Saturday, 7th September 2024

ವಲಸಿಗರ ದೋಣಿ ಮಗುಚಿ 17 ಮಂದಿ ಸಾವು

ಮೆಕ್ಸಿಕೋ: ಹೈಟಿ ದೇಶದ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ ಬಿದ್ದು 15 ಮಹಿಳೆಯರು, ಇಬ್ಬರು ಮಕ್ಕಳು ಸೇರಿ 17 ಮಂದಿ ಮೃತಪಟ್ಟಿದ್ದಾರೆ.

ಹೈಟಿ ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದಿಂದ ಬೇಸತ್ತು ಬೇರೆ ದೇಶಕ್ಕೆ ಪಲಾಯನ ಮಾಡುತ್ತಿದ್ದು, ಪಲಾಯನದ ವೇಳೆ 60 ಜನರಿದ್ದ ಬೋಟ್ ನೀರಿ ನಲ್ಲಿ ಮುಳುಗಡೆಯಾಗಿ ಈ ಘಟನೆ ನಡೆದಿದೆ.

ಮೃತ ದೇಹಗಳನ್ನು ಪತ್ತೆ ಮಾಡಿದ್ದು, 25 ಜನರನ್ನು ರಕ್ಷಿಸಲಾಗಿದೆ. ನ್ಯೂ ಪ್ರಾವಿಡೆನ್ಸ್‍ನಿಂದ ಏಳು ಮೈಲಿ ದೂರದಲ್ಲಿ ದೋಣಿ ಮುಳುಗಡೆಯಾಗಿದ್ದು, ಇನ್ನು ಹಲವು ಮಂದಿ ನಾಪತ್ತೆಯಾಗಿದ್ದಾರೆ.

60 ಜನರನ್ನು ಕರೆದೊಯ್ಯುತ್ತಿದ್ದ ಡಬಲ್ ಇಂಜಿನ್ ದೋಣಿ ಬಹಾಮಾನ್‍ನಿಂದ ಮಿಯಾಮಿಗೆ ಹೊರಟಿತ್ತು. ಸುರಕ್ಷಿತ ಜೀವನ ಕ್ಕಾಗಿ 11 ಮಿಲಿಯನ್‍ಗಿಂತಲೂ ಹೆಚ್ಚು ಜನ ಬೇರೆ ಕಡೆ ವಲಸೆ ಹೋಗುತ್ತಿದ್ದಾರೆ. ಈ ವರ್ಷ ಹಲವಾರು ದೋಣಿ ದುರಂತಗಳು ಸಂಭವಿಸಿವೆ.

error: Content is protected !!