Monday, 16th September 2024

ಪಾಕಿಸ್ತಾನ: ಬಸ್, ಟ್ರಕ್ ಗೆ ಡಿಕ್ಕಿ, 30 ಜನರ ಸಾವು

ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಡೇರಾ ಘಾಜಿ ಖಾನ್ ನ ಸಿಂಧೂ ಹೆದ್ದಾರಿ ಯಲ್ಲಿ ಪ್ರಯಾಣಿಕರ ಬಸ್, ಟ್ರಕ್ ಗೆ ಡಿಕ್ಕಿ ಹೊಡೆದು ಕನಿಷ್ಠ 30 ಜನರು ಮೃತಪಟ್ಟು, ಇತರ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಬಸ್ ಸಿಯಾಲ್ ಕೋಟ್ ನಿಂದ ರಾಜನ್ ಪುರಕ್ಕೆ ತೆರಳುತ್ತಿತ್ತು. ಅಪಘಾತ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಧಾವಿಸಿ, ಗಾಯಾಳುಗಳನ್ನು ಡೇರಾ ಘಾಜಿ ಖಾನ್ ನ ಡಿಎಚ್ ಕ್ಯು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಡೇರಾ ಘಾಜಿ ಖಾನ್ ನ ಆಯುಕ್ತ ಡಾ.ಇರ್ಷಾದ್ ಅಹ್ಮದ್ ತಿಳಿಸಿದ್ದಾರೆ. ನಾಲ್ವರ ಸ್ಥಿತಿ ಗಂಭೀರ ವಾಗಿದ್ದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *