Sunday, 15th December 2024

ಮೆಕ್ಸಿಕೊದಲ್ಲಿ ಹೆಲಿಕಾಪ್ಟರ್ ಪತನ: 14 ಸಿಬ್ಬಂದಿ ಸಾವು

ಮೆಕ್ಸಿಕೊ: ಮೆಕ್ಸಿಕೊದಲ್ಲಿ ಹೆಲಿಕಾಪ್ಟರ್ ಪತನಗೊಂಡು ನೌಕಾಪಡೆಯ 14 ಸಿಬ್ಬಂದಿ ಮೃತಪಟ್ಟಿದ್ದಾರೆ.

ಮಾದಕ ವಸ್ತು ಕಳ್ಳ ಸಾಗಣೆದಾರನೊಬ್ಬನನ್ನು ಬಂಧಿಸಿ ಕರೆದೊಯ್ಯುತ್ತಿದ್ದ ಸಮಯದಲ್ಲಿ ಬೆಂಗಾವಲು ಹೆಲಿಕಾಪ್ಟರ್ ಅಪಘಾತ ಕ್ಕೀಡಾಗಿರುವುದಾಗಿ ತಿಳಿಸಿದೆ.

ಸಿನಾಲೋವಾದಲ್ಲಿ ಡ್ರಗ್ ಸಾಗಣೆದಾರ ಕ್ಯಾರೊ ಕ್ವಿಂಟೆರೊ ಅವರನ್ನು ಶುಕ್ರವಾರ ಬಂಧಿಸಲಾಗಿತ್ತು. ಅವರನ್ನು ಕರೆದೊಯ್ಯು ತ್ತಿದ್ದ ಮತ್ತೊಂದು ವಿಮಾನಕ್ಕೆ ನೌಕಪಡೆಯ ಬ್ಲ್ಯಾಕ್ ಹೆಲಿಕಾಪ್ಟರ್ ಬೆಂಗಾವಲು ನೀಡುತಿತ್ತು ಎನ್ನಲಾಗಿದೆ.

ಅಪಘಾತದಲ್ಲಿ ಒಬ್ಬರು ಗಾಯಗೊಂಡಿದ್ದು, ದುರ್ಘಟನೆಗೆ ಕಾರಣ ತಿಳಿದುಬಂದಿಲ್ಲ, ಈ ಸಂಬಂಧ ತನಿಖೆ ನಡೆಯತ್ತಿದೆ ಎಂದು ನೌಕಪಡೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ವಿಮಾನ ಅಪಘಾತಕ್ಕೂ, ಮಾದಕ ವಸ್ತು ಕಳ್ಳ ಸಾಗಣೆದಾರ ಬಂಧನಕ್ಕೂ ಸಂಬಂಧ ಇರುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ನೌಕಪಡೆ ಹೇಳಿದೆ.