ಇಸ್ಲಾಮಾಬಾದ್ : ಸಿಂಧೂ ನದಿಗೆ ವ್ಯಾನ್ ಉರುಳಿ ಬಿದ್ದು, ವಾಹನದಲ್ಲಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 17 ಮಂದಿ ಮೃತಪಟ್ಟಿದ್ದಾರೆ. ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಘಟನೆ ಸಂಭವಿಸಿದೆ.
ವ್ಯಾನ್ ಚಿಲಾಸ್ ನಿಂದ ರಾವಲ್ಪಿಂಡಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿ ಸಿದೆ ಎಂದು ದಸು-ಕೊಹಿಸ್ತಾನ್ ನಿಯಂತ್ರಣ ಕೊಠಡಿ ಅಧಿಕಾರಿಗಳು ತಿಳಿಸಿ ದ್ದಾರೆ.
ವ್ಯಾನ್ ಪಾನಿಬಾ ಪ್ರದೇಶದ ಬಳಿ ನದಿಗೆ ಬಿದ್ದಿತು. ಮಹಿಳೆಯ ಶವ ನದಿ ದಡದಲ್ಲಿ ಬಿದ್ದಿದ್ದರಿಂದ, ಇತರ ಪ್ರಯಾಣಿಕರು ಮತ್ತು ವ್ಯಾನ್ ಅನ್ನು ಪತ್ತೆ ಹಚ್ಚಲು ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸ್ಥಳೀಯರು ಮತ್ತು ರಕ್ಷಣಾ ಅಧಿಕಾರಿಗಳನ್ನು ಸಹಕಾರಿ ಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಿಲ್ಗಿಟ್-ಬಾಲ್ಟಿಸ್ತಾನ್ ಮುಖ್ಯಮಂತ್ರಿ ಖಾಲಿದ್ ಖುರ್ಷಿದ್ ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.