Friday, 22nd November 2024

ಮುಸ್ತಾಂಗ್ ಜಿಲ್ಲೆಯಲ್ಲಿ ವಿಮಾನ ಪತನ: 22 ಮೃತದೇಹಗಳು ಪತ್ತೆ

ಕಠ್ಮಂಡು: ನಾಲ್ವರು ಭಾರತೀಯರು ಸೇರಿ 22 ಮಂದಿಯನ್ನು ಹೊತ್ತು ಸಾಗುತ್ತಿದ್ದ ತಾರಾ ವಿಮಾನ ನೇಪಾಳದ ಪರ್ವತ ಪ್ರದೇಶ ಮುಸ್ತಾಂಗ್ ಜಿಲ್ಲೆ ಯಲ್ಲಿ ಪತನಗೊಂಡಿದ್ದ, ಸ್ಥಳದಿಂದ ಎಲ್ಲ ಪ್ರಯಾಣಿಕರ ಮೃತದೇಹ ಸಿಕ್ಕಿದೆ ಎಂದು ನೇಪಾಳ ಸೇನೆ ಮಂಗಳವಾರ ತಿಳಿಸಿದೆ.

ಕಳೆದ ಭಾನುವಾರ ಪರ್ವತಮಯ ಮುಸ್ತಾಂಗ್ ಜಿಲ್ಲೆಯಲ್ಲಿ ಪತನಗೊಂಡ ತಾರಾ ಏರ್ ವಿಮಾನದ ಅವಶೇಷಗಳ ಸ್ಥಳದಿಂದ ರಕ್ಷಕರು 21 ಶವಗಳನ್ನು ವಶಪಡಿಸಿಕೊಂಡ ಒಂದು ದಿನದ ನಂತರ, ಕೊನೆಯ ದೇಹವನ್ನು ಪಡೆಯಲು ನೇಪಾಳದ ಅಧಿಕಾರಿ ಗಳು ಶೋಧ ಕಾರ್ಯ ಪುನರಾರಂಭಿಸಿದರು.

ಕೊನೆಯ ಮೃತದೇಹ ಪತ್ತೆಯಾಗಿದೆ. ಅಪಘಾತದ ಸ್ಥಳದಿಂದ ಉಳಿದ 12 ಮೃತ ದೇಹಗಳನ್ನು ಕಠ್ಮಂಡುವಿಗೆ ತರಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ನೇಪಾಳ ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ನಾರಾಯಣ್ ಸಿಲ್ವಾಲ್ ಟ್ವೀಟ್ ಮಾಡಿದ್ದಾರೆ.

ಸೋಮವಾರ ರಾತ್ರಿಯ ವೇಳೆಗೆ, ರಕ್ಷಕರು 21 ಶವಗಳನ್ನು ಹೊರತೆಗೆದಿದ್ದಾರೆ ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎಎನ್) ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. ನೇಪಾಳದ ಪರ್ವತ ಪ್ರದೇಶದಲ್ಲಿ ಕಳೆದ ಭಾನುವಾರ ಬೆಳಗ್ಗೆ ಟರ್ಬೊ ಪ್ರಾಪ್ ಟ್ವಿನ್ ಓಟರ್ 9ಎನ್-ಎಇಟಿ ವಿಮಾನ ನಾಪತ್ತೆಯಾಗಿತ್ತು.

ವಿಮಾನಯಾನದ ವೆಬ್‌ಸೈಟ್‌ನ ಪ್ರಕಾರ ತಾರಾ ಏರ್ ನೇಪಾಳದ ಪರ್ವತಗಳಲ್ಲಿ ಹೊಸ ಮತ್ತು ಅತಿ ದೊಡ್ಡ ಏರ್‌ಲೈನ್ ಸೇವಾ ಪೂರೈಕೆದಾರ ಸಂಸ್ಥೆಯಾಗಿದೆ.

ಎವರೆಸ್ಟ್ ಸೇರಿದಂತೆ ವಿಶ್ವದ 14 ಎತ್ತರದ ಪರ್ವತಗಳಲ್ಲಿ ಎಂಟು ನೇಪಾಳದಲ್ಲಿ ವಾಯು ಅಪಘಾತಗಳು ಸಂಭವಿಸಿದ್ದವು. 2016 ರಲ್ಲಿ, ಅದೇ ಮಾರ್ಗದಲ್ಲಿ ಹಾರುತ್ತಿದ್ದ ಅದೇ ಏರ್‌ಲೈನ್‌ನ ವಿಮಾನವು ಟೇಕಾಫ್ ಆದ ನಂತರ ಪತನಗೊಂಡಾಗ ವಿಮಾನ ದಲ್ಲಿದ್ದ ಎಲ್ಲಾ 23 ಜನರು ಮೃತಪಟ್ಟಿದ್ದರು.

ವಿಮಾನದಲ್ಲಿದ್ದ 51 ಜನರು ಮೃತಪಟ್ಟಿದ್ದರು. 2012ರ ಸೆಪ್ಟೆಂಬರ್‌ನಲ್ಲಿ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡುವ ವೇಳೆ ಸೀತಾ ಏರ್ ವಿಮಾನ ಪತನಗೊಂಡು 19 ಮಂದಿ ಮೃತಪಟ್ಟಿದ್ದರು.