ಬಲೂಚಿಸ್ತಾನ: ಮಾನ್ಸೂನ್ ಮಳೆ ಬಲೂಚಿಸ್ತಾನದಲ್ಲಿ 111 ಜನರನ್ನು ಬಲಿ ತೆಗೆದುಕೊಂಡಿದೆ.
ಮುಖ್ಯ ಕಾರ್ಯದರ್ಶಿ ಅಬ್ದುಲ್ ಅಜೈ ಅಕಿಲಿ, ಪ್ರಾಂತ್ಯದಲ್ಲಿ ಭಾರೀ ಮಳೆ ಯಿಂದಾಗಿ 6,077 ಮನೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. 10,000 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.ಮಳೆಗೆ ಸಂಬಂಧಿಸಿದ ವಿವಿಧ ಘಟನೆಗಳಲ್ಲಿ 16 ಅಣೆಕಟ್ಟುಗಳಿಗೆ ಹಾನಿಯಾಗಿದೆ. ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದ ಬೆಳೆಗಳು ಹಾನಿಗೊಳಗಾಗಿವೆ ಎಂದು ಹೇಳಿದ್ದಾರೆ.
ಈ ವರ್ಷದ ಮಳೆಯೂ ಹಿಂದಿನ ಮಳೆಗೆ ಹೋಲಿಸಿದರೆ ಶೇ.500 ಕ್ಕಿಂತ ಹೆಚ್ಚು ಪರಿಣಾಮ ಬೀರಿದೆ. ಇದರಿಂದಾಗಿ ಸುಮಾರು 2,400 ಸೌರ ಫಲಕಗಳನ್ನು ತೀವ್ರವಾಗಿ ಹಾನಿಗೊಳಿಸಿದೆ ಎಂದು ಮುಖ್ಯ ಕಾರ್ಯದರ್ಶಿ ಹೇಳಿದರು.
ಮಳೆಯಿಂದಾಗಿ ಬಲೂಚಿಸ್ತಾನದ ಕನಿಷ್ಠ 10 ಜಿಲ್ಲೆಗಳು ಹಾನಿಗೊಳಗಾಗಿದ್ದು, ಸುಮಾರು 650 ಕಿಮೀ ರಸ್ತೆಗಳು ಹಾನಿಗೊಳ ಗಾಗಿವೆ. ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ಅಡ್ಡಿಯುಂಟಾ ಗಿದ್ದು, ಶೇಖರಣೆಗೊಂಡ ನೀರಿನಿಂದ ಹಲವು ವಾಹನಗಳು ಸಿಕ್ಕಿ ಬಿದ್ದಿವೆ ಎಂದಿದ್ದಾರೆ.
ವಿನಾಶಕಾರಿ ಮಳೆಯ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ನೌಕರರ ರಜೆಗಳನ್ನು ರದ್ದುಗೊಳಿಸಲಾಗಿದೆ ಎಂದು ಉನ್ನತ ಅಧಿಕಾರಿ ತಿಳಿಸಿದ್ದಾರೆ.
ಪಾಕಿಸ್ತಾನದ ಹವಾಮಾನ ಇಲಾಖೆ (ಪಿಎಂಡಿ) ಪ್ರಾಂತ್ಯದ ವಿವಿಧ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯ ಮುನ್ಸೂಚನೆ ನೀಡಿದೆ. ಪಾಕಿಸ್ತಾನದಾದ್ಯಂತ ಭಾರೀ ಮಳೆಯಿಂದಾಗಿ, ಜನರು ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿರುವ ಹಲವಾರು ಘಟನೆಗಳು ಬೆಳಕಿಗೆ ಬಂದಿವೆ.
ಜು.29 ರಿಂದ 31 ರವರೆಗೆ ಕ್ವೆಟ್ಟಾ, ಚಮನ್, ಹರ್ನೈ, ಝೋಬ್, ಜಿಯಾರತ್, ಬರ್ಖಾನ್, ಲೋರಲೈ, ಬೋಲನ್, ಕೊಹ್ಲು, ಕಲಾತ್, ಖುಜ್ದರ್, ಲಾಸ್ಬೆಲ್ಲಾ, ನಸೀರಾಬಾದ್, ಜಫರಾಬಾದ್, ಸಿಬ್ಬಿಯಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.