Friday, 18th October 2024

130 ಜನರಿದ್ದ ದೋಣಿಗೆ ಬೆಂಕಿ: ಏಳು ಮಂದಿ ಸಾವು

ಮನಿಲಾ: ಈಶಾನ್ಯ ಫಿಲಿಪೈನ್ ಪ್ರಾಂತ್ಯವನ್ನು ಸಮೀಪಿಸುತ್ತಿರುವಾಗ 130 ಕ್ಕೂ ಹೆಚ್ಚು ಜನರಿದ್ದ ದೋಣಿ ಬೆಂಕಿಗೆ ಆಹುತಿ ಯಾಗಿದ್ದು, ಏಳು ಜನರು ಮೃತಪಟ್ಟಿದ್ದಾರೆ. ಹೆಚ್ಚಿನ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ.

ಪೊಲಿಲಿಯೊ ದ್ವೀಪದಿಂದ ಕ್ವಿಜಾನ್ ಪ್ರಾಂತ್ಯದ ರಿಯಲ್ ಟೌನ್‍ನ ಬಂದರು ಸಮೀಪಿಸು ತ್ತಿರುವಾಗ ಬೆಂಕಿ ಕಾಣಿಸಿಕೊಂಡಿತು. ಹಲವಾರು ಪ್ರಯಾಣಿಕರು ಮತ್ತು ಸಿಬ್ಬಂದಿ ನೀರಿಗೆ ಜಿಗಿಯಬೇಕಾಯಿತು ಎಂದು ಕೋಸ್ಟ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.

ಎಂಜಿನ್ ಕೊಠಡಿಯಿಂದ ಬೆಂಕಿ ಕಾಣಿಸಿಕೊಂಡಿದೆ ಅದು ಸಂಪೂರ್ಣ ದೋಣಿಗೆ ಅವರಿಸಿ ಸಟ್ಟ ಹೋಗಿದೆ ಎನ್ನಲಾಗಿದೆ, ಅವಶೇಷಗಳನ್ನು ದಡಕ್ಕೆ ಎಳೆಯಲಾಗಿದೆ.

ಗಾಯಗೊಂಡು ಬದುಕುಳಿದವರನ್ನು ಆಂಬ್ಯುಲೆನ್ಸ ಮೂಲಕ ಆಸ್ಪತ್ರೆಗೆ ಕರೆದೊಯ್ಯ ಲಾಯಿತು. ಪ್ರಸ್ತುತ 7 ಮಂದಿ ಮೃತ ಪಟ್ಟಿದ್ದು, 4 ಮಂದಿ ಕಣ್ಮರೆಯಾಗಿದ್ದಾರೆ.