Thursday, 12th December 2024

20 ಸಾವಿರ ಉದ್ಯೋಗಿಗಳಲ್ಲಿ ಕೊರೊನಾ ಸೋಂಕು ದೃಢ: ಅಮೆಜಾನ್

ಸ್ಯಾನ್ ಫ್ರಾನ್ಸಿಸ್ಕೋ: ಕಳೆದ ಮಾರ್ಚ್ ಆರಂಭದಿಂದಲೂ ತನ್ನ ಉದ್ಯೋಗಿಗಳಲ್ಲಿ 20000 ಕ್ಕಿಂತಲೂ ಹೆಚ್ಚು ಜನರಿಗೆ ಕೋವಿಡ್ -19 ಗೆ ಪಾಸಿಟಿವ್ ದೃಢವಾಗಿದೆ ಎಂದು ಅಮೆಜಾನ್ ಸಂಸ್ಥೆ ತಿಳಿಸಿದೆ.

ಇ-ಕಾಮರ್ಸ್ ದೈತ್ಯ 1.37 ಮಿಲಿಯನ್ ಮುಂಚೂಣಿ ಕಾರ್ಮಿಕರನ್ನು ಹೊಂದಿದ್ದು, ಅಮೆರಿಕಾದ ಆಹಾರ ಮಾರುಕಟ್ಟೆ, ಕಿರಾಣಿ ಅಂಗಡಿಗಳಲ್ಲಿರುವವರು ಸೇರಿದಂತೆ, ಲಕ್ಷಾಂತರ ಉದ್ಯೋಗಿ ಗಳಲ್ಲಿ ನಿರೀಕ್ಷೆಗಿಂತ ಕಡಿಮೆ ಸೋಂಕಿನ ಪ್ರಮಾಣವನ್ನು ದಾಖಲಿ ಸಿದೆ ಎಂದು ಅಮೆಜಾನ್ ಹೇಳಿದೆ.

ಲಾಜಿಸ್ಟಿಕ್ಸ್ ಕೇಂದ್ರಗಳಲ್ಲಿನ ಕೆಲವು ಕಾರ್ಮಿಕರು ಸಾಂಕ್ರಾಮಿಕ ರೋಗದಿಂದ ರಕ್ಷಿಸಿಕೊಳ್ಳಲು ಕಂಪನಿಯ ಸುರಕ್ಷತೆಗಳನ್ನು ಟೀಕಿಸಿರುವುದರಿಂದ ಮತ್ತು ಸೋಂಕಿಗೆ ಒಳಗಾದ ಸಹೋದ್ಯೋಗಿ ಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ಹಿಂಜರಿಯು ತ್ತಿರುವುದರಿಂದ ಈ ಅಂಕಿ ಅಂಶ ಬಿಡುಗಡೆಯಾಗಿದೆ.

“ಈ ಬಿಕ್ಕಟ್ಟಿನ ಆರಂಭದಿಂದಲೂ, ನಮ್ಮ ಉದ್ಯೋಗಿಗಳಿಗೆ ಮಾಹಿತಿ ನೀಡುವಂತೆ ನಾವು ಶ್ರಮಿಸಿದ್ದೇವೆ, ಅವರ ಕಟ್ಟಡದಲ್ಲಿನ ಪ್ರತಿಯೊಂದು ಹೊಸ ಪ್ರಕರಣಗಳ ಬಗ್ಗೆ ತಿಳಿಸುತ್ತೇವೆ” ಎಂದು ಅಮೆಜಾನ್ ಬ್ಲಾಗ್ ಪೋಸ್ಟ್‌ ನಲ್ಲಿ ಕೋವಿಡ್ -19 ಸೋಂಕಿನ ಪ್ರಮಾಣ ಹಂಚಿಕೊಂಡಿದೆ.