ಮನಿಲಾ: ಮಧ್ಯ ಫಿಲಿಪ್ಪೈನ್ಸ್‍ನ ದ್ವೀಪ ಪ್ರಾಂತ್ಯವೊಂದರ ಗವರ್ನರ್, ರಾಯ್ ತೂಫಾನಿನಿಂದ ಕನಿಷ್ಠ ಪಕ್ಷ 49 ಜನರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ದೇಶಾದ್ಯಂತ ಈ ವರ್ಷದ ಅತಿ ಪ್ರಬಲ ತೂಫಾನಿಗೆ ಬಲಿಯಾದವರ ಸಂಖ್ಯೆ 100ಕ್ಕೆ ಏರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇತರ 10 ಜನರು ಕಣ್ಮರೆ ಯಾಗಿ, 13 ಮಂದಿ ಗಾಯಗೊಂಡಿದ್ದಾರೆ.
ವಿದ್ಯುಚ್ಛಕ್ತಿ ಕಡಿತಗೊಂಡಿರುವುದರಿಂದ ನೀರು ಪೂರಕೆ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಪ್ರಾಂತೀಯ ಮೇಯರ್‍ಗಳು ತ್ವರಿತವಾಗಿ ಆಹಾರ ಪೊಟ್ಟಣಗಳು ಮತ್ತು ಕುಡಿಯುವ ನೀರಿನ ಸಂಗ್ರಹಕ್ಕೆ ಆದ್ಯತೆ ಮೇರೆಗೆ ಹಣ ಖರ್ಚು ಮಾಡಬೇಕಿದೆ ಎಂದು ವರದಿಯಾಗಿದೆ.