ವಿಮಾನದಲ್ಲಿ ದೊರೆತ ಬ್ಲಾಕ್ ಬಾಕ್ಸ್ನಿಂದ ಸಂಗ್ರಹಿಸಲಾದ ಡೇಟಾ ಪ್ರಕಾರ, ಕಾಕ್ಪಿಟ್ನಲ್ಲಿ ಒಬ್ಬರು ಉದ್ದೇಶಪೂರ್ವಕ ವಾಗಿಯೇ ವಿಮಾನವನ್ನು ಪತನ ಮಾಡಿರುವುದು ಬೆಳಕಿಗೆ ಬಂದಿದೆ.
ವಿಮಾನವು 132 ಪ್ಯಾಸೇಂಜರ್ನ ಹೊತ್ತುಕೊಂಡು ಕುನ್ಮಿಂಗ್ನಿಂದ ಗುವಾಂಗ್ ಝೌಗೆ ತೆರಳುತ್ತಿತ್ತು. ಫ್ಲೈಟ್ರಾಡರ್ ಡೇಟಾ ಪ್ರಕಾರ ಪತನಗೊಂಡ ಸಮಯ ದಲ್ಲಿ ವಿಮಾನವು ಗಂಟೆಗೆ 700 ಕಿ.ಮೀ ವೇಗದಲ್ಲಿ 29 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ಗುವಾಂಗ್ಸಿ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಕೆಳಮುಖವಾಗಿ ಕುಸಿದು ಪತನಗೊಂಡಿತು.
28 ವರ್ಷದಲ್ಲಿ ಚೀನಾದಲ್ಲಿ ನಡೆದ ಅತ್ಯಂತ ಅಪಾಯಕಾರಿ ವಿಮಾನ ಪತನ ಇದಾಗಿದೆ.