Saturday, 14th December 2024

ಟ್ರಂಪ್ ರ‍್ಯಾಲಿಗಳಲ್ಲಿ 30 ಸಾವಿರ ಕೊರೊನಾ ಪ್ರಕರಣ, 700 ಸಾವು ?

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿದ ಸುಮಾರು 18 ಚುನಾವಣಾ ರ್ಯಾಲಿಗಳಲ್ಲಿ 30,000ಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ಮತ್ತು 700ಕ್ಕೂ ಹೆಚ್ಚು ಸಾವು ಸಂಭವಿಸಿರಬಹುದು ಎಂದು ವರದಿಯಾಗಿದೆ.

ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ ಅಧ್ಯಯನ ಟ್ರಂಪ್ ರ ರ್ಯಾಲಿಗಳು ನಡೆದ ಸಮುದಾಯಗಳು ‘ರೋಗ ಮತ್ತು ಸಾವಿನ ವಿಷಯದಲ್ಲಿ ಹೆಚ್ಚಿನ ಬೆಲೆ ತೆತ್ತಿವೆ’ ಎಂದು ಹೇಳಿದೆ.

ಜೂನ್ 20 ರಿಂದ ಸೆಪ್ಟೆಂಬರ್ 22ರ ನಡುವೆ ಟ್ರಂಪ್ ನಡೆಸಿದ 18 ರ್ಯಾಲಿಗಳು ‘ಅಂತಿಮವಾಗಿ 30,000ಕ್ಕೂ ಹೆಚ್ಚು ಕೋವಿಡ್- 19 ಪ್ರಕರಣಗಳು ದೃಢಪಟ್ಟಿವೆ’ ಮತ್ತು ‘700ಕ್ಕೂ ಹೆಚ್ಚು ಸಾವಿಗೆ ಕಾರಣವಾಗಿರಬಹುದು’ ಎಂದು ಈ ಸಂಶೋಧನೆ ತಿಳಿಸಿದೆ.