ತಾಂಜೇನಿಯಾ: ಸಣ್ಣ ಪ್ರಯಾಣಿಕ ವಿಮಾನ ತಾಂಜೇನಿಯಾದ ವಿಮಾನ ನಿಲ್ದಾಣವನ್ನ ಸಮೀಪಿಸುತ್ತಿದ್ದಾಗ ವಿಕ್ಟೋರಿಯಾ ಸರೋವರದಲ್ಲಿ ಪತನವಾಯ್ತು. ವಿಮಾನ ಕನಿಷ್ಠ 43 ಜನರನ್ನ ಹೊತ್ತಿತ್ತು ಎಂದು ಹೇಳಲಾಗಿದೆ. ಈ ಪೈಕಿ 19 ಜನರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸರೋವರಕ್ಕೆ ಬಿದ್ದ 26 ಜನರನ್ನು ರಕ್ಷಣಾ ಕಾರ್ಯಕರ್ತರು ರಕ್ಷಿಸಿದ್ದಾರೆ.
‘ನಾವು ಹೆಚ್ಚಿನ ಸಂಖ್ಯೆಯ ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಕಾಗೆರಾ ಪ್ರಾಂತ್ಯದ ಪೊಲೀಸ್ ಕಮಾಂಡರ್ ವಿಲಿಯಂ ಹೇಳಿದ್ದಾರೆ. ವಿಮಾನವು ಸುಮಾರು 100 ಮೀಟರ್ (328 ಅಡಿ) ಎತ್ತರದಲ್ಲಿದ್ದಾಗ, ಪ್ರತಿಕೂಲ ಹವಾಮಾನದಿಂದಾಗಿ ಸಮಸ್ಯೆ ಎದುರಿಸಿತು ಎಂದು ವಿವರಿಸಿದರು. ಇನ್ನು ಮಳೆಯ ನಡುವೆ ವಿಮಾನವು ನೀರಿಗೆ ಬಿದ್ದಿದ್ದು, ಈಗ ಎಲ್ಲವೂ ನಿಯಂತ್ರಣ ದಲ್ಲಿದೆ. ಆದಾಗ್ಯೂ, ರಕ್ಷಣಾ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿವೆ.