶ್ವವಾಣಿ ಟಿವಿ ಸ್ಪೆಷಲ್‌

ಉದ್ಯಾನನಗರಿ ಬೆಂಗಳೂರಿನಲ್ಲಿ ಇದೇ ಮೊತ್ತ ಮೊದಲ ಬಾರಿಗೆ ಹಮ್ಮಿಕೊಂಡಿರುವ ಮಿಸ್‌ ಯೂನಿವರ್ಸ್‌ ಕರ್ನಾಟಕ ವಿಭಾಗದ ಬ್ಯೂಟಿ ಪೇಜೆಂಟ್‌ನ ಫಿನಾಲೆಗೆ ವಿಶ್ವವಾಣಿ ಟಿವಿ ಸ್ಪೆಷಲ್‌ ಯೂ ಟ್ಯೂಬ್‌ ಚಾನೆಲ್‌ ಮೀಡಿಯಾ ಪಾರ್ಟನರ್‌ ಆಗಿ ಕೈ ಜೋಡಿಸಿದೆ.

ಮಿಸ್‌ ಯೂನಿವರ್ಸ್‌ ಕರ್ನಾಟಕ ಪೇಜೆಂಟ್‌ಗೆ ಕೈ ಜೋಡಿಸಿದ ವಿಶ್ವವಾಣಿ

ಚಿತ್ರಗಳು: ಮಿಸ್‌ ಯೂನಿವರ್ಸ್‌ ಕರ್ನಾಟಕ ಅಡಿಷನ್‌ನಲ್ಲಿ ಪಾಲ್ಗೊಂಡಿದ್ದ ಮಾಡೆಲ್‌ಗಳು.

ವಿಶೇಷ ವರದಿ: ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬೆಂಗಳೂರು: ಉದ್ಯಾನನಗರಿಯಲ್ಲಿ ಮೊತ್ತ ಮೊದಲ ಬಾರಿಗೆ ಫ್ಯಾಷನ್‌ ಪೇಜೆಂಟ್‌ ಡೈರೆಕ್ಟರ್‌ ನಂದಿನಿ ನಾಗರಾಜ್‌ ನೇತೃತ್ದಲ್ಲಿ, ಮಿಸ್ ಯೂನಿವರ್ಸ್ ಕರ್ನಾಟಕ (Miss Universe Karnataka) ವಿಭಾಗದ ಫಿನಾಲೆ ಶುಕ್ರವಾರ (ಮೇ 16) ನಡೆಯುತ್ತಿದ್ದು, ವಿಶ್ವವಾಣಿ ಟಿವಿ ಸ್ಪೆಷಲ್‌ ಕೈ ಜೋಡಿಸಿದೆ.

ಮಿಸ್‌ ಯೂನಿವರ್ಸ್‌ ಕರ್ನಾಟಕ ಸ್ಪರ್ಧಿಗಳು

ಕರ್ನಾಟಕ ಇತಿಹಾಸದಲ್ಲೆ ಮೊದಲ ಬಾರಿಗೆ ನಡೆದ ಅಡಿಷನ್‌ನಲ್ಲಿ ಸುಮಾರು 100ಕ್ಕೂ ಹೆಚ್ಚು ಭಾವಿ ಮಾಡೆಲ್‌ಗಳು, ಹುಡುಗಿಯರು ಭಾಗವಹಿಸಿದ್ದರು. ನಾನಾ ರೌಂಡ್‌ಗಳಲ್ಲಿ ಪಾಲ್ಗೊಂಡಿದ್ದು, ಫಿನಾಲೆಯಲ್ಲಿ 30 ಯುವತಿಯರು ಮಿಸ್‌ ಯೂನಿವರ್ಸ್‌ ಕರ್ನಾಟಕ ಟೈಟಲ್‌ಗಾಗಿ ಭಾಗವಹಿಸಲಿದ್ದಾರೆ.

Miss Universe Karnataka 2

ನಂದಿನಿ ನಾಗರಾಜ್‌ ಫ್ಯಾಷನ್‌ ಟಾಕ್‌

ಮಿಸ್ ಯೂನಿವರ್ಸ್ ಕರ್ನಾಟಕ-2025 ಸೌಂದರ್ಯ ಸ್ಫರ್ಧೆಯ ಅಡಿಷನ್‌ ಈಗಾಗಲೇ ಯಶಸ್ವಿಯಾಗಿ ನಡೆದಿದ್ದು, ಇಂದು ಸಂಜೆ ಅಂತಿಮ ಸುತ್ತಿನ ಸ್ಫರ್ಧೆ ನಡೆಯಲಿದೆ. ವಿಶ್ವವಾಣಿ ಟಿವಿ ಸ್ಪೆಷಲ್‌ ಮೀಡಿಯಾ ಪಾಟ್ನರ್‌ ಆಗಿದ್ದು, ಇವರೊಂದಿಗೆ ಶಕ್ತಿ ಗ್ರೂಪ್ ಆಫ್ ಕಂಪನಿ ಹಾಗೂ ರೀ ಬರ್ತ್ ಸಂಸ್ಥೆಗಳ ಸಹಭಾಗಿತ್ವವೂ ಸೇರಿದೆ. ಸಂತಸದ ವಿಚಾರವೆಂದರೇ, ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಸ್ಫರ್ಧಿಗಳು ಪಾಲ್ಗೊಂಡಿದ್ದಾರೆ. ಇಲ್ಲಿ ಕಿರೀಟ ವಿಜೇತರಾದವರನ್ನು ‘ಮಿಸ್ ಯೂನಿವರ್ಸ್‌ ಇಂಡಿಯಾ’ ಸ್ಫರ್ಧೆಗೆ ಅಣಿಗೊಣಿಸಲಾಗುವುದು. ಮಿಸ್ ಇಂಡಿಯಾ ಕಿರೀಟ ನಮ್ಮದಾಗಿಸಿಕೊಳ್ಳುವುದು ನಮ್ಮ ಮುಂದಿನ ಗುರಿ ಎಂದು ಆಯೋಜಕಿ ನಂದಿನಿ ನಾಗರಾಜ್ ವಿಶ್ವವಾಣಿ ನ್ಯೂಸ್‌ಗೆ ತಿಳಿಸಿದ್ದಾರೆ.

Miss Universe Karnataka 3

ಜ್ಯೂರಿ ಪ್ಯಾನೆಲ್‌

ಮಿಸ್ ಯೂನಿವರ್ಸ್ ಕರ್ನಾಟಕ ಸೌಂದರ್ಯ ಸ್ಫರ್ಧೆಯ ಫಿನಾಲೆಯಲ್ಲಿ, ಮಿಸ್‌ ಯೂನಿವರ್ಸ್‌ ಇಂಡಿಯಾ ಟೈಟಲ್‌ ವಿಜೇತೆ ರಿಯಾ ಸಿಂಘಾ, ನ್ಯಾಷನಲ್‌ ಡೈರೆಕ್ಟರ್‌ ನಿಖಿಲ್‌ ಆನಂದ್‌, ಮಿಸ್‌ ಯೂನಿವರ್ಸ್‌ ಕರ್ನಾಟಕ 2024 ಟೈಟಲ್‌ ವಿಜೇತೆ ಅವನಿ, ಪೇಜೆಂಟ್‌ನ ಫ್ರಾಂಚೈಸ್‌ ಡೈರೆಕ್ಟರ್‌ ಅಮ್ಜದ್‌ ಖಾನ್‌ ಜ್ಯೂರಿ ವಿಭಾಗದಲ್ಲಿ ಭಾಗವಹಿಸುತ್ತಿದ್ದಾರೆ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ )