Sunday, 22nd December 2024

2024 Recap: ಬಾಬಾ ವಂಗಾ 2024ರಲ್ಲಿ ನುಡಿದಿದ್ದ ಭವಿಷ್ಯವಾಣಿಗಳಲ್ಲಿ ನಿಜವಾಗಿದ್ದೆಷ್ಟು?

ಬಾಬಾ ವಂಗಾ (Baba Vanga) ತನ್ನ ಅಗೋಚರ ಶಕ್ತಿಯ ಭವಿಷ್ಯವಾಣಿಗಳಿಂದ (Predictions) ವಿಶ್ವದ ಗಮನವನ್ನೇ ಸೆಳೆದ ಅತೀವ ಶಕ್ತಿ ಇರುವ ವ್ಯಕ್ತಿ. ಯುರೋಪಿನ (Eurpoe) ಬಲ್ಗೇರಿಯಾದ (Bulgaria) ಬಾಬಾ ವಂಗಾ ತನ್ನ ರೋಚಕ ಭವಿಷ್ಯವಾಣಿಗಳಿಂದ ಜಗತ್ತಿನೆಲ್ಲೆಡೆ ಪ್ರಸಿದ್ಧರಾಗಿದ್ದಾರೆ. ಈಕೆಯನ್ನು ಖ್ಯಾತ ಭವಿಷ್ಯಕಾರ ನಾಸ್ಟ್ರಾಡಾಮ್ ನೊಂದಿಗೆ ಹೋಲಿಸಲಾಗುತ್ತದೆ. ಬಾಬಾ ವಂಗ ಎರಡನೇ ವಿಶ್ವಯುದ್ಧದ (Second world War) ಸಂದರ್ಭದಲ್ಲಿ ತಮ್ಮ ಭವಿಷ್ಯವಾಣಿಯ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು ಮತ್ತು ಆಕೆಯ ಭವಿಷ್ಯವನ್ನು ಹೇಳುವ ಸಾಮರ್ಥ್ಯ ಜಗತ್ತಿನ ಮುಂದೆ ಅನಾವರಣಗೊಂಡಿತ್ತು. 1996ರಲ್ಲೇ ಬಾಬಾ ವಂಗ ಸಾವನ್ನಪ್ಪಿದ್ದರೂ ಆಕೆ ನುಡಿದಿದ್ದ ಭವಿಷ್ಯವಾಣಿಗಳು ಇಂದಿಗೂ ನಿಜವಾಗುತ್ತಿರುವುದು ವಿಶೇಷ. ಆದರೆ ಈ ಸಲ, 2024ರಲ್ಲಿ (2024 Recap) ಬಾಬಾ ವಂಗ ಹೇಳಿದ್ದ ಭವಿಷ್ಯವಾಣಿಗಳಲ್ಲಿ ಯಾವುದೆಲ್ಲಾ ನಿಜವಾಗಿದೆ ಎಂಬುದರ ಮೇಲೆ ಬೆಳಕು ಚೆಲ್ಲುವುದು ಈ ಲೇಖನದ ಉದ್ದೇಶವಾಗಿದೆ.

ಆ ಬಳಿಕ 9/11 ಉಗ್ರ ದಾಳಿ, 2001ರಲ್ಲಿ ಕರ್ಸ್ಕ್ ಸಬ್ ಮೆರೀನ್ ಮುಳುಗಡೆಯಂತಹ ಭವಿಷ್ಯಗಳನ್ನು ಬಹಳ ಹಿಂದೆಯೇ ಊಹಿಸಿದ್ದ ಬಾಬಾ ವಂಗ ಅವರನ್ನು ಅಭಿಮಾನಪಡುವ ಒಂದು ವರ್ಗವೇ ಇದೆ. ಇನ್ನು ಪ್ರತೀ ಸಲ ಹೊಸ ವರ್ಷ ಬಂದಾಗ ಆ ವರ್ಷದಲ್ಲಿ ಜಗತ್ತಿನಲ್ಲಿ ಯಾವೆಲ್ಲಾ ಪ್ರಮುಖ ಘಟನೆಗಳು ನಡೆಯಲಿವೆ ಎಂಬುದನ್ನು ಬಾಬಾ ವಂಗ ಹಿಂದೆಯೇ ಹೇಳಿದ್ದರು ಎಂಬ ವಿಚಾರಕ್ಕಾಗಿ ಆಕೆಯ ಭವಿಷ್ಯವಾಣಿ ಮುನ್ನಲೆಗೆ ಬರುತ್ತದೆ.

2024ರ ಬಗ್ಗೆ ಬಾಬಾ ವಂಗ ಹಿಂದೆಯೇ ನುಡಿದಿದ್ದ ಭವಿಷ್ಯವಾಣಿ ಭಯಾನಕ ಮತ್ತು ವಿಚಿತ್ರವಾಗಿತ್ತು. ಆರ್ಥಿಕ ಅಲ್ಲೋಲಕಲ್ಲೋಲದಿಂದ ವೈಜ್ಞಾನಿಕ ಸಂಶೋಧನೆಗೆಳವರೆಗೆ ಆಕೆ ನುಡಿದಿದ್ದ ಭವಿಷ್ಯವಾಣಿಗಳಲ್ಲಿ ಯಾವುದೆಲ್ಲಾ ನಿಜವಾಗಿದೆ ಎಂಬ ಮಾಹಿತಿ ಇಲ್ಲಿದೆ.

ಆರ್ಥಿಕ ಬಿಕ್ಕಟ್ಟು:

2024ರಲ್ಲಿ ಜಾಗತಿಕ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟು (economic crisis) ಉಂಟಾಗುತ್ತದೆ ಎಂಬ ವಿಚಾರವನ್ನು ಬಾಬಾ ವಂಗ ಬಹಳ ಹಿಂದೆಯೇ ಕಂಡುಕೊಂಡು ಆ ಬಗ್ಗೆ ಭವಿಷ್ಯವಾಣಿ ನುಡಿದಿದ್ದರು. ಜಾಗತಿಕ ಮಟ್ಟದಲ್ಲಿನ ರಾಜಕೀಯ ಅಸ್ಥಿರತೆಯ ಕಾರಣದಿಂದ ಹೆಚ್ಚಿನ ಕಡೆಗಳಲ್ಲಿ ಆರ್ಥಿಕ ಬಿಕ್ಕಟ್ಟು ಕಾಣಿಸಿಕೊಂಡು ಸಾಲದ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆಗಳನ್ನು ಹೇಳಿದ್ದ ಬಾಬಾ ವಂಗ ಭವಿಷ್ಯವಾಣಿ ಬಹುತೇಕ ನಿಜವಾಗಿದೆ. ಇನ್ನು ಅಮೆರಿಕಾದಲ್ಲಿ ಆರ್ಥಿಕ ಹಿಂಜರಿತ (recession) ಕಾಣಿಸಿಕೊಳ್ಳುತ್ತದೆ ಎಂಬ ಚರ್ಚೆಗಳು ಈಗಾಗಲೇ ಜೊರಾಗಿಯೇ ನಡೆಯುತ್ತಿದೆ.

ಆರ್ಥಿಕ ಹಿಂಜರಿತದ ಅಧಿಕೃತ ಅಂಕಗಾರ ದಿ ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್ () ಇದುವರೆಗೂ 2020ರ ಕೋವಿಡ್ ಕಾಲಘಟ್ಟದ ಬಳಿಕ ಯಾವುದೇ ಆರ್ಥಿಕ ಹಿಂಜರಿತದ ಬಗ್ಗೆ ಹೇಳಿಲ್ಲ. 2020ರಲ್ಲಿ ಶಾರ್ಟ್ ರಿಸೆಷನ್ ಕಾಣಿಸಿಕೊಂಡಿತ್ತು. ಈ ಹಿಂದೆ ಗ್ರೇಟ್ ರಿಸೆಷನ್ ಕಾಣಿಸಿಕೊಂಡಿದ್ದು 2007-2009ರ ಅವಧಿಯಲ್ಲಾಗಿತ್ತು. ಆದರೂ, ಹಣದುಬ್ಬರ ದರ ಏರಿಕೆ, ಉದ್ಯೋಗ ಕಡಿತ ಮತ್ತು ಬಡ್ಡಿದರದಲ್ಲಿ ಏರಿಕೆ ಮೊದಲಾದವು ಭವಿಷ್ಯದಲ್ಲಿ ಸಂಭವಿಸಬಹುದಾದ ಆರ್ಥಿಕ ಹಿಂಜರಿತದ ಮುನ್ಸೂಚನೆಯೆಂದೇ ಹೇಳಲಾಗುತ್ತಿದೆ.

ಹವಾಮಾನ ವೈಪರಿತ್ಯ:

ಹವಾಮಾನ ವೈಪರಿತ್ಯ (Climate Troubles) ಮನುಕುಲಕ್ಕೆ ಭವಿಷ್ಯದ ಆತಂಕವಲ್ಲ ; ಬದಲಾಗಿ ನಾವೀಗ ಎದುರಿಸುತ್ತಿರುವ ನೈಜ ಪರಿಸ್ಥಿತಿಯಾಗಿದೆ. ಈ ಬಗ್ಗೆ ಬಾಬಾ ವಂಗಾ ಹೇಳಿದ್ದ ಭವಿಷ್ಯದ ನುಡಿಗಳು ಪ್ರತೀವರ್ಷ ನಿಜವಾಗುತ್ತಿದೆ. 2024 ಇದುವರೆಗೆ ದಾಖಲಾಗಿರುವದಕ್ಕಿಂತ ಅತಿ ಹೆಚ್ಚಿನ ತಾಪಮಾನ ದಾಖಲಾಗಿರುವ ವರ್ಷವಾಗಿತ್ತು. ಇನ್ನು, ಬಾಬಾ ವಂಗ ಹೇಳಿರುವ ಭವಿಷ್ಯವಾಣಿಗಳಲ್ಲಿ ಹೆಚ್ಚಿನವು ದುರಂತಗಳಿಗೆ ಸಂಬಂಧಿಸಿದ್ದೇ ಆಗಿದ್ದರೂ, 2024ರ ಬಗ್ಗೆ ಆಕೆ ನುಡಿದಿದ್ದ ಭವಿಷ್ಯದಲ್ಲಿ ವೈದ್ಯಕೀಯ ಕ್ಷೇತ್ರದ ಬಗ್ಗೆ ಆಕೆ ನುಡಿರುವ ಆಶಾವಾದದ ಭವಿಷ್ಯ ನಿಜವಾಗಿದೆ.

ಈ ಸುದ್ದಿಯನ್ನೂ ಓದಿ: Viral Video: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಹಳಿ ಮೇಲೆ ಬಿದ್ದ ವ್ಯಕ್ತಿ-ಆಮೇಲೆ ನಡೆದಿದ್ದು ಪವಾಡವೇ ಸರಿ! ವಿಡಿಯೋ ವೈರಲ್

ಆಕೆಯ ಭವಿಷ್ಯವಾಣಿಯಂತೆ 2024ರಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರವಾದ ಬೆಳವಣಿಗೆಗಳು ದಾಖಲಾಗಿವೆ. ಇದರಲ್ಲಿ ಬಹಳ ಮುಖ್ಯವಾಗಿ ಉಲ್ಲೇಖಿಸಬಹುದಾಗಿರುವುದೆಂದರೆ, ಗರ್ಭಕೋಶದ ಕ್ಯಾನ್ಸರ್ ಗೆ (cervical cancer) ಸಂಬಂಧಿಸಿದ ಚಿಕಿತ್ಸೆ. ಗರ್ಭಕೋಶದ ಕ್ಯಾನ್ಸರ್ ಗೊಳಗಾಗಿರುವ ರೋಗಿಗಳಲ್ಲಿ ಸ್ಟ್ಯಾಂಡರ್ಡ್ ಚಿಕಿತ್ಸೆ ಪ್ರಾರಂಭಿಸುವ ಮೊದಲು ಶಾರ್ಟ್ ಕೋರ್ಸ್ ಕಿಮೋಥೆರಪಿಯಿಂದಾಗಿ ಮರಣ ಸಾಧ್ಯತೆ ಪ್ರಮಾಣವನ್ನು 40% ಕಡಿಮೆಗೊಳಿಸಬಹುದಾಗಿದೆ.

2025ರ ಬಗ್ಗೆ ಬಾಬಾ ವಂಗಾ ನುಡಿದಿರುವ ಭವಿಷ್ಯದ ಬಗ್ಗೆ ಹೇಳೋದಾದ್ರೆ, ವಿಶ್ವದ ಅಂತ್ಯ ಈ ವರ್ಷದಿಂದ ಪ್ರಾರಂಭಗೊಳ್ಳಲಿದೆ ಎಂಬ ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ. ಆದರೆ ಮನುಕುಲದ ಉಳಿವಿಗೆ 5079ನೇ ಇಸವಿಯವರೆಗೆ ಯಾವುದೇ ಆತಂಕವಿಲ್ಲವಂತೆ! ಯುರೋಪ್ ಖಂಡದಲ್ಲಿ ನಿರಂತರ ಘರ್ಷಣೆಗಳ ಕಾರಣ ಆ ಖಂಡದ ಜನಸಂ‍ಖ್ಯಾ ಪ್ರಮಾಣ 2025ರ ವೇಳೆಗೆ ಗಣನೀಯವಾಗಿ ಕುಸಿತ ಕಾಣಲಿದೆಯಂತೆ.